Kalyan Jewellers India Limited - Articles

ಪರಿಪೂರ್ಣ ಉಂಗುರ ಹುಡುಕುವುದಕ್ಕೆ ಸಮಗ್ರ ಮಾರ್ಗದರ್ಶಿ

Publisher: blog

ನಿಮಗೆ ಯಾರೋ ನೀಡುವ ಉಡುಗೊರೆಯಾಗಲಿ ಅಥವಾ ನೀವು ಯಾರಿಗಾದರೂ ಉಡುಗೊರೆ ನೀಡುವುದೇ ಆಗಿರಲಿ, ಉಂಗುರ ಎಂದಿಗೂ ಒಂದು ಭಾವನಾತ್ಮಕ ಮೌಲ್ಯವನ್ನು ಹೊಂದಿರುತ್ತದೆ. ಹೀಗಾಗಿ, ರಿಂಗ್‌ ನಿಮ್ಮ ಸ್ಟೈಲ್‌ಗೆ ಹೊಂದುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

 

ಸರಿಯಾದ ರಿಂಗ್ ಅಳೆಯುವುದು ಹೇಗೆ

ರಿಂಗ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡುವಾಗ ತಪ್ಪಾದ ಗಾತ್ರದ ರಿಂಗ್‌ ಆಯ್ಕೆ ಮಾಡುವ ಅಪಾಯ ಎಂದಿಗೂ ಇರುತ್ತದೆ. ಆದರೆ, ಭಾರತದಲ್ಲಿ ಎಲ್ಲ ಆಭರಣಕಾರರೂ ಒಂದಷ್ಟು ಗಾತ್ರಗಳ ಮಾನದಂಡವನ್ನು ಅನುಸರಿಸುತ್ತಾರೆ. ಸಂಪೂರ್ಣ ಸೈಜ್‌ಗಳ ಪಟ್ಟಿಯನ್ನು ನೋಡಲು 'ಭಾರತ ರಿಂಗ್ ಸೈಜ್ ಚಾರ್ಟ್‌' ಹುಡುಕಿ. ಈ ಚಾರ್ಟ್‌ಗಳು ನಿಮ್ಮ ಕೈ ಬೆರಳುಗಳ ಸುತ್ತಳತೆಯನ್ನು ಆಧರಿಸಿರುತ್ತವೆ.

 

ನಿಮ್ಮ ಬೆರಳಿನ ಸುತ್ತಳತೆಯನ್ನು ಅಳೆಯಲು ಅಳೆಯುವ ಟೇಪ್‌ ತೆಗೆದುಕೊಳ್ಳಿ ಮತ್ತು ಬೆರಳಿನ ಸುತ್ತ ಸುತ್ತಿ. ಟೇಪ್‌ನಲ್ಲಿ ಕಾಣಿಸುವ ಸಂಖ್ಯೆಯೇ ನಿಮ್ಮ ಬೆರಳಿನ ಅಳತೆಯಾಗಿರುತ್ತದೆ. ನಿಮ್ಮ ಬಳಿ ಅಳೆಯುವ ಟೇಪ್‌ ಇಲ್ಲದಿದ್ದರೆ ಒಂದು ದಾರವಾದರೂ ಸಾಕು. ದಾರವನ್ನು ಹಾಗೆಯೇ ಸುತ್ತಿಕೊಳ್ಳಿ. ಎರಡೂ ದಾರಗಳು ಸಂಧಿಸುವ ಸ್ಥಳದಲ್ಲಿ ಗುರುತು ಹಾಕಿಕೊಳ್ಳಿ. ಇದನ್ನು ನಂತರ ರೂಲರ್‌ ಗೆ ಸಮಾನವಾಗಿ ಇಟ್ಟು ಅಳತೆ ನೋಡಿಕೊಳ್ಳಿ.

 

ಹೆಚ್ಚುವರಿ ಸಲಹೆ: ನೀವು ಬಳಸುತ್ತಿರುವ ಚಾರ್ಟ್‌ ಡಯಾಮೀಟರ್‌ನದ್ದಾದರೆ, ಡಯಾಮೀಟರ್‌ ಸಂಖ್ಯೆಯನ್ನು ಪಡೆಯುವುದಕ್ಕೆ ನೀವು ಮಾಡಿದ ಅಳತೆಯ ಸಂಖ್ಯೆಯನ್ನು 3.14 ರಿಂದ ಭಾಗಿಸಿ.

 

ಈಗ ನಿಮಗೆ ಸರಿಯಾದ ಅಳತೆ ಮತ್ತು ರಿಂಗ್‌ನ ಗಾತ್ರ ಸಿಕ್ಕಿದೆ. ನಿಮಗೆ ಸೂಕ್ತವಾದದ್ದನ್ನು ಆಯ್ಕೆ ಮಾಡುವ ಸಮಯ ಇದು!

