Kalyan Jewellers India Limited - Articles

ಸಂಕ್ರಾಂತಿಯ ಸುಗ್ಗಿ

Publisher: blog

ಸಂಕ್ರಾಂತಿ ಎಂಬುದು ದಕ್ಷಿಣ ಕರ್ನಾಟಕದಾದ್ಯಂತ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಸುಗ್ಗಿಯ ಹಬ್ಬ. ಫಸಲಿನ ದೇವರನ್ನು ಮೆಚ್ಚಿಸುವ ಹಬ್ಬ ಇದು. ಈ ಸಮಯದಲ್ಲಿ ಹಲವು ಸಂಪ್ರದಾಯಗಳನ್ನು ವಿವಿಧ ಭಾಗದ ಜನರು ಆಚರಿಸುತ್ತಾರೆ. ಈ ಪೈಕಿ ಸಾಂಪ್ರದಾಯಿಕ ಚಿನ್ನದ ಆಭರಣ ಧರಿಸುವುದು ಮತ್ತು ಚಿನ್ನ ಮತ್ತು ಬೆಳ್ಳಿಯನ್ನು ಪ್ರೀತಿಪಾತ್ರರಿಗೆ ಉಡುಗೊರೆ ನೀಡುವುದು ಕೂಡ ಸೇರಿದೆ.

 

ಸಂಕ್ರಾಂತಿ ಸಾಮಾನ್ಯವಾಗಿ ನಾಲ್ಕು ದಿನದ ಹಬ್ಬ. ಮೊದಲ ದಿನವನ್ನು ಭೋಗಿ ಎಂದು ಕರೆಯಲಾಗುತ್ತದೆ. ಇದು ಹೊಸ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಜನರು ಹಳೆಯ ಬಟ್ಟೆಗಳನ್ನು ಬಿಸುಟಿ, ಹೊಸ ಆರಂಭದ ಕಡೆಗೆ ಸಾಗುತ್ತಾರೆ.

 

ಸಂಕ್ರಾಂತಿಯ ಎರಡನೇ ದಿನವನ್ನು ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಚಿನ್ನ ಮತ್ತು ವಜ್ರದ ಆಭರಣವನ್ನು ಜನರು ಧರಿಸಿ ಈ ದಿನವನ್ನು ವಿಶೇಷವಾಗಿಸುತ್ತಾರೆ ಮತ್ತು ಮನೆಗಳನ್ನೂ ಸುಂದರ ಕೃಷಿ ಉತ್ಪನ್ನಗಳಿಂದ ಅಲಂಕರಿಸುತ್ತಾರೆ. ಪ್ರತಿ ಮನೆಯಲ್ಲೂ ಹೊಸ ಹಾಲು ಮತ್ತು ಅನ್ನವನ್ನು ಬೇಯಿಸಲಾಗುತ್ತದೆ.

 

ಮೂರನೆಯ ದಿನ ಮಟ್ಟು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನ ಜಾನುವಾರುಗಳಿಗೆ ಪೂಜೆ ಮಾಡಲಾಗುತ್ತದೆ. ನಾಲ್ಕನೆಯ ದಿನ ಕಾನಮ್ ಸಂಕ್ರಾಂತಿ. ಇದು ಕುಟುಂಬದ ಬಾಂಧವ್ಯಕ್ಕೆ ದ್ಯೋತಕವಾಗಿದೆ. ಈ ದಿನ ಜನರು ಪರಸ್ಪರ ಉಡುಗೊರೆಯನ್ನು ಹಂಚಿಕೊಳ್ಳುತ್ತಾರೆ. ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಈ ದಿನ ಹಂಚಿಕೊಳ್ಳುವುದು ಅತ್ಯಂತ ಸಾಮಾನ್ಯ ಸಂಗತಿ.

