Kalyan Jewellers, Madinat Zayed Extension, Abu Dhabi

Shop No-11, 12, & 13, Ground Floor, Madinat Zayed Extension
Abu Dhabi- 43680

(971)800-0320955

Call Now

Opens at

<All Articles

ವಧು ಆಭರಣ ಆಯ್ಕೆ ಮಾಡಲು ಹೊಸಬರಿಗೆ ಮಾರ್ಗದರ್ಶಿ

ಹಲವು ವಿಷಯಗಳಿಗೆ ಭಾರತ ವಿಶಿಷ್ಟ ಮಹತ್ವ ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿವಾಹದ ಸಮಯ ಮತ್ತು ಆ ಸಂಭ್ರಮದ
ವೈಭವ ಅತ್ಯಂತ ಮಹತ್ವದ್ದಾಗಿದೆ. ವಿವಾಹ ಸಮಾರಂಭದಲ್ಲಿ ಎರಡು ಸಾವಿರ ಜನರು ಸೇರಿದ್ದರೂ, ವಧು ಎದ್ದು
ಕಾಣಿಸುವಂತಿರುತ್ತಾಳೆ. ಇದಕ್ಕೆ ಪ್ರಮುಖ ಕಾರಣವೇ ಸುಂದರ ಹಾಗೂ ವೈಭವಯುತ ಉಡುಪಿನ ಜೊತೆಗೆ ಧರಿಸುವ ಆಕರ್ಷಕ
ಆಭರಣಗಳಾಗಿರುತ್ತವೆ. ವಧುವನ್ನು ಅಲಂಕರಿಸುವ ವಿಚಾರದಲ್ಲಿ ಸರಿಯಾದ ಆಭರಣ ಆಯ್ಕೆ ಮಾಡುವುದು ಅತ್ಯಂತ
ಪ್ರಮುಖವಾದದ್ದು. ಹಲವು ವರ್ಷಗಳವರೆಗೆ ಇರುವ ಈ ಆಭರಣವನ್ನು ಆಯ್ಕೆ ಮಾಡುವಲ್ಲಿ ನಾವು ಯಾವ ಅಂಶವನ್ನು
ಪರಿಗಣಿಸಬೇಕು? ಇಲ್ಲಿದೆ ನೋಡಿ ವಿವರ.

ನೆಕ್‌ಲೈನ್‌ ಅಥವಾ ನೆಕ್‌ಲೇಸ್
ಉತ್ತರ ಭಾರತದ ವಿವಾಹ ಸಮಾರಂಭದಲ್ಲಿ, ವಧು ಸಾಮಾನ್ಯವಾಗಿ ಸುಂದರ ಕಸೂತಿ ಮಾಡಿದ ಲೆಹಂಗಾ ಧರಿಸುತ್ತಾಳೆ.
ಇದಕ್ಕೆ ಹರಳುಗಳು ಮತ್ತು ರೇಷ್ಮೆ ದಾರಗಳಿಂದ ನೇಯ್ಗೆ ಮಾಡಲಾಗಿರುತ್ತದೆ. ಈ ಉಡುಪನ್ನು ಬೋಟ್ ನೆಕ್‌ ನೆಕ್‌ಲೈನ್‌
ಸೇರಿದಂತೆ ಸುಂದರ ನೆಕ್‌ಲೈನ್‌ ಅಥವಾ ಇಳಿಬಿಡುವ ನೆಕ್‌ಲೈನ್ ಬಳಸಿ ಅಲಂಕರಿಸಬಹುದು. ಈ ಉಡುಪಿಗೆ ಸೂಕ್ತವಾದ
ನೆಕ್‌ವೇರ್ ಅನ್ನು ಧರಿಸುವುದು ಅತ್ಯಂತ ಪ್ರಮುಖ. ಉದ್ದನೆಯ ನೆಕ್‌ಲೇಸ್ ಅಥವಾ ಚೋಕರ್‌ ಇರಬಹುದು ಅಥವಾ
ಇವೆರಡನ್ನೂ ಧರಿಸಬಹುದು. ತುಂಬಾ ಆಭರಣವನ್ನು ಧರಿಸುವುದು ಅಥವಾ ನಿಮ್ಮ ದೇಹದ ಪ್ರತಿ ಅಂಗವನ್ನೂ ವಜ್ರ ಅಥವಾ
ವೈಢೂರ್ಯಗಳಿಂದ ಅಲಂಕರಿಸಿದರೆ ಡಿಸ್ಕೋ ಹುಡುಗಿಯ ಹಾಗೆ ಕಾಣಿಸುತ್ತದೆ. ನಿಮ್ಮ ಹಾಗೂ ನಿಮ್ಮ ಉಡುಪಿನ
ಸೌಂದರ್ಯವನ್ನು ವರ್ಧಿಸುವ ಆಭರಣವನ್ನು ಆಯ್ಕೆ ಮಾಡಿಕೊಳ್ಳಿ.

