Kalyan Jewellers India Limited - Articles

ಆಭರಣಗಳ ಶೈಲಿಗಳಿಗೆ ಒಂದು ಅತ್ಯುನತ ಮಾರ್ಗದರ್ಶಿ

Publisher: blog

2023 ರಲ್ಲಿ ಆಭರಣ ಶೈಲಿಗಳು ಅವುಗಳ ವಿಧಗಳಷ್ಟೇ ಪ್ರಮಾಣದಷ್ಟೇ ಹೇರಳವಾಗಿವೆ. ಇದು ಹೇರಳ ಆಯ್ಕೆಗಳಿಗೆ ಸಮನಾಗಿರುತ್ತದೆಯಲ್ಲದೇ ಇದು ಅಗಾಧವಾಗಿರುತ್ತದೆ. ಆದರೆ ಭಯಪಡಬೇಡಿ! ಆಭರಣಗಳ ಶೈಲಿಗಳಿಗಾಗಿ ಅಗಾಧವಾದ ಮಾರ್ಗದರ್ಶಿಯಿಲ್ಲಿದೆ.

ಸಾಂಪ್ರದಾಯಿಕ ಆಭರಣ

ಸಾಂಪ್ರದಾಯಿಕ ಆಭರಣಗಳು ಭಾರತದಲ್ಲಿ ಐತಿಹಾಸಿಕವಾಗಿ ಮಾಡಿದ ವಿವಿಧ ಆಭರಣ ಶೈಲಿಗಳ ವಿಶಾಲ ವರ್ಗಕ್ಕೆ ನೀಡಲಾದ ಅಡ್ಡ ಹೆಸರಾಗಿದೆ. ಸಾಂಪ್ರದಾಯಿಕ ಆಭರಣವು ಎಥ್ನಿಕ್ ಬಟ್ಟೆಗಳಿಗೆ ಒಂದು ಪರಿಪೂರ್ಣ ಆಯ್ಕೆಯಾಗಿದೆ. ಹಾಗೆಯೇ ಪಾಶ್ಮಿಮಾತ್ಯ ಮತ್ತು ಐತಿಹಾಸಿಕ ವಿಶಿಷ್ಟ ಮಿಶ್ರಣ ರಚಿಸಲು ಆಧುನಿಕ ಬಟ್ಟೆಗಳೊಂದಿಗೂ ಇದನ್ನು ಧರಿಸಬಹುದಾಗಿದೆ. ಹೆಚ್ಚಿನ ಸಾಂಪ್ರದಾಯಿಕ ಆಭರಣಗಳು ಹೆಚ್ಚಿನ ಶ್ರೀಮಂತ ವ್ಯಕ್ತಿತ್ವವನ್ನು ಹೊಂದಿವೆ.


ಈ ವರ್ಗದಲ್ಲಿ ಬಿರುವ ಪ್ರಮುಖ ಶೈಲಿಗಳೆಂದರೆ ಇವುಗಳಾಗಿವೆ:-


ಕುಂದನ್

“ಕುಂದನ್” ಪದದ ಅರ್ಥ ಶುದ್ಧ ಚಿನ್ನ. ಈ ವಿಸ್ತಾರವಾದ ಆಭರಣ ಶೈಲಿಯು ಕಲ್ಲನ್ನು ಅದರ ಮೌಂಟ್‍ಗೆ ಚಿನ್ನದ ಹಾಳೆಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಆಭರಣ ವಿನ್ಯಾಸವು ಭವ್ಯ ಪ್ರವೇಶದ ಅಗತ್ಯ ಸಂದರ್ಭಗಳಲ್ಲಿ ಅಥವಾ ನೀವು ಆಕರ್ಷಣೆಯ ಕೇಂದ್ರವಾಗಲು ಬಯಸಿದರೆ ಇದು ಸೂಕ್ತವಾಗಿದೆ. ಕುಂದನ್ ಆಭರಣದಲ್ಲಿ ಉತ್ತಮವಾದ ಪಾಲಿಶ್ ಮತ್ತು ಪಾಲಿಶ್ ಇಲ್ಲದ ರತ್ನದ ಹರಳುಗಳ ಮಿಶ್ರಣವನ್ನು ಸಮರೂಪತೆ ಅಥವಾ ಅಸಮರೂಪತೆಯಲ್ಲಿ ಜೋಡಿಸಿ ಒಂದು ವಿಶಿಷ್ಠ ಅದ್ಭುತ ಆಭರಣವನ್ನು ಮಾಡಲಾಗುತ್ತದೆ. ಈ ಆಭರಣದ ಹಿಂಭಾಗದಲ್ಲಿ ಸುಂದರವಾದ ಕಲಾಕೃತಿಯನ್ನು ಕೂಡ ರಚಿಸಲಾಗಿರುತ್ತದೆ.


