Kalyan Jewellers India Limited - Articles

2023 ಆಭರಣ ಪ್ರವೃತ್ತಿ

Publisher: blog

2023 ರಲ್ಲಿ ನಿರೀಕ್ಷಿಸಬಹುದಾದ ಆಭರಣ ಟ್ರೆಂಡ್‌ಗಳು,


ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ 2023 ಬಂದುಬಿಟ್ಟಿದೆ!

 

ಹೊಸ ಆರಂಭ ಮತ್ತು ಉತ್ತಮ ಜೀವನಶೈಲಿ ಆಯ್ಕೆಗಳನ್ನು ನಾವು ಎದುರುನೋಡುತ್ತಿರುವಾಗ, ಆಭರಣ ಟ್ರೆಂಡ್‌ಗಳ ನಿಟ್ಟಿನಲ್ಲಿ ಈ ವರ್ಷ ನಾವು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನೋಡೋಣ.


ಎಲ್ಲದರಂತೆಯೇ, ಆಭರಣದ ಟ್ರೆಂಡ್‌ಗಳೂ ಕೂಡ ನಿರಂತರವಾಗಿ ಬದಲಾಗುತ್ತಿದೆ. ಆದರೆ, ಕೆಲವು ಸಂಗತಿಗಳು ಸ್ಥಿರವಾಗಿಯೂ ಇರುತ್ತವೆ. ಅಟ್ಯಾಚ್‌ಮೆಂಟ್‌, ಕಾಲಾತೀತ ಕ್ಲಾಸಿಕ್‌ಗಳ ಹಾಗೆ. ಚಿನ್ನದ ಬಗ್ಗೆ ನಮ್ಮ ಪ್ರೀತಿ ಮತ್ತು ಆಭರಣದಲ್ಲಿ ಸ್ಟೋನ್‌ಗಳನ್ನು ಅಳವಡಿಸುವ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

 

ನಮ್ಮ ಬಹುತೇಕರಿಗೆ, ಆಭರಣ ಎಂಬುದು ತುಂಬಾ ವೈಯಕ್ತಿಕ ಸಂಗತಿ. ಇದು ಒಂದು ಕಥೆ, ಒಂದು ಭಾವವನ್ನು ಹೇಳುತ್ತದೆ. ಕೆಲವು ಬಾರಿ ಸುಂದರ ನೆನಪುಗಳನ್ನೂ ಇದು ಒಳಗೊಂಡಿರುತ್ತದೆ. ಕಿವಿಯಿಂದ ಇಳಿಯುವ ಕಿವಿಯೋಲೆಗಳು, ಆಕರ್ಷಕ ಬ್ರೇಸ್‌ಲೆಟ್‌ಗಳು, ಕ್ಲಾಸಿಕ್ ಹವಳಗಳ ಧರಿಸುವುದೂ ಸೇರಿದಂತೆ 2023 ರ ಆಭರಣ ಟ್ರೆಂಡ್‌ನಲ್ಲಿ ಎಲ್ಲವೂ ಇವೆ. ವರ್ಷದ ಮುಂದಿನ ದಿನಗಳಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಮುನ್ನೋಟ ಇಲ್ಲಿದೆ.

 

ಮತ್ತೆ ಬಂದಿದೆ


ವಿಶಿಷ್ಟ ಆಭರಣಗಳು, ದೊಡ್ಡ ಗಾತ್ರದ ಹೂಪ್‌ಗಳು ಮತ್ತು ಜ್ಯಾಮಿತಿ ಆಕಾರವನ್ನು ಹೊಂದಿರುವ 80 ಮತ್ತು 90 ರ ದಶಕದ ಆಭರಣ 2023 ರಲ್ಲಿ ಮತ್ತೆ ಬರುತ್ತಿದೆ.