ಮಿಶ್ರ ಲೋಹ
ಚಿನ್ನ, ಪ್ಲಾಟಿನಂ, ಬಿಳಿ ಚಿನ್ನ, ಗುಲಾಬಿ ಚಿನ್ನ ಇತ್ಯಾದಿಯಿಂದ ಮಾಡಿದ ಆಭರಣವನ್ನೆಲ್ಲ ಧರಿಸುವುದರಿಂದ ಸುಂದರವಾಗಿ
ಕಾಣಿಸುವುದಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಅವುಗಳನ್ನು ಉಚಿತವಾಗಿ ಮತ್ತು ಪ್ರಬುದ್ಧವಾಗಿ ಜೋಡಿಸುವುದರಿಂದ
ಸುಂದರವಾಗಿ ಕಾಣಿಸುತ್ತದೆ. ಲೋಹಗಳನ್ನು ಎಚ್ಚರಿಕೆಯಿಂದ ಮಿಶ್ರಣ ಮಾಡಿ ಮತ್ತು ಇದು ನಿಮಗೆ ಅತ್ಯಂತ ಅದ್ಭುತ ವಧು ಲುಕ್
ನೀಡುತ್ತದೆ.

ಬಣ್ಣಗಳನ್ನು ಮಿಶ್ರ ಮಾಡಬೇಡಿ
ಉಡುಪಿನ ಜೊತೆಗೆ ಧರಿಸಿದಾಗ ವಿಭಿನ್ನ ಬಣ್ಣಗಳ ಹರಳುಗಳು ಪ್ರಕಾಶಮಾನವಾಗಿರುತ್ತವೆ ಮತ್ತು ಸುಂದರ ಜೋಡಿಯಾಗಿರುತ್ತದೆ
ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಂದೇ ಲುಕ್‌ಗೆ ಹಲವು ಬಣ್ಣಗಳನ್ನು ಧರಿಸುವುದು ಉತ್ತಮ ಕಲ್ಪನೆಯಲ್ಲ.
ಉದಾಹರಣೆಗೆ, ನಿಮ್ಮ ವಧು ಉಡುಪು ಪಾಸ್ಟೆಲ್ ಶೇಡ್‌ ಹೊಂದಿದ್ದರೆ, ಒಂದು ಪ್ರಕಾಶಮಾನವಾದ ಬಣ್ಣದ ಹರಳಿನ
ಆಭರಣವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಪ್ರಕಾಶಮಾನವಾದ ವಧು ದಿರಿಸಿಗೆ, ಮಂದವಾದ ಹರಳಿನ ಆಭರಣವು
ಚೆನ್ನಾಗಿ ಹೊಂದುತ್ತದೆ.

ನಿಮ್ಮ ಉಡುಪಿಗೆ ಪೂರಕವಾದ ಆಭರಣವನ್ನು ಆಯ್ಕೆ ಮಾಡಿ
ವಿವಾಹದ ದಿರಿಸು ವೈಭವಯುತವಾಗಿದ್ದಾಗ, ಸರಳವಾದ ಆಭರಣವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದು ವಧುವಿನ
ಸೌಂದರ್ಯ ಮತ್ತು ವೈಭವಕ್ಕೆ ಪೂರಕವಾಗಿರುತ್ತದೆ. ಇದಕ್ಕೆ ಪ್ರತಿಯಾಗಿ, ನಿಮ್ಮ ವಿವಾಹದ ಡ್ರೆಸ್ ಸರಳವಾಗಿದ್ದರೆ, ಭಾರತೀಯ
ವಧುವಿಗೆ ಪೂರಕವಾದ ವೈಭವಯುತ ಆಭರಣವನ್ನು ಧರಿಸುವುದು ಉತ್ತಮ.