ಪೋಲ್ಕಿ  

ಪೋಲ್ಕಿ ತುಣುಕುಗಳು ಕುಂದನ್‍ನಂತೆ ಹೋಲುತ್ತವೆಯಾದರೂ, ಇವು ವಿಶೇಷವಾಗಿ ಅಮೂಲ್ಯ ಹರಳುಗಳಾಗಿವೆ. ವಜ್ರಗಳು ಪೂರ್ವ ಪ್ರಾಬಲ್ಯತೆ ಹೊಂದಿದರೂ, ನೀವು ಸಾಂದರ್ಭಿಕ ಬಣ್ಣದ ಕಲ್ಲುಗಳನ್ನು ಸೇರಿಸಿ ಇದಕ್ಕೆ ವರ್ಣರಂಜಿತ ಬಣ್ಣವನ್ನು ತುಂಬಬಹುದಾಗಿದೆ. ಪೋಲ್ಕಿ ಆಭರಣವನ್ನು ಉತ್ತಮ ರೀತಿಯಲ್ಲಿ ರಚಿಸಲಾಗುತ್ತದೆ ಮತ್ತು ಅದು ರಾಜೋಚಿತವಾಗಿ ಕಾಣುವುದಲ್ಲದೇ ಅತೀ ಸುಂದರವಾಗಿ ಕಾಣುತ್ತದೆ. ಅವುಗಳು ವಿವಾಹ ಸಂದರ್ಭಗಳಲ್ಲಿ ಧರಿಸಲು ಮತ್ತು ಡ್ರೆಸ್‍ಗಳಿಗೆ ಧರಿಸಲು ಯೋಗ್ಯವಾಗಿವೆ.


ಫಿಲಿಗ್ರಿ (ಜಾಲರಿ)

ಫಿಲಿಗ್ರಿ ಎಂಬುದು ವಿಶಿಷ್ಟ ಹಾಗೂ ಕಾಲಾತೀತ ಅಂದ ನೀಡಲು ಹರಳು ಮತ್ತು ಅಮೂಲ್ಯ ಲೋಹದ ಪಟ್ಟಿಗಳನ್ನೊಳಗೊಂಡಿರುವ ಸಂಕೀರ್ಣ ವಿನ್ಯಾಸವಾಗಿದೆ. ಇವು ಅತ್ಯಂತ ಮೂಲಸ್ವರೂಪದ ಬಟ್ಟೆಗಳನ್ನು ಹೆಚ್ಚಿನ ಶೈಲಿ ಮತ್ತು ಸೊಬಗಿನಿಂದ ಕಾಣುವಂತೆ ಮಾಡುತ್ತವೆ. ನೀವಾಗಿಯೇ ಈ ಕೆಲಸವನ್ನು ಮೆಚ್ಚುವಿರಲ್ಲದೇ ಅನೇಕ ಜಟಿಲ ವಿನ್ಯಾಸಗಳನ್ನು ಕೂಡ ಇಷ್ಟಪಡುವಿರಿ.


