Kalyan Jewellers India Limited - Articles

ಜೆಮ್ ಸ್ಟೋನ್ ನೊಂದಿಗೆ ಹೊಸ ವರ್ಷದ ನಿರ್ಣಯಗಳು

Publisher: blog

ಜೆಮ್ ಸ್ಟೋನ್ ನೊಂದಿಗೆ ಹೊಸ ವರ್ಷದ ನಿರ್ಣಯಗಳು

ಹೊಸ ವರ್ಷ ಅತೀ ಶೀಘ್ರದಲ್ಲಿ ಬರುತ್ತಿದೆ. ಈಗ ಕಳೆದ ವರ್ಷವನ್ನು ಆತ್ಮಾವಲೋಕನ ಮಾಡಲು ಮತ್ತು ಮುಂಬರುವ ಹೊಸ ವರ್ಷಕ್ಕಾಗಿ ಹೊಸ ನಿರ್ಣಯಗಳನ್ನು ಮಾಡಲು ವರ್ಷದ ಆರಂಭ ಸೂಕ್ತ ಸಂದರ್ಭವಾಗಿದೆ. 


ಈ ವರ್ಷ ನೀವು ಯಾಕೆ ಬರಲಿರುವ ಹೊಸ ವರ್ಷದ ನಿರ್ಣುಯವನ್ನು ಯಾಕೆ ಮಾಡಬಾರದು? ಇದು ನಾವು ಹೆಚ್ಚು ಪ್ರಜಾÕವಂತರನ್ನಾಗಿ ಬದುಕಲು ಸಹಾಯ ಮಾಡುತ್ತದೆ. ಆಭರಣಗಳು, ವಿಶೇಷವಾಗಿ ಬಣ್ಣದ ಹರಳುಕಲ್ಲುಗಳು, ನೀವು ಮಾಡಿದ ಹೊಸ ವರ್ಷದ ಸಂಕಲ್ಪದಂತೆ ನೀವು ಕೈಗೊಂಡಿರುವ ಸದ್ಗುಣಗಳನ್ನು ನೆನಪಿಸಿಕೊಳ್ಳಲು ಪರಿಪೂರ್ಣ ಹಾದಿಯಾಗಿದೆ. ಪ್ರತಿಯೊಂದು ಸದ್ಗುಣವು ಒಂದು ಬಣ್ಣವನ್ನು ಪ್ರತಿನಿಧಿಸುತ್ತದೆ ಮತ್ತು ನಿಮ್ಮ ಸದ್ಗುಣಕ್ಕೆ ಅನುಗುಣವಾಗಿ ಆಭರಣಗಳನ್ನು ಆಯ್ಕೆ ಮಾಡುವ ಮಾರ್ಗದರ್ಶಿ ಇಲ್ಲಿದೆ.


ನೀಲಿ – ನೀಲಿಯು ಸದ್ಗುಣವನ್ನು ಸದಾ ಹೊಂದಿರಬೇಕೆಂಬ ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ. ನೀಲಿಕಲ್ಲಿನ ಉಂಗುರ ಅಥವಾ ಪೆಂಡೆಂಟ್ ನ್ನು ನಿಮ್ಮ ಆಭರಣ ಸಂಗ್ರಹಕ್ಕೆ ಸೇರಿಸುವುದರಿಂದ ಇದು ನೋಟದ ಅಂದವನ್ನು ಹೆಚ್ಚಿಸುವುದಲ್ಲದೇ ಹೊಸ ವರ್ಷದ ರಾತ್ರಿಯಲ್ಲಿ ನಿಮ್ಮ ನಿರ್ಣಯವನ್ನು ಕೂಡ ನಿಮಗೆ ನೆನಪಿಸುವುದು.

ನೇರಳೆ- ನೇರಳೆ ಬಣ್ಣವು ಪ್ರಾಮಾಣಿಕತೆ ಮತ್ತು ನಮ್ರತೆಯನ್ನು ಪ್ರತಿನಿಧಿಸುತ್ತದೆ, ಇದನ್ನು ಕೂಡ ನಿಮ್ಮ ನಿರ್ಣಯದ ಪಟ್ಟಿಗೆ ನೀವು ಸೇರಿಸಬಹುದಾದ ಗುಣವಾಗಿದೆ.


ನೇರಳೆ ಪದ್ಮರಾಗ ಅಥವಾ ನೀಲಿಕಲ್ಲು ಒಂದು ನಿಮ್ಮ ಆಭರಣ ಸಂಗ್ರಹಕ್ಕೆ ಸೇರಿಸಲು ಒಂದು ಸೂಕ್ತ ರತ್ನವಾಗಿದೆ. ಇದು ನಿಮ್ಮ ನೋಟವನ್ನು ಪರಿವರ್ತಿಸುತ್ತದೆ ಮತ್ತು ನಿಮ್ಮತ್ತ ಎಲ್ಲರೂ ತಲೆ ತಿರುಗಿಸಿ ನೋಡುವಂತೆ ಮಾಡುತ್ತದೆ.


