Kalyan Jewellers India Limited - Articles

ನಿಮ್ಮ ಮುಂದಿನ ಗಮ್ಯಸ್ಥಾನದ ಮದುವೆಗೆ ಹೇಗೆ ಪ್ರವೇಶಿಸುವುದು!

Publisher: blog

ಮದುವೆಗೆಗಳು ಒಬ್ಬರ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಶಾಶ್ವತತೆಗಾಗಿ ಪ್ರೀತಿಪಾತ್ರರಾಗಿದ್ದೀರಿ, ನೀವು ಗರಿಷ್ಠವಾಗಿ ಮೋಹಕವಾಗಿ ಕಾಣುತ್ತೀರಿ. ನಿಮ್ಮ ಮದುವೆಯ ಗಮ್ಯಸ್ಥಾನ ನಿಮ್ಮಂತೆಯ ಭವ್ಯ ಹಾಗೂ ಶೈಲಿಯಲ್ಲಿದ್ದರೆ ಅದು ಸೂಕ್ತವಾಗಿರುತ್ತದೆ.  ಒಟ್ಟಿನಲ್ಲಿ ಅದೊಂದು ಜೀವನಾವಧಿಯಲ್ಲಿ ಒಂದೊಮ್ಮೆ ನಡೆಯುವ ಘಟನೆಯಾಗಿದೆ. ಆದ್ದರಿಂದ ಅದನ್ನು ಯಾಕೆ ನೀವು ಪರಿಪೂರ್ಣಗೊಳಿಸಬಾರದು?

ಎಲ್ಲಾ ಗಮ್ಯಸ್ಥಾನಗಳು ಒಂದೇ ರೀತಿಯಾಗಿರುವುದಿಲ್ಲ ಮತ್ತು ಎಲ್ಲಾ ವಧುಗಳೂ ಒಂದೇ ರೀತಿಯಿರುವುದಿಲ್ಲ. ನಿಮ್ಮ ಕನಸಿನ ಮದುವೆಯ ಬಗ್ಗೆ ನೀವು ಯೋಚಿಸಿದಾಗ ನಿಮ್ಮ ಮನಸಿಗೆ ಏನು ಬರುತ್ತದೆ. ಇದು ಅರಮನೆಯ ಆವರಣದಲ್ಲಿಯೇ ಅಥವಾ ಸಮುದ್ರದಲ್ಲಿಯೇ ಎಂದು ಯೋಚಿಸುವಿರಾ. ಭಾರತದ ಅಗ್ರ 5 ವಿವಾಹ ಸ್ಥಳಗಳಿಗೆ ಈ ಮಾರ್ಗದರ್ಶಿಯು ಈ ಸಂದರ್ಭಕ್ಕೆ ಸೂಕ್ತ ಸಾಮಗ್ರಿಗಳನ್ನು ಹುಡುಕಲು ನಿಮಗೆ ಸಹಕಾರಿಯಾಗಬಲ್ಲುದು.

ಗೋವಾ

ನಿಮ್ಮ ವರನು ನಿಮಗೆ ಮಂಗಳಸೂತ್ರ ಕಟ್ಟುತ್ತಿರುವುದನ್ನು ಊಹಿಸಿ, ಸೂರ್ಯನ ಚಿನ್ನದ ಕಿರಣಗಳು ಹಿಂಭಾಗದಲ್ಲಿ ಸಮುದ್ರಕ್ಕೆ ಮುತ್ತಿಡುವಂತಿದೆ ಎಂದು ಯೋಚಿಸಿ, ಅದೀಗ ತಪ್ಪಿಸಿಕೊಳ್ಳುವಂತಿದೆ. ನಿಮ್ಮ ದೊಡ್ಡ ಅಂತರಕ್ಕೆ ಸೂಕ್ತವಾದಂಗಿದೆ. ಮದುವೆಯ ಸುಂದರವಾದ ಯಾವುದೋ ನಾಂದಿಯನ್ನು ಅದು ಸೂಚಿಸುತ್ತದೆ ಹಾಗೆಯೇ ಅದರಂತೆ ಆಚರಣೆಗೆ ಅರ್ಹವಾಗಿದೆ. ಅದಕ್ಕೆ ಭಾರತದಲ್ಲಿ ಆಚರಣೆಯ ರಾಜಧಾನಿ ಗೋವಾಕ್ಕಿಂತ ಬೇರೆ ಯಾವುದೇ ಸ್ಥಳ ಸೂಕ್ತವಾಗಿಲ್ಲ.