ಆಂಟಿಕ್  

ಪ್ರಾಚೀನ ಆಭರಣದ ತುಣುಕುಗಳಾದ ಅಮೂಲ್ಯ ಲೋಹಗಳಿಗೆ ಬ್ರಶ್ಡ್ ಮೆರುಗು ನೀಡಿದಾಗ ಅವಗಳು ಡ್ರೆಸ್ ಹಾಗೂ ಎಥ್ನಿಕ್ ವೇರ್‍ಗೆ ಅಂದದ ಸೊಬಗು ನೀಡಿ ಪರಿಪೂರ್ಣ ಮೆರುಗು ನೀಡುವುದು. ಈ ವಿಶಿಷ್ಟ ಫಿನಿಶ್ ನಿಮ್ಮ ಆಭರಣ ತುಣುಕುಗಳಿಗೆ ಹೊಸ ಶೈಲಿಯ ಅಂದವನ್ನು ನೀಡುತ್ತದೆ. ಈ ಆಂಟಿಕ್ ತುಣುಕುಗಳಲ್ಲಿ ದೇವರ ಮತ್ತು ದೇವಿಯರ ಪರಿಕಲ್ಪನೆಯ ಚಿತ್ರಣಗಳಿರುತ್ತವೆ ಆದರೆ ಇದು ವರ್ಗೀಕರಣಕ್ಕೆ ಐಚ್ಛಿಕವಾಗಿರುತ್ತದೆ.

 

 ಟೆಂಪಲ್

ದೇವಾಲಯದ ಆಭರಣಗಳು ಅಂದರೆ ದೇವರು, ದೇವಿಯರು ಮತ್ತು ಇತರ ಧಾರ್ಮಿಕ ಸಂಕೇತಗಳನ್ನೊಳಗೊಂಡಿರುವ ತುಣುಕುಗಳನ್ನು ಉಲ್ಲೇಖಿಸುತ್ತದೆ. ಈ ತುಣುಕುಗಳನ್ನು ಹಳದಿ ಚಿನ್ನ ಅಥವಾ ಬ್ರಶ್ಡ್ ಫಿನಿಶ್‍ನಿಂದ ರಚಿಸಲಾಗಿರುತ್ತದೆ. ಎಥ್ನಿಕ್ ವೇರ್‍ನೊಂದಿಗೆ ಧರಿಸುವುದು ಉತ್ತಮ, ದೇವಾಲಯದ ಆಭರಣಗಳು ವಿವಾಹ ಸಂದರ್ಭದಲ್ಲಿ ಮತ್ತು ಶುಭಕಾರ್ಯಗಳಲ್ಲಿ ಧರಿಸಲು ಪರಿಪೂರ್ಣ ಮತ್ತು ತುಂಬಾ ಸೂಕ್ತವಾಗಿದೆ.


ಆಧುನಿಕ ಆಭರಣ

ಆಧುನಿಕ ಆಭರಣಗಳು ಇತ್ತೀಚಿಗೆ ಬೆಳಕಿಗೆ ಬಂದ ಅಥವಾ ವಿದೇಶಿ ಸಂಸ್ಕøತಿ ಮತ್ತು ವಿದೇಶದಿಂದ ನಾವು ಪಡೆದುಕೊಂಡ ಆಭರಣ ಶೈಲಿಗೆ ನೀಡಿರುವ ವಿಶಾಲ ವರ್ಗೀಕರಣವಾಗಿದೆ.


ಆಧುನಿಕ ಆಭರಣಗಳಡಿಯಲ್ಲಿ ಒಳಗೊಂಡಿರುವ ಶೈಲಿಗಳು:-


ಸಮಕಾಲೀನ ಆಭರಣ  

ಸಮಕಾಲೀನ ಆಭರಣಗಳೆಂದರೆ ವಿನ್ಯಾಸದಲ್ಲಿ ನಿರೀಕ್ಷಿತ ಅಚ್ಚುಗಳನ್ನು ಹೊಂದಿರುವ ತುಣುಕುಳಾಗಿವೆ. ಇದು ಸಂಪ್ರದಾಯಗಳನ್ನು ಮೀರಿದ ವಿನ್ಯಾಸವಾಗಿದ್ದು ಬೆರಗುಗೊಳಿಸುವಂತಿದೆ. ಇದು ಆಧುನಿಕ ಡ್ರೆಸ್‍ಗಳು ಮತ್ತು ಕುರ್ತಿಗಳಂತಹ ನಿರ್ದಿಷ್ಟ ಸಾಂಪ್ರದಾಯಿಕ ಡ್ರೆಸ್‍ಗಳಿಗೆ ಸೂಕ್ತವಾಗಿರುತ್ತದೆ.