ಹಸಿರು- ಹಸಿರು ಒಂದು ದಯೆಯ ಬಣ್ಣವಾಗಿದ್ದು, ಹೊಸವರ್ಷದ ನಿಮ್ಮ ನಿರ್ಣಯದಲ್ಲಿ ದಯೆಯಿದ್ದರೆ, ನೀವು ಹಸಿರು ಪೆಂಡೆಂಟ್ ಅಥವಾ ಹಸಿರು ಕಲ್ಲಿನಿಂದ ಮಾಡಿದ ಉಂಗುರವನ್ನು ಸೇರ್ಪಡೆ ಮಾಡಬಹುದು. ಇದು ಹೊಸ ಎತ್ತರಕ್ಕೆ ನೋಟವನ್ನು ಕೊಂಡೊಯ್ಯಬಹುದು.


ಕೆಂಪು- ಕೆಂಪು ಬಣ್ಣ ಸೌಮ್ಯತೆ ಮತ್ತು ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಮಾಣಿಕ್ಯದೊಂದಿಗಿನ ಮೂಗಿನ ಬೊಟ್ಟು ಅಥವಾ ಗಾರ್ನೆಟ್ ಸ್ಟಡ್ಸ್ ನೊಂದಿಗಿನ ಬಳೆ ಕೂಡ ನಿಮ್ಮ ಹೊಸ ವರ್ಷದ ನಿರ್ಣಯಗಳನ್ನು ಕಾಲ ಕಾಲಕ್ಕೆ ನೆನಪಿಸಬಹುದು.


ಹಳದಿ – ಹಳದಿ ಬಣ್ಣವು ಭರವಸೆ ಮತ್ತು ಆಶಾವಾದವನ್ನು ಪ್ರತಿನಿಧಿಸುತ್ತದೆ, ಇದು ಹೊಸ ವರ್ಷದ ನಿಮ್ಮ ಪಟ್ಟಿಗೆ ಸೇರಿಸಲು ಇದೊಂದು ಮಹತ್ವದ ಸದ್ಗುಣವಾಗಿದೆ. ನಿಮ್ಮ ಆಭರಣಗಳ ಸಂಗ್ರಹಕ್ಕೆ ತಿಳಿಹಳದಿ ಅಥವಾ ಹಳದಿ ಪೆಂಡೆಂಟ್ ನ್ನು ಸೇರಿಸಲು ಪ್ರಯತ್ನಿಸಿರಿ. ಈ ಹರಳುಗಳೊಂದಿಗೆ  ನೀವು ಉಂಗುರ, ಕಿವಿಯೋಲೆ ಅಥವಾ ಒಂದು ಸರಳ ನೆಕ್ಲೇಸ್ ನ್ನು ಸೇರಿಸಬಹುದು.


ಕಿತ್ತಳೆ – ಕಿತ್ತಳೆ ಬಣ್ಣವು ಶಕ್ತಿ ಮತ್ತು ತಾಳ್ಮೆಯನ್ನು ಪ್ರತಿನಿಧಿಸುತ್ತದೆ. ಈ ಸದ್ಗುಣವು ಈ ವರ್ಷದ ಹಾಗೂ ಮುಂಬರುವ ವರ್ಷದ ಹೊಸ ವರ್ಷದ ಪಟ್ಟಿಗೆ ಅತ್ಯುತ್ತಮ ಸೇರ್ಪಡೆಯಾಗಿದೆ. ಈ ಧೂಪದ್ರವ್ಯ ಅಂಬರ್ ಬಣ್ಣ ಕೇಸರಿಯಾಗಿದೆ. ಈ ಕೇಸರಿ ಬಣ್ಣದ ಹರಳಿನ ಉಂಗುರವನ್ನು ಧರಿಸುವುದು ನಿಮ್ಮತ್ತ ತಲೆತಿರುಗಿಸಿ ನೋಡುವಂತೆ ಮಾಡುವುದಲ್ಲದೇ, ನೀವು ತೆಗೆದುಕೊಂಡಿರುವ ನಿರ್ಣಯಗಳ ಬಗ್ಗೆ ನಿಮ್ಮನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡುತ್ತದೆ.

ನೀವು ನಿಮ್ಮ ಹೊಸ ವರ್ಷದ ಪಟ್ಟಿಗೆ ಯಾವ ಸದ್ಗುಣಗಳನ್ನು ಸೇರಿಸಲು ನಿರ್ಧರಿಸುತ್ತೀರೋ, ಹಾಗೆಯೇ ನಿಮ್ಮ ವೈಯಕ್ತಿಕ ಆಭರಣ ಸಂಗ್ರಹಕ್ಕೆ ಸದ್ಗುಣಕ್ಕೆ ಸರಿಹೊಂದುವ ಬಣ್ಣದ ಹರಳುಗಳನ್ನು ಸೇರಿಸುವ ಮೂಲಕ ಅದನ್ನು ಮತ್ತಷ್ಟು ಸುಂದರಗೊಳಿಸಿರಿ. ಸರ್ವರಿಗೂ ಹೊಸ ವರ್ಷದ ಶುಭಾಶಯಗಳು