ವಧುವಿನ ನೋಟದಂತಿರಲು ನಾವು ಉಡುಪಿನ ಮೇಲೆ ನೀಲಿಬಣ್ಣ ಅಥವಾ ಬಿಳಿ ಬಣ್ಣವನ್ನು ಧರಿಸಲು ಹಾಗೂಉ ಮಿನುಗುವ ವಜ್ರದ ತುಣುಕಗಳಂತೆ ಎದ್ದುಕಾಣುವ ಬಟ್ಟೆಗಳನ್ನು ನಾವು ಶಿಫಾರಸ್ಸು ಮಾಡುತ್ತೇವೆ. ವಜ್ರಗಳ ಹೊಳಪಿನೊಂದಿಗೆ ನೀಲಿಬಣ್ಣ ಅಥವಾ ಬಿಳಿಯ ವಿಶಿಷ್ಟ ಸಂಯೋಜನೆಯ ಗಮ್ಯಸ್ಥಾನದ ಪ್ರಾಚೀನ ಮತ್ತು ತಾರುಣ್ಯದ ಸ್ವಭಾವವನ್ನು ಆವರಿಸುವ ಉಡುಪನ್ನು ಸೃಷ್ಟಿಸುತ್ತದೆ.

ಉದಯ್‍ಪುರ್, ರಾಜಸ್ತಾನ್

ವಿವಾಹಗಳಿಗೆ ಉದಯಪುರವು ಅರ್ಹವಾದ ಭಾರತದ ಅತ್ಯಂತ ಗಮನಾರ್ಹ ಸ್ಥಳಗಳಲ್ಲಿ ಒಂದಾಗಿದೆ. ಸ್ಫಟಿಕ ಸರೋವರಗಳು ಮತ್ತು ಅಬ್ಬರದ ಅರಮನೆಗಳು ನಿಮ್ಮ ಜೀವನದ ಅತ್ಯಂತ ಶ್ರೇಷ್ಠ ದಿನಕ್ಕೆ ಸೊಗಸಾದ ಸೆಟ್ಟಿಂಗ್‍ನ್ನು ರಚಿಸಲು ಸಂಯೋಜನೆ ಮಾಡುತ್ತವೆ. ಅಸಾಧಾರಣವಾಗಿ ಉದಯಪುರವು ನಿಮ್ಮ ಮದುವೆಯ ಫೋಟೋ ಆಲ್ಬಂನ್ನು ಅಸಂಖ್ಯಾತ ಬಣ್ಣಗಳಲ್ಲಿ ಚಿತ್ರಿಸುವುದಂತೂ ಖಚಿತ.

ನಿಮ್ಮ ವಧುವಿನ ಆಭರಣಗಳೊಂದಿಗೆ ಉದಯಪುರದ ಅತ್ಯಾಧುನಿಕತೆಯ ಸೊಬಗನ್ನು ಹೊಂದಿಸಲು ನಾವು ಶಿಫಾರಸ್ಸು ಮಾಡುತ್ತೇವೆ. ಹೆಚ್ಚು ಅಲಂಕಾರಿಕವಾದ ಅರ್ಧ ಚೋಕರ, ರಾಮ್‍ನವಮಿ ನೆಕ್ಲೆಸ್ ಮತ್ತು ಕಲಾತ್ಮಕವಾದ ಮತ್ತು ಮೋಹಕ ಪೋಲ್ಕಿಯೊಂದಿಗಿನ ಪೋಚಿ ಬ್ರಾಸ್ಲೆಟ್ ಅಥವಾ ಪನಾಚೆ ಮತ್ತು ಚಿಕ್ ಮಿಶ್ರಿತ ಹೊಳೆಯುವ ಮೀನಕರಿ ಸ್ಟೇಟ್‍ಮೆಂಟ್ ತುಣುಕಗಳೊಂದಿಗೆ ಬೆರೆಸಿದ ಪೋಚಿಯಂತಹ ಆಭರಣಗಳನ್ನು ಧರಿಸುವ ಮೂಲಕ ನಿಮ್ಮ ರಾಜ್ಯದ ರಾಣಿಯಂತಿರಿ. ಈ ಆಭರಣಗಳೊಂದಿಗೆ ಸಾಂಪ್ರದಾಯಿಕ ಲೆಹಂಗಾ ಧರಿಸುವುದರೊಂದಿಗೆ ಪರಿಪೂರ್ಣ ನೋಟದಿಂದ ಕಂಗೊಳಿಸಿರಿ.