ಮೊದಲು, ರಿಂಗ್‌ನ ಸ್ಟೈಲ್‌ ಅನ್ನು ಆಯ್ಕೆ ಮಾಡಿಕೊಳ್ಳಿ. ಯಾವ ಲೋಹದ ರಿಂಗ್‌ ಆಗಿರಬೇಕು, ಸ್ಟೋನ್ ಇರಬೇಕೆ ಎಂದು ಖಚಿತಪಡಿಸಿಕೊಳ್ಳಿ. ಹೌದು ಎಂದಾದರೆ, ಯಾವ ಬಣ್ಣದ ಸ್ಟೋನ್‌ ಆಗಿರಬೇಕು? ವಜ್ರ ಆಗಿರಬೇಕೆ ಎಂದು ಕೇಳಿಕೊಳ್ಳಿ.

 

ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕ ನಂತರ, ಮಹತ್ವದ ಭಾಗಕ್ಕೆ ನಾವು ಕಾಲಿಡುತ್ತೇವೆ. ಅದು, ರಿಂಗ್‌ನ ವಿನ್ಯಾಸ. ಈ ಕೆಳಗಿನ ಯಾವ ಜನಪ್ರಿಯ ಸ್ಟೈಲ್‌ ಅನ್ನು ನೀವು ಆಯ್ಕೆ ಮಾಡಿಕೊಳ್ಳುತ್ತೀರಿ?

 

ಸಾಂಪ್ರದಾಯಿಕ ಸಾಲಿಟೇರ್

ಸಾಂಪ್ರದಾಯಿಕ ಸಾಲಿಟೇರ್‌ ಸರಳವಾದ ಹಾಗೂ ಕಾಲಾತೀತ ವಿನ್ಯಾಸವಾಗಿದ್ದು, ಇದರ ಆಯ್ಕೆ ಎಂದಿಗೂ ತಪ್ಪಾಗುವುದಿಲ್ಲ.

 

ಫ್ರೀ ಫಾರ್ಮ್‌

ಫ್ರೀ ಫಾರ್ಮ್‌ ರಿಂಗ್‌ಗಳು ಸಾಂಪ್ರದಾಯಿಕ ಸಿಲ್ಹೊಟೆ ರಿಂಗ್‌ಗಳ ವಿಧಾನಕ್ಕಿಂತ ವಿಭಿನ್ನವಾಗಿ ಆವಂಟ್‌ ಗ್ರೇಡ್ ಆಯ್ಕೆಯನ್ನು ನೀಡುತ್ತವೆ.

 

ಸ್ಪ್ಲಿಟ್

ಸ್ಪ್ಲಿಟ್‌ ರಿಂಗ್‌ಗಳೆಂದರೆ ಶಾಂಕ್‌ಗಳು ಬೇರೆಯಾಗಿರುತ್ತವೆ ಮತ್ತು ಮಧ್ಯದ ಸ್ಟೋನ್‌ ಅದನ್ನು ಸೇರಿಸುತ್ತವೆ. ಇದರಿಂದ ವಿಶಿಷ್ಟ ಲುಕ್ ಸಿಗುತ್ತದೆ.

 

ಬ್ಯಾಂಡ್‌ಗಳು

ಬ್ಯಾಂಡ್‌ಗಳು ಸರಳವಾಗಿರಬಹುದು ಅಥವಾ ಆಕರ್ಷಕವಾಗಿಯೂ ಇರಬಹುದು. ಇವು ಚಾನೆಲ್ ಸೆಟ್ ವಜ್ರಗಳನ್ನೂ ಒಳಗೊಂಡಿರಬಹುದು. ಹೇಗೇ ಇದ್ದರೂ ಅವು ಕಣ್ಸೆಳೆಯುವಂತಿರುತ್ತವೆ!

 

ಬೈಪಾಸ್

ಬೈಪಾಸ್‌ ರಿಂಗ್‌ಗಳಲ್ಲಿ ಎರಡೂ ಕಡೆಗಳಲ್ಲಿ ಸ್ಟೋನ್‌ಗಳ ಸುತ್ತ ಶಾಂಕ್‌ಗಳು ಸುತ್ತಿರುತ್ತವೆ. ಇವು ಉತ್ತಮ ಹರಿವು ಮತ್ತು ಹೊಳಪನ್ನೂ ಹೊಂದಿರುತ್ತವೆ.

 

ಹೊಳಪು

ನಮ್ಮ ನರ್ತಿಸುವ ಸ್ಟೋನ್‌ಗಳ ಸಿಗ್ನೇಚರ್ ಕಲೆಕ್ಷನ್‌ ನಿಮ್ಮ ಆಕರ್ಷಣೆಗೆ ಹೊಸ ಸ್ಪರ್ಶವನ್ನು ನೀಡುತ್ತವೆ.

ಈ ರಿಂಗ್‌ಗಳ ಸ್ಟೈಲ್‌ಗಳ ಪೈಕಿ ಯಾವುದನ್ನು ಈ ಬಾರಿ ಉಡುಗೊರೆ ನೀಡುತ್ತೀರಿ?