 

ಹಲವು ಆಭರಣಗಳನ್ನು ಪದರಗಳನ್ನಾಗಿ ಧರಿಸುವುದು ಮತ್ತು ಪೇರಿಸುವುದು ಈ ವರ್ಷದಲ್ಲಿ ಜನಪ್ರಿಯ ಪ್ರವೃತ್ತಿ ಆಗಿರಲಿದೆ. ಇದರಲ್ಲಿ ಬೇರೆ ಬೇರೆ ನೆಕ್‌ಲೆಸ್‌ ಅಥವಾ ಬ್ರೇಸ್‌ಲೆಟ್‌ಗಳನ್ನು ಪದರವನ್ನಾಗಿ ಮಾಡುವುದು ಅಥವಾ ರಿಂಗ್‌ಗಳು ಮತ್ತು ಬಳೆಗಳನ್ನು ಪೇರಿಸುವುದೂ ಸೇರಿವೆ.

 

ಸ್ಟೇಟ್‌ಮೆಂಟ್ ಪೀಸ್‌ಗಳು


ಬೋಲ್ಡ್‌ ಆಗಿರುವ ಮತ್ತು ಕಣ್ಸೆಳೆಯುವ ಆಭರಣ ಪೀಸ್‌ಗಳಾದ ಆಕರ್ಷಕವಾಗಿ ಹೊಳೆಯುವ ರಿಂಗ್‌ಗಳು, ಸ್ಟೇಟ್‌ಮೆಂಟ್‌ ಕಿವಿಯೋಲೆಗಳು ಮತ್ತು ದೊಡ್ಡ ಗಾತ್ರ ಪದಕಗಳನ್ನು ನಾವು ಎದುರು ನೋಡಬಹ�ದು.

ಫ್ಯಾಷನ್ ಸ್ಟೇಟ್‌ಮೆಂಟ್‌ಗೆ ಮತ್ತು ಉಡುಪುಗಳಿಗೆ ಒಂದು ಹೊಸ ಲುಕ್ ನೀಡಲು ಈ ಪೀಸ್‌ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

 

ವಿಂಟೇಜ್ ಮತ್ತು ಆಂಟಿಕ್‌

ವಿಂಟೇಜ್‌ ಎಂದಿಗೂ ಹಳೆಯ ಸ್ಟೈಲ್ ಆಗುವುದಿಲ್ಲ. ಜನರು ವಿಶಿಷ್ಟ ಮತ್ತು ವೈವಿಧ್ಯಮಯ ಆಭರಣಗಳನ್ನು ಜನರು ಹುಡುಕುತ್ತಲೇ ಇರುತ್ತಾರೆ. ಆಂಟಿಕ್ ಕಾಸ್ಟ್ಯೂಮ್‌ ಆಭರಣ ಹಾಗೂ ಹಿಂದಿನ ಕಾಲದ ಸುಂದರ ಆಭರಣವೂ ಜನರಿಗೆ ಇಷ್ಟವಾಗುತ್ತದೆ. ಅಸಲಿ ಆಭರಣ ನಿಮಗೆ ಬೇಕಿದ್ದರೆ ನಿಮ್ಮ ಅಮ್ಮ ಮತ್ತು ಅಜ್ಜಿಯಂದಿರ ಆಭರಣದ ಪೆಟ್ಟಿಗೆಯನ್ನು ಹುಡುಕಿ ಎಂದು ನಾವು ಸಲಹೆ ನೀಡುತ್ತೇವೆ.

 

ವೈಯಕ್ತಿಕಗೊಳಿಸಿದ ಮತ್ತು ಕಸ್ಟಮೈಸ್ ಮಾಡಿದ ಆಭರಣ

ತಂತ್ರಜ್ಞಾನ ಬೆಳೆದಿರುವುದರಿಂದ ಆಭರಣ ವಿನ್ಯಾಸ ಮಾಡುವುದು ಈಗ ಸುಲಭ ಮತ್ತು ನಿಮ್ಮ ಆಭರಣವನ್ನು ನೀವು ಕಸ್ಟಮೈಸ್ ಮಾಡಿಕೊಳ್ಳಬಹುದು. ಕಸ್ಟಮೈಸ್ ಮಾಡಿದ ಮತ್ತು ವೈಯಕ್ತಿಕಗೊಳಿಸಿದ ಆಭರಣಗಳಿಗೆ ಈಗ ಟ್ರೆಂಡ್‌ ನಡೆಯುತ್ತಿದೆ. ನಿಮ್ಮ ಸ್ಟೈಲ್ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಇದನ್ನು ಹೊಂದಿಸಬಹುದು. ಹೀಗಾಗಿ, ಇನ್ನೇಕೆ ತಡ? ಸುಂದರ ಆಭರಣವನ್ನು ನಿಮ್ಮದಾಗಿಸಿಕೊಳ್ಳಿ!