ಕಲಾತ್ಮಕ

ಕಲಾತ್ಮಕ ಆಭರಣಗಳು ಕುಶಲಕರ್ಮಿಗಳಿಗೆ ವಿನ್ಯಾಸ ಮತ್ತು ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವ ತುಣುಕನ್ನು ಉಲ್ಲೇಖಿಸುತ್ತದೆ. ಈ ತುಣುಕುಗಳು ನಿರ್ದಿಷ್ಟ ಪೆಟ್ಟಿಗೆಗಳಲ್ಲಿ ಜೋಡಿಸಲು ಕಷ್ಟಕರವಾಗಿದೆ  ಮತ್ತು  ಇವುಗಳು ಶುದ್ಧತೆಯ ಒಂದು ಅಭಿವ್ಯಕ್ತಿ ರೂಪವಾಗಿದೆ. ಕಲಾತ್ಮಕ ಕೃತಿಗಳೊಂದಿಗೆ ಯಾವುದೇ ಉಡುಪು ಧರಿಸಬಹುದಾಗಿದೆ.  ಆಭರಣಗಳಂತೆಯೇ ಈ ಹೋಲಿಕೆಯು ಸೃಜನಶೀಲ ಅಭಿವ್ಯಕ್ತಿಯ ಹುಡುಕಾಟದ ಎಲ್ಲಾ ಮಾನದಂಡಗಳನ್ನು ಮೀರುತ್ತದೆ.   


ಮಿನಿಮಿಲಸ್ಟಿಕ್ /ಕನಿಷ್ಠ  

‘ಕಡಿಮೆಯೇ ಹೆಚ್ಚು’ ಎನ್ನುವ ತತ್ತ್ವದ ಮೂಲಕ ವಿನ್ಯಾಸಿಸಲಾದ ಈ ಕನಿಷ್ಠ ತುಣುಕುಗಳು ಅಮೂಲ್ಯ ಲೋಹಗಳ ಬಹು ಬಣ್ಣಗಳಲ್ಲಿ ಲಭ್ಯವಿವೆ ಮತ್ತು ರತ್ನದ ಕಲ್ಲುಗಳನ್ನು ಹೊಂದಿರಬಹುದು ಅಥವಾ ಹೊಂದಿಲ್ಲದೇ ಇರಬಹುದು. ಸರಳ ಆಭರಣ ಆದರೆ ತುಂಬಾ ಆಕರ್ಷಕ ಗುಣದ ಉಡುಪುಗಳೊಂದಿಗೆ ಧರಿಸುವುದರಿಂದ ಹೊಳಪಿನ ಅಂದ ಲಭಿಸುತ್ತದೆ. ಇದನ್ನು ತುಂಬಾ ಚಾಕಚಕ್ಯತೆಯಿಂದ ಬಳಸಿದಾಗ ಕನಿಷ್ಟ ವಾಡ್ರ್ರೋಬ್‍ಗೆ ಎವರ್‍ಗ್ರೀನ್ ನೋಟವನ್ನು ನೀಡಬಹುದು.

ಈಗ ಅಗತ್ಯ ಜ್ಞಾನದಿಂದ ಸಜ್ಜುಗೊಂಡು ನೀವು ಸ್ವಯಂ ಶೈಲಿಯ ರಚನೆಗಾಗಿ ಮಿಶ್ರ ಮತ್ತು ಹೊಂದಾಣಿಕೆಯೊಂದಿಗೆ ನಿಮ್ಮೊಂದಿಗೆ ಅನುರಣಿಸುವ ಶೈಲಿ ಬಳಸಲು ಪ್ರಯತ್ನಿಸುವ ಸರದಿ ನಿಮ್ಮದಾಗಿದೆ.