 

ಸಂಕ್ರಾಂತಿಕ ಅತ್ಯಂತ ಅಮೂಲ್ಯವಾದ ಸಮಯ ಮತ್ತು ಜನರು ಅಮೂಲ್ಯವಾದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಧರಿಸುತ್ತಾರೆ. ಚಿನ್ನವು ಸಂಪತ್ತು ಮತ್ತು ಅದೃಷ್ಟವನ್ನು ಸೂಚಿಸುತ್ತದೆ ಮತ್ತು ಚಿನ್ನದ ಆಭರಣ ಮತ್ತು ವಜ್ರವನ್ನು ಧರಿಸುವುದು ಸಂಪತ್ತು ಮತ್ತು ಸಮೃದ್ಧಿಗೆ ಸೂಚಕ ಎಂದು ಭಾವಿಸಲಾಗುತ್ತದೆ.

 

ರೂಬಿ ಮತ್ತು ಹವಳಗಳನ್ನು ಅಳವಡಿಸಿದ, ಲಕ್ಷ್ಮಿ ಚಿತ್ರ ಇರುವ ಸಾಂಪ್ರದಾಯಿಕ ಚಿನ್ನದ ನೆಕ್‌ಲೇಸ್‌ ಧರಿಸಿ ಈ ಸಂಕ್ರಾಂತಿಯನ್ನು ಸ್ಮರಣೀಯವನ್ನಾಗಿಸಿ. ಸೂಕ್ಷ್ಮ ಕೆತ್ತನೆ ಇರುವ ಕಡ ಧರಿಸಿ ಮತ್ತು ಇದರಲ್ಲಿ ಹೂವಿನ ಪ್ಯಾಟರ್ನ್‌ನಲ್ಲಿ ರೂಬಿಗಳು ಅಳವಡಿಸಿಕೊಂಡಿರಲಿ ಮತ್ತು ಸಣ್ಣ ಸ್ಟೋನ್‌ ವರ್ಕ್‌ ಕೂಡ ಇದ್ದರೆ ನಿಮ್ಮ ಕೈಗಳು ಸುಂದರವಾಗಿ ಕಾಣಿಸುತ್ತವೆ. ನಿಮ್ಮ ಲುಕ್‌ಗೆ ಪರಿಪೂರ್ಣತೆ ನೀಡಲು ಈ ಕುಸುರಿ ಹೊಂದಿರುವ ಕಿವಿಯೋಲೆಯನ್ನೂ ಧರಿಸಿ.

 

ಉದ್ದನೆಯ ಹರಮ್ ನೆಕ್‌ಲೇಸ್‌ ಇನ್ನೊಂದು ಸಾಂಪ್ರದಾಯಿಕವಾದ ಸುಂದರ ವಿನ್ಯಾಸವಾಗಿದ್ದು, ಇದು ನಿಮ್ಮನ್ನು ಅದ್ಭುತವಾಗಿ ಕಾಣುವಂತೆ ಮಾಡುತ್ತದೆ. ಕೆಂಪು ಮತ್ತು ಹಸಿರು ಸ್ಟೋನ್‌ ವರ್ಕ್ ಇದರಲ್ಲಿ ಇದ್ದರೆ ಇನ್ನಷ್ಟು ಕ್ಲಾಸಿಕ್ ಆಗಿ ಕಾಣಿಸುತ್ತದೆ. ಒಂದೇ ಬಣ್ಣದ ಸ್ಟೋನ್‌ಗಳ ಜೊತೆಗೆ ಚಿನ್ನದ ಬಳೆಗಳ ಬಣ್ಣವನ್ನೂ ಹೋಲಿಸಿಕೊಳ್ಳಿ. ಚಿನ್ನದ ಬೀಡ್‌ಗಳು ಮತ್ತು ಕೆಂಪು ಬಣ್ಣದ ಸ್ಟೋನ್‌ಗಳನ್ನು ಹೊಂದಿರುವ ಕಿವಿಯೋಲೆಗಳನ್ನೂ ಇದಕ್ಕೆ ಸೇರಿಸಿಕೊಳ್ಳಿ. ಪ್ರಕಾಶಮಾನವಾದ ಸಿಲ್ಕ್‌ ಸೀರೆ ಧರಿಸಿ ನಿಮ್ಮ ಲುಕ್ ಅನ್ನು ಪೂರ್ಣಗೊಳಿಸಿ.