 

2023 ರ ಆಭರಣಗಳು

1) ಕಿವಿಯೋಲೆಗಳು ತಕ್ಷಣದ ಅಪ್‌ಗ್ರೇಡ್ ಮಾಡುವುದಕ್ಕೆ ಕಾಯ್ದುಕೊಂಡಿರುತ್ತಾರೆ.

2) ಅಮೂಲ್ಯ ಹವಳಗಳು ಕ್ಲಾಸಿಕ್ ಲುಕ್ ಅನ್ನು ನೀಡುತ್ತವೆ. ಈ ವರ್ಷ ಅವು ಮತ್ತೆ ಬರುತ್ತಿದ್ದು, ವಿನ್ಯಾಸ ಮತ್ತು ಸ್ಟೈಲ್‌ನಲ್ಲಿ ಆಧುನಿಕತೆಯನ್ನು ಒಳಗೊಂಡಿರಲಿದೆ.

3) ವಜ್ರಗಳು ಈಗಲೂ ಸ್ತ್ರೀಯರ ಸ್ನೇಹಿತ. ಈ ಹೊಳೆಯುವ ಆಭರಣಗಳು ಮಳೆ ಬರಲಿ, ಬಿಸಿಲಿರಲಿ 100% ಜೊತೆಗೇ ಇರುತ್ತವೆ.

4) ಹೂವಿನ ವಿನ್ಯಾಸದ ಆಭರಣಗಳು ಎಂದಿಗೂ ಹಸಿರು ಹಸಿರಾಗಿಯೇ ಇರುತ್ತವೆ. ಅದರಲ್ಲೂ ವಸಂತ ಕಾಲದಲ್ಲಂತೂ ಹೂವಿನ ವಿನ್ಯಾಸದ ಆಭರಣಗಳು ಅದ್ಭುತವಾಗಿರುತ್ತವೆ. ಅಂತಹ ಹೂವಿನ ವಿನ್ಯಾಸಗಳನ್ನು ಮತ್ತು ಅಮೂಲ್ಯ ಆಭರಣಗಳು ಈ ವರ್ಷ ಮರಳಿ ಹೊಳೆಯಲಿವೆ.

 

ಹೀಗಾಗಿ, ಈಗ ನಿಮಗೆ ಏನನ್ನು ನಿರೀಕ್ಷಿಸಬೇಕು ಎಂದು ತಿಳಿದಿದೆ. ಪ್ರವೃತ್ತಿ ಮತ್ತು ಕಾಲಾತೀತ ಆಭರಣಗಳ ಮಧ್ಯೆ ಸಮತೋಲನ ಸಾಧಿಸುವುದಕ್ಕೆ ಇದು ಅತ್ಯಂತ ಮುಖ್ಯವಾದುದು. ಇದರ ಅತ್ಯಂತ ಪ್ರಮುಖ ಸಂಗತಿಯೆಂದರೆ, ಯಾವ ಆಭರಣಗಳನ್ನು ಒಟ್ಟಿಗೆ ಸೇರಿಸಬೇಕು ಎಂದು ಹುಡುಕುವುದು! ಆದರೆ, ನಮ್ಮ ಬಳಿ ಎಲ್ಲವೂ ಇದೆ. ಇಡೀ ವರ್ಷ ನಿಮಗೆ ಸ್ಫೂರ್ತಿ ನೀಡುವ ಮತ್ತು ಹೊಳೆ ಹೊಳೆಯುವ ನಮ್ಮ ಕಲೆಕ್ಷನ್‌ ನೋಡಿ.