ರಿಷಿಕೇಶ್ ಉತ್ತರಾಖಂಡ್

ಕೆಲವರು ಅದ್ಧೂರಿ ಅಥವಾ ಬಿಡುವಿಲ್ಲದ ವಿವಾಹವನ್ನು ಬಯಸುತ್ತಾರೆ, ಅನೇಕರು ಶಾಂತಿಯುತ, ನಿರಾಳ ಮತ್ತು ಆಳವಾದ ಆಧ್ಯಾತ್ಮಿಕ ಸೆಟ್ಟಿಂಗ್‍ಗಳನ್ನು ಆರಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ರಿಷಿಕೇಶ ಭಾರತದಲ್ಲಿ ಒಂದು ಜನಪ್ರಿಯ ವಿವಾಹ ತಾಣವಾಗಿದೆ. ಇಲ್ಲಿ ದೂರದ ಚಿಮ್ಮಿಂಗ್ ಬೆಲ್‍ಗಳ ಮೋಡಿ ಹಾಗೂ ದೂರದಿಂದ ಕೇಳಿಬರುವ ಸ್ತ್ರೋತ್ರ ಮಂತ್ರಗಳ ಪಿಸುಗುಡುವಿಕೆಯ ಪದಗಳು ಗಾಳಿಯಲ್ಲಿ ಪ್ರಶಾಂತವಾಗಿ ಮಾಂತ್ರಿಕ ಮೋಡಿಗೆ ನ್ಯಾಯ ಸಲ್ಲಿಸಲು ವಿಫಲಗೊಂಡಿವೆ.

 ಸ್ಟೈಲಿಂಗ್‍ಗಾಗಿ ನಿಮ್ಮ ಸೆಟ್ಟಿಂಗ್‍ನ್ನು ಸಾಂಪ್ರದಾಯಿಕ ಮಾರ್ಗದಲ್ಲಿ ಹೋಗುವ ಮೂಲಕ ಸರಿಹೊಂದಿಸಿ. ಸಾಂಪ್ರದಾಯಿಕ ವಧುವಿನ ಉಡುಪನ್ನು ಗುಲಾಬಿ ಮತ್ತು ಕೆಂಪುಬಣ್ಣಗಳಿಂದ ಒಳಗೊಂಡಿರುವಂತೆ ಆಯ್ಕೆ ಮಾಡಿ ಹಾಗೆಯೇ ದೇವಾಲಯ ಆಭರಣಗಳು ಮತ್ತು ಸಂಕೀರ್ಣ ರೀತಿಯಲ್ಲಿ ರಚಿಸಲಾದ ದೇವರ ಮತ್ತು ದೇವಿಯ ಸಂಕೇತಗಳು ಅವರ ಮಾಂತ್ರಿಕ ಕಥೆಗಳನ್ನು ಕೊರೆದಿರುವ ಆಭರಣ ತುಣುಕನು ಧರಿಸಿರಿ.

ಅಂಡಮಾನ್ಸ್

ಅಂಡಮಾನ್ ನ ನೀಲಿ ಮತ್ತು ಸ್ಪಷ್ಟ ಹಾಗೂ ಪ್ರಶಾಂತವಾದ ನೀರು ನಿಮ್ಮನ್ನು ಸ್ವಾಗತಿಸುತ್ತಿದ್ದಂತೆಯೇ ನೀವು ಮುಖ್ಯಭೂಭಾಗದ ಸದ್ದಿನಿಂದ ತಪ್ಪಿಸಿಕೊಳ್ಳಿರಿ. ಆಕಾಶ, ಸಮುದ್ರ ಮತ್ತು ಮರಳಿನ ಸಮ್ಮುಖದಲ್ಲಿ ನಿಮ್ಮ ಸುಂದರ ಒಕ್ಕೂಟವನ್ನು ಅವಲೋಕಿಸಲು ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಒಟ್ಟುಗೂಡಿಸಿ ನಿಮ್ಮ ಪ್ರತಿಜ್ಞೆಗಳನ್ನು ವಿನಿಮಯಿಸಿಕೊಳ್ಳಿರಿ.