 

ಲಕ್ಷ್ಮಿ ಕುಸುರಿ ಕೆತ್ತನೆ ಇರುವ ಸಣ್ಣ ನೆಕ್‌ಲೇಸ್‌ ನಿಮ್ಮ ಆಭರಣ ಬಾಕ್ಸ್‌ನಲ್ಲಿ ಈ ಹಬ್ಬದ ಸಮಯದಲ್ಲಿ ಇರಲೇಬೇಕಾದ ಸಾಮಗ್ರಿ. ಮಲ್ಲಿಗೆ ಹೂವು ಮುಡಿದುಕೊಳ್ಳಿ, ಕಾಂಜೀವರಂ ಸೀರೆ ಧರಿಸಿ ಮತ್ತು ಇದೇ ಕುಸುರಿ ಇರುವ ಕಿವಿಯೋಲೆಯನ್ನು ಧರಿಸಿಕೊಳ್ಳಿ. ನಿಮ್ಮ ಕೈಗಳಿಗೆ ಇದೇ ಲಕ್ಷ್ಮಿ ಕುಸುರಿ ಇರುವ ಕಡಗಳನ್ನು ಧರಿಸಿ ಮತ್ತು ಕೆಂಪು ಬಿಂದಿ ಧರಿಸಿದರೆ ನಿಮ್ಮ ಲುಕ್‌ ಪರಿಪೂರ್ಣವಾಗಿರುತ್ತದೆ.

 

ಸಂಕ್ರಾಂತಿ ಸಮಯದಲ್ಲಿ ಅಮೂಲ್ಯವಾದ ಸಾಮಗ್ರಿಗಳನ್ನು ಪ್ರೀತಿಪಾತ್ರರಿಗೆ ಉಡುಗೊರೆ ನೀಡಬಹುದು. ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನೇ ಏಕೆ ಈ ಉಡುಗೊರೆ ಸಂಪ್ರದಾಯಕ್ಕೆ ಆಯ್ಕೆ ಮಾಡಿಕೊಳ್ಳಬಾರದು ಅಥವಾ ಬೆಳ್ಳಿಯಿಂದ ಮಾಡಿದ ವಿಶಿಷ್ಟ ಉಡುಗೊರೆಯನ್ನು ಕೊಡಬಾರದು? ಬೆಳ್ಳಿ ದೀಪ, ಬೆಳ್ಳಿ ಪ್ಲೇಟ್ ಅಥವಾ ಬೌಲ್‌ ಒಂದು ವಿಶಿಷ್ಟ ಉಡುಗೊರೆಯಾಗಿರುತ್ತದೆ. ಇದನ್ನು ಎಂದಿಗೂ ಜನರು ನೆನಪಿಟ್ಟುಕೊಳ್ಳುತ್ತಾರೆ. ಇನ್ನೊಂದು ಉತ್ತಮ ಉಡುಗೊರೆ ಆಯ್ಕೆ ಎಂದರೆ ಸುಂದರವಾದ ರಿಂಗ್ ಅಥವಾ ಪದಕ. ಅಮೂಲ್ಯವಾದ ಹವಳಗಳು ಅಥವಾ ವಜ್ರಗಳನ್ನು ಒಳಗೊಂಡಿರುವ ಪದಕವೂ ಕೂಡ ಉತ್ತಮ ಆಯ್ಕೆಯೇ ಆಗಿರುತ್ತದೆ.

 

ನಮ್ಮ ವಿಶಾಲ ಶ್ರೇಣಿಯ ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣಗಳ ಆಯ್ಕೆಯಿಂದ ಆರಿಸಿಕೊಳ್ಳುವ ಮೂಲಕ ಮತ್ತು ಕಲ್ಯಾಣ್‌ ಜ್ಯೂವೆಲ್ಲರ್ಸ್‌ನ ಉಡುಗೊರೆ ಆಯ್ಕೆಗಳಿಂದ ಈ ಸಂಕ್ರಾಂತಿಯನ್ನು ಸ್ಮರಣೀಯವಾಗಿಸಿ.