kalyan jewellers - Articles

ನನ್ನನ್ನು ಪ್ರಕಾಶಮಾನವಾಗಿ ವರ್ಣಮಯಗೊಳಿಸಿ!

Publisher: blog

ಭಾರತವು ಸಂಸ್ಕøತಿ, ಪರಂಪರೆ ಮತ್ತು ಪ್ರಕಾಶಮಾನ ಬಣ್ಣಗಳ ಹೊಳಪಿನಿಂದ ಸಮೃದ್ಧವಾಗಿರುವ ದೇಶವಾಗಿದೆ. ಇದು ಕೂಡ ನಾವು ಧರಿಸಲು ಆಯ್ಕೆ ಮಾಡುವ ಆಭರಣಗಳ ಮೇಲೆ ಪ್ರತಿಫಲಿಸುತ್ತದೆ. ದೇಶವು ಆಭರಣ ತಯಾರಿಕೆಯ ಶ್ರೀಮಂತ ಮತ್ತು ವೈವಿಧ್ಯತೆಯ ಇತಿಹಾಸದೊಂದಿಗೆ ವಿವಿಧ ವಿಶಿಷ್ಠ ಶೈಲಿ ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಭಾರತೀಯ ಆಭರಣಗಳು ಅವುಗಳ ಸಂಕೀರ್ಣ ವಿನ್ಯಾಸ, ನುರಿತ ಕೌಶಲ್ಯಯುತ ಕರಕುಶಲತೆ ಹಾಗೂ ಅಮೂಲ್ಯ ಮತ್ತು ಅರೆ ಅಮೂಲ್ಯ ಹರಳುಗಳ ಬಳಕೆಗೂ ಪ್ರಸಿದ್ಧಿಯಾಗಿದೆ. ಈ ಆಭರಣದಲ್ಲಿ ಬಳಸಲಾದ ರೋಮಾಂಚನಕಾರಿ ವರ್ಣದ ಹರಳುಗಳು ಭಾರತದ ಅಭರಣ ವಿನ್ಯಾಸಗಳ ಸೌಂದರ್ಯ ಮತ್ತು ಸೊಬಗಿಗೆ ಸಾಕ್ಷಿಯಾಗಿದೆ. ಈ ಲೇಖನದಲ್ಲಿ ನಾವು ಈ ಬಣ್ಣದ ಹರಳುಗಳು ಮತ್ತು ನೀವು ಅಲಂಕರಿಸಬಹುದಾದ ಅಸಂಖ್ಯಾತ ಸನ್ನಿವೇಶಗಳನ್ನು ಅನ್ವೇಷಣೆ ಮಾಡೋಣ.

ಭಾರತದ ಆಭರಣಗಳಲ್ಲಿ ಬಳಸಲಾಗುವ ಅತ್ಯಂತ ಜನಪ್ರಿಯ ಬಣ್ಣದ ಕಲ್ಲುಗಳಲ್ಲಿ ಪಚ್ಚೆಕಲ್ಲು ಒಂದಾಗಿದೆ. ಪಚ್ಚೆಕಲ್ಲುಗಳು ತಮ್ಮ ಗಾಢ ಹಸಿರು ವರ್ಣಕ್ಕೆ ಹೆಸರುವಾಸಿಯಾಗಿದೆ ಮತ್ತು ಅವುಗಳನ್ನು ಸಾಮಾನ್ಯವಾಗಿ ಸಾಂಪ್ರದಾಯಿ ಭಾರತೀಯ ಆಭರಣಗಳಲ್ಲಿ ಅಂದರೆ ಸ್ಟೇಟ್‍ಮೆಂಟ್ ಸೆಟ್ ಮತ್ತು ನೆಕ್ಲೆಸ್‍ಗಳಲ್ಲಿ ಬಳಸಲಾಗುತ್ತದೆ. ನಾವು ಇದನ್ನು ಪಾರ್ಟಿಗಳಿಗೆ ಮತ್ತು ಭವ್ಯ ಆಚರಣೆಗಳ ಸಂದರ್ಭದಲ್ಲಿ ಧರಿಸಲು ನಿಮಗೆ ಶಿಫಾರಸ್ಸು ಮಾಡುತ್ತೇವೆ. ಪಚ್ಚೆಹರಳುಗಳು ಪಾರ್ಟಿ ಮತ್ತು ಆಚರಣೆಗಳಿಗೆ ಧರಿಸಲು ಜನಪ್ರಿಯ ಆಯ್ಕೆಗಳಾಗಿರುತ್ತವೆ. ಯಾಕೆಂದರೆ ಇದು ಒಟ್ಟಾರೆ ನೋಟಕ್ಕೆ ಅತ್ಯಾಧುನಿಕ ಮತ್ತು ಮನಮೋಹಕತೆಯನ್ನು ನೀಡುತ್ತದೆ. ಗೊಂಚಲು ಕಿವಿಯೋಲೆಗಳು, ಕಾಕಟೈಲ್ ಉಂಗುರಗಳು ಮತ್ತು ಪಚ್ಚೆಹರಳುಗಳಿಂದ ಜೋಡಿತ ಪದರು ನೆಕ್ಲೆಸ್‍ಗಳಂತಹ ಆಭರಣ ತುಣುಕುಗಳು ಈ ಸಂದರ್ಭಗಳಲ್ಲಿ ಸೂಕ್ತವಾಗಿರುತ್ತವೆ.

