Kalyan Jewellers, Madinat Zayed Extension, Abu Dhabi

Shop No-11, 12, & 13, Ground Floor, Madinat Zayed Extension
Abu Dhabi- 43680

(971)800-0320955

Call Now

Opens at

<All Articles

ಹರಳುಗಳ ರಾಣಿ ಮುತ್ತು ಬಳಸಿ ನಿಮ್ಮ ವ್ಯಕ್ತಿತ್ವದ ಪ್ರತಿಫಲನ ಹರಳುಗಳನ್ನು ‘ಮುತ್ತುಗಳ ರಾಣಿ’ ಎಂದು ಕರೆಯಲಾಗುತ್ತದೆ.

ಇತರ ಎಲ್ಲ ಆಭರಣಗಳನ್ನು ಭೂಮಿಯ ಅಡಿಯಿಂದ ಅಗೆದು ತೆಗೆಯಲಾಗುತ್ತದೆ. ಆದರೆ ಮುತ್ತುಗಳನ್ನು ಸಮುದ್ರದಿಂದ
ಸಂಗ್ರಹಿಸಲಾಗುತ್ತದೆ. ಈ ಮುತ್ತುಗಳನ್ನು ಸಮುದ್ರದ ಆಳಕ್ಕೆ ಅಗೆಯುವ ಮೂಲಕ ಸಂಗ್ರಹಿಸಲಾಗುತ್ತದೆ. ಮುತ್ತುಗಳನ್ನು
ಮೃದ್ವಂಗಿಗಳಿಂದ ಸಂಗ್ರಹಿಸಲಾಗುವ ಒಂದು ಅದ್ಭುತ ಸಂಗತಿಯಾಗಿದೆ. ಮೃದ್ವಂಗಿಗಳ ಒಳಗೆ ಧೂಳು ಅಥವಾ ಮರಳಿನ
ರೀತಿಯ ಬಾಹ್ಯ ಸಂಗ್ರಹಗಳು ಸೇರಿಕೊಂಡಾಗ, ಈ ಜೀವಿಗಳು ಆ ಬಾಹ್ಯ ಸಂಗತಿಗಳ ಸುತ್ತ ಸ್ರವಿಸುತ್ತವೆ. ಹಲವು
ವರ್ಷಗಳವರೆಗೆ ಈ ಪ್ರಕ್ರಿಯೆ ನಡೆದಾಗ ಹೊಳೆಯುವ ಮುತ್ತು ರೂಪುಗೊಳ್ಳುತ್ತದೆ. ನೈಸರ್ಗಿಕವಾಗಿ ಒಂದು ಮುತ್ತು
ರೂಪುಗೊಳ್ಳಲು ಎರಡೂವರೆ ವರ್ಷಗಳು ತೆಗೆದುಕೊಳ್ಳುತ್ತವೆ. ಪ್ರತಿ ಮುತ್ತುವೂ ವಿಶಿಷ್ಟವಾಗಿದ್ದು, ಇವು ಒಂದರ ಗಾತ್ರ, ಆಕಾರ
ಅಥವಾ ರಚನೆಗೆ ಹೋಲಿಕೆಯಾಗುವುದಿಲ್ಲ.

ಹಲವು ಕಾಲದಿಂದಲೂ ಮಹಿಳೆಯರ ಸೌಂದರ್ಯಕ್ಕೆ ಪೂರಕವಾಗಿ ಮುತ್ತುಗಳನ್ನು ಬಳಸಲಾಗುತ್ತಿದೆ. ಪುರಾತನ ಗ್ರೀಕ್
ಇತಿಹಾಸದಿಂದ ಈಜಿಪ್ಟ್‌ನ ಫೇರೋವರೆಗೆ ಚೀನಾ ರಾಜರುಗಳಿಂದ ಮೊಘಲ್‌ ರಾಜರುಗಳವರೆಗೆ ರಾಜರ ಕಾಲದಲ್ಲಿ
ಮುತ್ತುಗಳು ಅತ್ಯಂ ಪ್ರಮುಖ ಸ್ಥಾನ ಪಡೆದಿದ್ದವು. ಮುತ್ತುಗಳನ್ನು ಹಿಂದಿನಿಂದಲು ರಾಜರುಗಳು ವಿಶೇಷವಾಗಿ ಬಳಸುತ್ತಿದ್ದರೆ ಮತ್ತು
ರಾಜರ ಅರಮನೆಯಲ್ಲಿ ಮಹಿಳೆಯರು ವೈಭವಯುತವಾಗಿ ಇದನ್ನು ಬಳಸುತ್ತಿದ್ದರು. ಇಂದಿಗೂ, ಮಹಿಳೆಯರಿಗೆ ಮುತ್ತಿನ ಆಭರಣ
ಅತ್ಯಂತ ಪ್ರಮುಖವಾಗಿರುತ್ತದೆ.