ನಿಮ್ಮ ಮದುವೆಯ ಸಮಾರಂಭಕ್ಕೆ ಮುತ್ತು ಮತ್ತು ಪ್ಲಾಟಿನಂ ತುಣುಕುಗಳನ್ನು ಸೇರಿಸಲು ಹಾಗೂ ಗಾಢ ಹಸಿರು ಅಥವಾ ನವಿಲು ಬಣ್ಣದ ನೀಲಿ ಸೀರೆ ಅಥವ ಗೌನ್ ಧರಿಸಲು ನಾವು ನಿಮಗೆ ಶಿಫಾರಸ್ಸು ಮಾಡುತ್ತೇವೆ. ಈ ಮೋಜಿನ ಆದರೆ ಸೊಗಸಾದ ಸಂಯೋಜನೆಯು ಅಂಡಮಾನ್‍ನ ಉಷ್ಣವಲಯದ ಸಾರವನ್ನು ಸೆರೆಹಿಡಿಯುತ್ತದೆ. ಮದುವೆಯ ಆಭರಣಗಳ ಆಯ್ಕೆಯ ಜತೆಗೆ ಈ ಸಂಯೋಜನೆ ನಿಮ್ಮ ಫೋಟೋಗಳನ್ನು ನೀವು ನೋಡಿದಾಗ ಬೆರಗುಗೊಳ್ಳುವಂತೆ ಮಾಡುತ್ತದೆ.

ಜಿಮ್ ಕಾರ್ಬೆಟ್ ಉತ್ತರಾಖಂಡ್

ಜಿಮ್ ಕಾರ್ಬೆಟ್‍ಅತೀ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವ ಕಡಿಮೆ ವೆಚ್ಚದ ವಿವಾಹ ತಾಣವಾಗಿದೆ. ಹಸಿರು ಮತ್ತು ಸೊಂಪಾದ ವೃಕ್ಷರಾಶಿಯು ನಿಮ್ಮ ವಿವಾಹ ಮತ್ತು ಅದರ ಫೋಟೋಶೂಟಿಂಗ್‍ಗೆ ನಿಜವಾದ ಆಕರ್ಷಕ ಸ್ಥಳವನ್ನು ಒದಗಿಸುತ್ತದೆ. ಹಿಮಾಲಯದ ಹಸಿರು ಪಟ್ಟಿಯಲ್ಲಿ ನೆಲೆಸಿರುವ ಈ ಹಸಿರು, ಗುಡ್ಡಗಾಡು ತಾಣ ನಿಮಗೆ ವಿಶಿಷ್ಠ ಮದುವೆಯ ಸುಂದರ ಅನುಭವನ್ನು ನೀಡುತ್ತದೆ.

ಗಾಢ ಹಸಿರು, ನೀಲಮಣಿ ಮತ್ತು ಮಾಣಿಕ್ಯಗಳಂತಹ ಬಣ್ಣ ಬಣ್ಣದ ರತ್ನದ ಹರಳನ್ನು ಧರಿಸಿರುವ ಬಣ್ಣಗಳ ಕೆಲಿಡೋಸ್ಕೋಪಿಕ್ ಮಿಶ್ರಣ ಧರಿಸಿ ನಿಮ್ಮ ವಿಶೇಷ ದಿನದಂದುನೀವು ಹಸಿರು ಸಾಗರದಲ್ಲಿ ಮಿನುಗುವ, ಕಾಂತಿಯುತವಾಗಿ ಹೊಳೆಯುವ ಪ್ರಕೃತಿ ರಾಶಿಯ ರೋಮಾಂಚಕ ಸ್ಥಳದಲ್ಲಿ ನಿಂತಂತೆ ಕಂಗೊಳಿಸುವಿರಿ. ತೆಹ್ರಿನಾಥ್ ಮೂಗುತಿ ಮತ್ತು ಪಹುಂಚಿ ಬಳೆಗಳಂತಹ ಸಾಂಪ್ರದಾಯಿಕ ಸ್ಥಳೀಯ ವಿವಾಹದ ತುಣುಕುಗಳೊಂದಿಗೆ ಡ್ಯಾಶಿಂಗ್ ಹರಳುಗಳಿಂದ ಜೋಡಿತ ಆಭರಣಗಳೊಂದಿಗೆ ಕಂಗೊಳಿಸಿರಿ.

ಹಾಗಿದ್ರೆ ನೀವು ನಿಮ್ಮ ಮದುವೆಗೆ ಯಾವ ತಾಣ ಮತ್ತು ನೋಟವನ್ನು ಆರಿಸುತ್ತೀರಿ? ಭವಿಷ್ಯದ ಉಲ್ಲೇಖಕ್ಕಾಗಿ ಈ ಪುಟವನ್ನು ಬುಕ್ ಮಾರ್ಕ್ ಮಾಡಲು ಮರೆಯದಿರಿ.