ಭಾರತದ ಆಭರಣಗಳಲ್ಲಿ ಬಳಸಲಾಗುವ ಜನಪ್ರಿಯವಾದ ಇನ್ನೊಂದು ಅಮೂಲ್ಯ ಹರಳೆಂದರೆ ಮಾಣಿಕ್ಯವಾಗಿದೆ. ಈ ಮಾಣಿಕ್ಯಗಳು ಅವುಗಳ ಶ್ರೀಮಂತ ಕೆಂಪು ಬಣ್ಣಕ್ಕೆ ಹೆಸರುವಾಸಿಯಾಗಿದೆ ಮತ್ತು ಅವುಗಳನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ಭಾರತೀಯ ಆಭರಣ ವಿನ್ಯಾಸಗಳಲ್ಲಿ ಬಳಸಲಾಗುತ್ತದೆ. ಭಾರತೀಯ ಸಂಸ್ಕøತಿಯಲ್ಲಿ ವಿವಾಹವು ಒಂದು ಪ್ರಮುಖ ಸಂದರ್ಭಗಳಲ್ಲಿ ಒಂದಾಗಿದೆ ಮತ್ತು ಆಭರಣಗಳು ವಧುವಿಗೆ ಅತ್ಯಂತ ಅವಶ್ಯಕ ಭಾಗವಾಗಿದೆ. ಸಾಂಪ್ರದಾಯಿಕ ವಧುವಿನ ಉಡುಪಿನ ಅಲಂಕಾರದ ಬಣ್ಣ ಪ್ರತಿಬಿಂಬಿಸುವುದರಿಂದ ಭಾರತೀಯ ವಿವಾಹಗಳಿಗೆ ಮಾಣಿಕ್ಯಗಳು ಅಚ್ಚುಮೆಚ್ಚಿನವುಗಳಾಗಿವೆ.

ನೀಲಿಮಣಿಗಳು ಯುವಜನರ ಜನಪ್ರಿಯ ಆಯ್ಕೆಯಾಗಿದೆ. ಅವು ನೀಲಿ, ಗುಲಾಬಿ ಹಾಗೂ ಹಳದಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಅವುಗಳಿರುತ್ತವೆ ಹಾಗೂ ಅವುಗಳನ್ನು ಸಾಮಾನ್ಯವಾಗಿ ಭಾರತೀಯ ಆಭರನ ವಿನ್ಯಾಸಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈ ಹರಳುಗಳನ್ನು ಕನಿಷ್ಠ ವಿನ್ಯಾಸಗಳಲ್ಲಿ ಅಳವಡಿಸಿದಾಗ ವ್ಯಾಪಾರ ಸಭೆ ಮತ್ತು ಕಾರ್ಪೋರೇಟ್ ಸಭೆಗಳಂತಹ ಔಪಚಾರಿಕ ಸಂದರ್ಭಗಳಿಗೆ ಪರಿಪೂರ್ಣ ಸೆಟ್ ಆಗಿದ್ದು ಇವು ಇಂತಹ ಸಂದರ್ಭಗಳಿಗೆ ಸರಿಹೊಂದುತ್ತದೆ. ಮಣಿಗಳ ಕಿವಿಯೋಲೆಗಳು, ಪೆಂಡೆಂಟ್‍ನೊಂದಿಗಿನ ನೆಕ್ಲೆಸ್‍ಗಳು ಮತ್ತು ಬಣ್ಣದ ಹರಳಿರುವ ತೆಳುವಾದ ಬಳೆಗಳಂತಹ ಸೂಕ್ಷ್ಮ ಆಭರಣ ತುಣುಕುಗಳು ನಿಮ್ಮ ಉಡುಪನ್ನು ಗಾಢವಾಗಿಸದೇ ಸೊಬಗಿನ ನೋಟವನ್ನು ನೀಡಬಹುದು.

