Kalyan Jewellers India Limited - Articles

ಪುರುಷರು ಮತ್ತು ಮಹಿಳೆಯರಿಗೆ ಬ್ರೇಸ್‌ಲೆಟ್‌ಗಳು

ಬ್ರೇಸ್‌ಲೆಟ್ ಎಂಬುದು ಅತ್ಯಂತ ಸರಳ ಹಾಗೂ ಸುಂದರ ಆಭರಣ. ಬ್ರೇಸ್‌ಲೆಟ್‌ ವೈವಿಧ್ಯಮಯವಾಗಿದ್ದು, ಇದನ್ನು ಹಲವು ರೀತಿಯಲ್ಲಿ ಧರಿಸಬಹುದು. ಕೈಗೆ ಹಾಕಿಕೊಂಡರೆ ಬ್ರೇಸ್‌ಲೆಟ್‌ ಆಗುತ್ತದೆ. ಕಣಕಾಲಿಗೆ ಹಾಕಿಕೊಂಡರೆ ಅದು ಆಂಕ್ಲೆಟ್ ಆಗುತ್ತದೆ. ಮುಂದಲೆಗೆ ಧರಿಸಿದರೆ ಅದನ್ನು ನೇತಿಚುಟ್ಟಿ ಎಂದು ಕರೆಯಲಾಗುತ್ತದೆ. ಮಹಿಳೆಯರು ಮತ್ತು ಪುರುಷರು ಇಬ್ಬರೂ ಧರಿಸಬಹುದಾದ ವಿಶಿಷ್ಟ ಆಭರಣವೂ ಕೂಡ.

 

ಬ್ರೇಸ್‌ಲೆಟ್‌ನ ಮೂಲ ಈಜಿಪ್ಟ್‌ ನಾಗರೀಕತೆಯಷ್ಟು ಹಳೆಯದು. ಆ ಕಾಲದಲ್ಲಿ ಪರೋವಾಗಳು ಭಾರಿ ದೊಡ್ಡ ಚಿನ್ನದ ಬ್ರೇಸ್‌ಲೆಟ್‌ಗಳನ್ನು ಧರಿಸುತ್ತಿದ್ದರಂತೆ, ಬ್ರೇಸ್‌ಲೆಟ್‌ಗಳು ಮತ್ತು ಬಳೆಗಳು ನಮ್ಮ ಭಾರತೀಯ ಪುರಾಣದಲ್ಲೂ ಅಪಾರ ಉಲ್ಲೇಖಗಳನ್ನು ಹೊಂದಿವೆ. ಸಿಖ್ಖರಲ್ಲಿ ಕಂಗಾ ಎಂದು ಇದನ್ನು ಕರೆಯಲಾಗುತ್ತಿತ್ತು. ಇದನ್ನು ಸಿಖ್ಖರು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತಿತ್ತು.

 

ಬಳೆ ಮತ್ತು ಬ್ರೇಸ್‌ಲೆಟ್‌ನ ಮುಖ್ಯ ವ್ಯತ್ಯಾಸವೆಂದರೆ, ಬಳೆಯಲ್ಲಿ ಕುಣಿಕೆ ಇರುವುದಿಲ್ಲ. ಆದರೆ, ಬ್ರೇಸ್‌ಲೆಟ್‌ ಬಳೆಯಷ್ಟು ಗಟ್ಟಿಯಾಗಿರುವುದಿಲ್ಲ. ಇದರಲ್ಲಿ ಕುಣಿಕೆ ಇರುತ್ತದೆ. ಮಹಿಳೆಯರ ಬ್ರೇಸ್‌ಲೆಟ್‌ನಲ್ಲಿ ಹಲವು ವೈವಿಧ್ಯಗಳಿವೆ. ಸರಳವಾದ ಚೈನ್‌ ರೀತಿಯ ಬ್ರೇಸ್‌ಲೆಟ್‌ಗಳಿಂದ, ಸುಂದರವಾಗಿ ಅಲಂಕರಿಸಿದ ಸ್ಟೋನ್‌ ಅಳವಡಿಸಿದ ಬಳೆ ರೀತಿಯ ಬ್ರೇಸ್‌ಲೆಟ್‌ಗಳೂ ಇವೆ. ದೊಡ್ಡ ವೈಭವೋಪೇತ ದೇಗುಲ ಆಭರಣದ ಬ್ರೇಸ್‌ಲೆಟ್‌ಗಳಿಂದ ಸರಳ, ಪ್ರತಿ ದಿನ ಬಳಸುವ ಬ್ರೇಸ್‌ಲೆಟ್‌ಗಳೂ ಲಭ್ಯವಿವೆ. ಕಡಗ ಎಂದು ಕರೆಯುವ ಬಳೆಗಳೂ ಇವೆ. ಇವುಗಳೂ ಕುಣಿಕೆ ಹೊಂದಿರುತ್ತವೆ. ಆದರೆ, ಈ ಕುಣಿಕೆಗಳ ಸುತ್ತಲೂ ಅಲಂಕಾರ ಮಾಡಿರುವುದರಿಂದ, ಇವುಗಳನ್ನು ಧರಿಸಿದವರಿಗೆ ಮಾತ್ರ ಇಲ್ಲಿ ಕುಣಿಕೆ ಇದೆ ಎಂದು ತಿಳಿಯುತ್ತದೆ.