ಮುತ್ತುಗಳು ಸಂಕೀರ್ಣವಾಗಿರುತ್ತವೆ ಮತ್ತು ಕ್ರೀಮ್‌ಗಳು ಮತ್ತು ರಾಸಾಯನಿಕಗಳಿಗೆ ನಿಯತವಾಗಿ ತೆರೆದುಕೊಂಡಾಗ
ಹಾಳಾಗುವ ಸಾಧ್ಯತೆ ಇರುವುದರಿಂದ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದನ್ನು ಧರಿಸುವಂತೆ ಸಲಹೆ ಮಾಡಲಾಗುತ್ತದೆ. ಸರಳ
ಮುತ್ತಿನ ಮೂಗುಬೊಟ್ಟು ವೈಭವಯುತವಾದ ನೋಟವನ್ನು ಒದಗಿಸುತ್ತದೆ. ಸಾಮಾನ್ಯ ಕಚೇರಿ ದಿರಿಸಿಗೂ ಮುತ್ತಿನ
ಮೂಗುಬೊಟ್ಟು ಸೂಕ್ತವಾಗಿದೆ. ನಿತ್ಯ ಹವಳದ ಬ್ರೇಸ್‌ಲೆಟ್‌ಗಳು ಮತ್ತು ಬಳೆಗಳನ್ನು ಬಳಸದೇ ಇರುವುದು ಉತ್ತಮ.

ಯಾಕೆಂದರೆ ಇದು ಬೇಗ ಸವೆಯುತ್ತದೆ. ವೈಭವಯುತ ಕಾರ್ಯಕ್ರಮಗಳಿಗೆ, ಮುತ್ತು ಅಳವಡಿಸಿದ ಚಾಂದ್‌ಬಲಿ ಕಿವಿಯೋಲೆ
ಉತ್ತಮ ಆಯ್ಕೆಯಾಗಿರುತ್ತದೆ. ವಧು ದಿರಿಸಿನಲ್ಲಿ ಹೆಚ್ಚಾಗಿ ಚಿನ್ನ ಮತ್ತು ವಜ್ರವನ್ನೇ ಬಳಸಲಾಗುತ್ತಿದ್ದರೂ, ಮುತ್ತಿನ ಆಭರಣಗಳಿಗೆ
ವಿಶೇಷ ಸ್ಥಾನವಿದೆ. ಹೊಳೆಯುವ ಚೋಕರ್‌ಗಳಿಂದ ಪದರ ಪದರವಾಗಿರುವ ಉದ್ದನೆಯ ನೆಕ್‌ಲೇಸ್‌ಗಳಿಗೆ ಮುತ್ತುಗಳು ವಿಶಿಷ್ಟ
ಲುಕ್ ಅನ್ನು ನೀಡುತ್ತವೆ. ಇದಕ್ಕೆ ಪರ್ಯಾಯವಾಗಿ, ಸರಳವಾದ ಮುತ್ತುಗಳು ಸುಂದರವಾದ ಲುಕ್ ನೀಡುತ್ತವೆ ಹಾಗೂ
ಔಪಚಾರಿಕ ಕಾರ್ಯಕ್ರಮಗಳಿಗೆ ಹೊಂದುತ್ತವೆ.

ಮುತ್ತು ಆಭರಣದಂತಹ ಮುತ್ತಿನ ಆಭರಣವು ಪ್ರತಿ ಮಹಿಳೆಗೆ ಹೊಂದುವಂತೆ ಮತ್ತು ಪ್ರತಿ ವ್ಯಕ್ತಿಗೆ ಹೊಂದುವಂತೆ
ಬದಲಿಸಿಕೊಳ್ಳಬಹುದು.

Can we help you?