ಇನ್ನು ಕೆಲವು ಜನಪ್ರಿಯ ಗಳಿಸುತ್ತಿರುವ ಇತರ ಅರೆ ಅಮೂಲ್ಯ ಹರಳುಗಳೆಂದರೆ ನೇರಳೆ, ನೀಲ ಮಣಿ, ಪದ್ಮರಾಗ ಮಣಿಗಳಾಗಿವೆ. ಇವುಗಳು ಒಟ್ಟಾಗಿ ವಾಡ್ರ್ರೋಬ್‍ನಲ್ಲಿ ಸೇರಿದಾಗ ಅವು ನಿಮ್ಮ ಸಾಪ್ರದಾಯಿಕ ಉಡುಗೆಗಳಿಗೆ ಉತ್ತಮ ಮೆರುಗು ನೀಡಲು ಸಹಕಾರಿಯಾಗುತ್ತದೆ. ಬ್ರಂಚ್‍ಗಳು, ಶಾಪಿಂಗ್ ಟ್ರಿಪ್ಸ್, ಅಥವಾ ಭೋಜನ ಕಾರ್ಯಕ್ರಮಗಳಿಗೆ ಹೋಗುವಾಗ ಇವು ಅತ್ಯುತ್ತಮವಾಗಿವೆ. ಬಣ್ಣದ ಹರಳುಗಳೊಂದಿಗಿನ ಮಣಿಗಳು, ಸ್ಟೇಕೆಬಲ್ ಉಂಗುರಗಳು ಮತ್ತು ಚಾರ್ಮ್ ಬ್ರಾಸ್ಲೆಟ್‍ಗಳಂತಹ ಆಭರಣ ತುಣುಕುಗಳು ಬಹುಮುಖವಾಗಿವೆ ಮತ್ತು ಅವುಗಳನ್ನು ವಿವಿಧ ರೀತಿಯ ಬಟ್ಟೆಗಳೊಂದಿಗೆ ಧರಿಸಬಹುದು.

ಹಬ್ಬಗಳು ನಿಮ್ಮ ಹಬ್ಬದ ಉಡುಪಿಗೆ ಬಣ್ಣದ ರಂಗನ್ನು ಸೇರಿಸುವುದರಿಂದ ಕಲ್ಲುಗಳಿಂದ ಕೂಡಿದ ಆಭರಣಗಳನ್ನು ಅಲಂಕರಿಸಲು ಉತ್ತಮ ಸಮಯವಾಗಿದೆ. ಹಾಗಾಗಿ ಅದು ದೀಪಾವಳಿಯಾಗಿರಲಿ, ದುರ್ಗಾಪೂಜೆಯಾಗಿರಲಿ ಅಥವಾ ನವರಾತ್ರಿಯಾಗಿರಲಿ ಅಮೂಲ್ಯವಾದ ವಿವಿಧ ಬಣ್ಣಗಳಲ್ಲಿ ಅಲಂಕರಿಸಿ. ನೀವು ಸಾಂಪ್ರದಾಯಿಕ ಅಥವಾ ಸಮಕಾಲೀನ ವಿನ್ಯಾಸಗಳನ್ನು ಹುಡುಕುತ್ತಿರಲಿ, ಈ ಪ್ರವೃತ್ತಿಗಳೊಂದಿಗೆ ನಿಮ್ಮ ಜಗತ್ತನ್ನು ಬಣ್ಣಿಸಲು ಮರೆಯದಿರಿ.