 

ಬ್ರೇಸ್‌ಲೆಟ್ ವಿಚಾರಕ್ಕೆ ಬಂದರೆ ಇನ್ನೊಂದು ಪ್ರಮುಖ ವಿಧಾನದ ಆಭರಣವೆಂದರೆ, ಪ್ಲಾಟಿನಂ ಆಭರಣವಾಗಿದ್ದು, ಸಾಮಾನ್ಯವಾಗಿ ಪುರುಷರು ಇದನ್ನು ಧರಿಸುತ್ತಾರೆ. ಪ್ಲಾಟಿನಂ ಬ್ರೇಸ್‌ಲೆಟ್‌ಗಳು ಸುಂದರವಾಗಿ ಕಾಣಿಸುತ್ತವೆ. ಚಿನ್ನ, ವಜ್ರ ಅಥವಾ ಇತರ ಅಮೂಲ್ಯ ಹವಳಗಳನ್ನು ಈ ಪ್ಲಾಟಿನಂ ಬ್ರೇಸ್‌ಲೆಟ್‌ಗಳಿಗೆ ಅಳವಡಿಸಬಹುದು.

 

ಪುರುಷರಿಗೆಂದೇ ರೂಪಿಸಿದ ಈ ಬ್ರೇಸ್‌ಲೆಟ್‌ಗಳು ಸುಂದರವೂ, ಆಕರ್ಷಕವೂ ಆಗಿರುತ್ತವೆ. ಮಹಿಳೆಯರಿಗೂ ಪ್ಲಾಟಿನಂ ಬ್ರೇಸ್‌ಲೆಟ್‌ಗಳ ಹಲವು ವಿನ್ಯಾಸಗಳು ಲಭ್ಯವಿವೆ. ಸರಳ ಬ್ರೇಸ್‌ಲೆಟ್‌ಗಳಿಂದ ಅದ್ಭುತ, ಐಷಾರಾಮಿ ಹಾಗೂ ಬೋಲ್ಡ್ ಆದ ಬ್ರೇಸ್‌ಲೆಟ್‌ಗಳೂ ಲಭ್ಯವಿವೆ. ಬ್ರೇಸ್‌ಲೆಟ್‌ಗಳ ವಿಚಾರಕ್ಕೆ ಬಂದರೆ ಧರಿಸಿದವರಿಗೆ ಅಪಾರ ಅವಕಾಶಗಳಿವೆ.

 

ಸರಳ ದೈನಂದಿನ ದಿರಿಸಿಗೂ ಹೊಂದುವಂತಹ ಮತ್ತು ಅದ್ಭುತವಾಗಿಯೂ ಇರುವಂತಹ ಬ್ರೇಸ್‌ಲೆಟ್‌ಗಳು ಲಭ್ಯವಿರುತ್ತವೆ. ಇದರಲ್ಲಿ ಅಪಾರವಾದ ಆಯ್ಕೆಗಳಿರುವುದರಿಂದ ಎಲ್ಲರ ವಾರ್ಡ್‌ರೋಬ್‌ಗೂ ಹೊಂದುತ್ತವೆ.