Kalyan Jewellers India Limited - Articles

ಚಾರ್ಮ್‌ ಬ್ರೇಸ್‌ಲೆಟ್‌ಗಳು

ಮಹಿಳೆಯರು ಮತ್ತು ಪುರುಷರು ಇಬ್ಬರೂ ಧರಿಸಬಹುದಾದ ಕೆಲವೇ ಆಭರಣಗಳಲ್ಲಿ ಬ್ರೇಸ್‌ಲೆಟ್‌ ಕೂಡಾ ಒಂದು. ಬ್ರೇಸ್‌ಲೆಟ್‌ನ ಇತಿಹಾಸ ತುಂಬಾ ಹಳೆಯದು. ಭಾರತೀಯ ಪುರಾಣದಲ್ಲೂ ಈ ವಿಷಯದ ಬಗ್ಗೆ ಹಲವು ಉಲ್ಲೇಖಗಳಿವೆ. ಪುರಾತನ ಕಾಲದಲ್ಲಿ, ಧಾರ್ಮಿಕ ನಂಬಿಕೆಗಳು, ರಾಜಕೀಯ ಸಂಬಂಧಗಳು, ವೃತ್ತಿ ಇತ್ಯಾದಿಯಲ್ಲೂ ಬ್ರೇಸ್‌ಲೆಟ್‌ಗಳು ವಿವಿಧ ವಿಚಾರಗಳಲ್ಲಿ ಮಧ್ಯಸ್ಥಿಕೆ ವಹಿಸಿತ್ತು. ಚಾರ್ಮ್‌ ಬ್ರೇಸ್‌ಲೆಟ್‌ಗಳು ಅದೃಷ್ಟದ ಸಂಕೇತವಾಗಿ ಕಾಣಿಸಿಕೊಂಡಿತ್ತು.

 

ಯೋಧರು ಸಣ್ಣ ಟ್ರಿಂಕೆಟ್‌ಗಳನ್ನು ಧರಿಸುತ್ತಿದ್ದರು ಎಂದು ಹೇಳಲಾಗಿದೆ. ಚಿನ್ನ, ಬೆಳ್ಳಿ ಅಥವಾ ತಾಮ್ರದ ದಾರಗಳಲ್ಲಿ ನೇಯ್ಗೆ ಮಾಡಿದ ಸೀ ಶೆಲ್‌ಗಳು, ಹವಳಗಳು ಅಥವಾ ಕ್ಲೋವರ್ ಎಲೆಗಳನ್ನು ಮುಂಗೈಗೆ ಕಟ್ಟಿಕೊಳ್ಳುತ್ತಿದ್ದರು. ಇದು ಯುದ್ಧದ ಸಮಯದಲ್ಲಿ ಅವರಿಗೆ ಅದೃಷ್ಟ ಮತ್ತು ಯಶಸ್ಸನ್ನು ನೀಡುತ್ತದೆ ಎಂಬ ನಂಬಿಕೆ ಇತ್ತು. ರಾಜರು ಮತ್ತು ಇತರ ಶ್ರೀಮಂತರು ಚಿನ್ನದ ದಾರಗಳಿಂದ ಪೋಣಿಸಿಕೊಂಡಿದ್ದರೆ, ಇತರರು ತಾಮ್ರದ ದಾರಗಳನ್ನು ಬಳಸುತ್ತಿದ್ದರು. ಯುದ್ಧದ ಸಮಯದಲ್ಲಿ ಶುರುವಾದ ಈ ನಂಬಿಕೆ ನಿಧಾನವಾಗಿ ತಲೆಮಾರುಗಳು ಕಳೆದ ನಂತರದಲ್ಲಿ ದೈನಂದಿನ ಬಳಕೆಗೂ ಬಂತು. ಹಲವು ಜನಪ್ರಿಯ ರಾಣಿಯರ ಬಳಿ ಈ ರೀತಿಯ ವಿವಿಧ ಅಲಂಕಾರಗಳನ್ನು ಹೊಂದಿರುವ ಚಾರ್ಮ್‌ ಬ್ರೇಸ್‌ಲೆಟ್‌ಗಳು ಇದ್ದವು. ಈ ಸಂಸ್ಕೃತಿ ಹಲವು ತಲೆಮಾರುಗಳನ್ನು ದಾಟಿ ಬಂದಿದೆ. ಚಾರ್ಮ್‌ ಬ್ರೇಸ್‌ಲೆಟ್‌ಗಳು ಆಸಕ್ತಿಕರ ಕುಸುರಿ ಆಭರಣವಾಗಿ ಬೆಳೆದಿದ್ದು, ಸಾವಿರಾರು ಕಥೆಗಳನ್ನು ಇವು ಹೇಳುತ್ತವೆ.