ಮದುವೆ ದಿನದಂದು ಎಲ್ಲ ಆಭರಣವನ್ನೂ ಧರಿಸಿಬಿಡಬೇಡಿ
ವೈಭವಯುತ ಭಾರತೀಯ ವಧು ದಿರಿಸು ಎಂದ ತಕ್ಷಣ, ನಿಮ್ಮ ಆಭರಣ ಪೆಟ್ಟಿಗೆಯಲ್ಲಿರುವ ಎಲ್ಲ ಆಭರಣವನ್ನು ಧರಿಸಬೇಕಿಲ್ಲ.
ಸರಿಯಾದ ಆಭರಣವನ್ನು ಆಯ್ಕೆ ಮಾಡುವುದೇ ಇದರಲ್ಲಿನ ಪ್ರಮುಖ ಅಂಶ ಮತ್ತು ಸುಂದರ ಲುಕ್‌ಗೆ ಕಲಾತ್ಮಕವಾಗಿ
ಅವುಗಳನ್ನು ಹೋಲಿಕೆ ಮಾಡುವುದು ಅತ್ಯಂತ ಪ್ರಮುಖ ಸಂಗತಿ. ಒಂದು ನಿರ್ದಿಷ್ಟ ಲುಕ್‌ಗೆ ಬೇಕಾಗಿಲ್ಲದ ವೈಭವಯುತ
ಆಭರಣವನ್ನು ನೀವು ಧರಿಸಬೇಕಿಲ್ಲ.

ವಿವಾಹ ಸಂಭ್ರಮದಾಚೆಗೂ ಯೋಚಿಸಿ
ವಿವಾಹ ಸಂಭ್ರಮಾಚರಣೆ ಕೆಲವು ದಿನಗಳವರೆಗೂ ನಡೆಯುತ್ತದೆ. ಆದರೆ, ಆಭರಣಗಳು ಹಲವು ತಲೆಮಾರುಗಳವರೆಗೂ
ನಡೆಯುತ್ತದೆ. ಹೀಗಾಗಿ, ಆಭರಣಗಳನ್ನು ಮತ್ತೆ ಮತ್ತೆ ಬಳಸುವುದು ಮತ್ತು ವಿವಿಧ ಆಭರಣದ ಜೊತೆಗೆ ಧರಿಸುವ ಪ್ರಯೋಗವನ್ನು
ಮಾಡಿ.

ದಕ್ಷಿಣ ಭಾರತೀಯ ವಧು ವಿಶೇಷತೆಯಾಗಿರುವ ಲೇಯರ್ ಬಗ್ಗೆ ತಿಳಿದುಕೊಳ್ಳಿ
ಸಾಮಾನ್ಯವಾಗಿ ದಕ್ಷಿಣ ಭಾರತೀಯ ವಧು ರೇಷ್ಮೆ ಸೀರೆಯ ಜೊತೆಗೆ ಹಲವು ವಿಧದ ನೆಕ್‌ವೇರ್ ಧರಿಸುತ್ತಾಳೆ. ಚೋಕರ್‌ಗಳು,
ಸಣ್ಣ ನೆಕ್‌ಲೇಸ್‌ಗಳು ಅಥವಾ ಉದ್ದನೆಯ ನೆಕ್‌ಲೇಸ್‌ಗಳೂ ಇದರಲ್ಲಿ ಇರಬಹುದು. ವಿವಿದ ನೆಕ್‌ಲೇಸ್‌ಗಳನ್ನು
ಸುಂದರವಾಗಿ ಧರಿಸುವುದು ಅತ್ಯಂತ ಮುಖ್ಯವಾಗಿದೆ.

ದಿನದ ಕೊನೆಯಲ್ಲಿ, ವಧುವಾಗಿರುವ ನೀವು ನಿಮ್ಮ ಲುಕ್‌ ಬಗ್ಗೆ ಖುಷಿಯಾಗಿರಬೇಕು. ಹೀಗಾಗಿ, ಸ್ವಂತಿಕೆ ಉಳಿಸಿಕೊಳ್ಳಿ ಮತ್ತು
ನಿಮಗೆ ಖುಷಿ ನೀಡುವ ಆಭರಣ ಆಯ್ಕೆ ಮ

Can we help you?