 

1940 ರ ಕಾಲದಲ್ಲಿ ಅಮೆರಿಕದ ಮಹಿಳೆಯರು ಮತ್ತು ಯುವತಿಯರಲ್ಲಿ ಈ ಚಾರ್ಮ್‌ ಬ್ರೇಸ್‌ಲೆಟ್‌ಗಳು ಅತ್ಯಂತ ಜನಪ್ರಿಯವಾಗಿದ್ದವು. ತಮ್ಮ ವ್ಯಕ್ತಿತ್ವವನ್ನು ಪ್ರತಿಫಲಿಸುವ ಚಾರ್ಮ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದರಲ್ಲಿ ಅವರ ಇಷ್ಟಗಳು, ಇಷ್ಟವಿಲ್ಲದ ಸಮಗತಿಗಳು, ವಿಶಿಷ್ಟ ಅನುಭವಗಳು ಅಥವಾ ಸರಳ ಚಾರ್ಮ್‌ಗಳೂ ಇರುತ್ತಿದ್ದವು. ಇವುಗಳನ್ನು ಚಿನ್ನ, ಬೆಳ್ಳಿ ಅಥವಾ ಯಾವುದೇ ಇತರ ಲೋಹಗಳಿಂದ ಮಾಡಲಾಗಿರುತ್ತಿತ್ತು. ಇವುಗಳನ್ನು ಚಿನ್ನ ಅಥವಾ ಬೆಳ್ಳಿಯ ದಾರಗಳಿಂದ ಪೋಣಿಸಿ ಮುಂಗೈಗೆ ಕಟ್ಟಿಕೊಳ್ಳುತ್ತಿದ್ದರು. ಹುಡುಗಿ ಬೆಳೆಯುತ್ತಿದ್ದ ಹಾಗೆಯೇ, ಆ ಬ್ರೇಸ್‌ಲೆಟ್‌ಗೆ ಇನ್ನಷ್ಟು ಚಾರ್ಮ್‌ಗಳನ್ನು ಸೇರಿಸಲಾಗುತ್ತಿತ್ತು. ಇದು ಆಕೆಯ ಬೆಳವಣಿಗೆಯ ಹಂತವನ್ನೂ ಪ್ರತಿಫಲಿಸುತ್ತಿತ್ತು. ಆದರೆ, ಕೆಲವು ದಶಕಗಳ ನಂತರ ಈ ಟ್ರೆಂಡ್‌ ಜನಪ್ರಿಯತೆ ಕಳೆದುಕೊಂಡಿತು. ಆದರೆ, ಈಗ ಮತ್ತೆ ಇದು ಮರಳಿದೆ. ಇಂದಿನ ಯುವತಿಯರಿಗೆ 1940 ರಲ್ಲಿ ತಯಾರಿಸಿದ ಚಾರ್ಮ್‌ ಬ್ರೇಸ್‌ಲೆಟ್‌ಗಳನ್ನು ಧರಿಸುವುದು ಇಷ್ಟವಾಗುತ್ತಿದೆ. ಇದಕ್ಕೊಂದು ಪುರಾತನ ಕಾಲದ ಸ್ಪರ್ಶವಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಬ್ರೇಸ್‌ಲೆಟ್‌ಗಳು ಹಲವು ಖುಷಿಯ ಕ್ಷಣಗಳನ್ನು ನೆನಪಿಸುತ್ತವೆ.

 

ಈ ಟ್ರೆಂಡ್‌ನಲ್ಲಿ ಭಾರತ ಸ್ವಲ್ಪ ಹಿಂದಿದ್ದರೂ, ಪ್ರಸ್ತುತ ಫ್ಯಾಷನ್‌ ಟ್ರೆಂಡ್‌ನಲ್ಲಿ ಈ ಚಾರ್ಮ್‌ ಬ್ರೇಸ್‌ಲೆಟ್‌ ಯುವ ಜನಾಂಗಕ್ಕೆ ಆಸಕ್ತಿ ಮೂಡಿಸುತ್ತಿದೆ. ಮಾರ್ಕೆಟ್‌ನಲ್ಲಿ ಹಲವು ಚಾರ್ಮ್‌ಗಳು ಈಗ ಲಭ್ಯವಿವೆ. ಯುವತಿಯ ಖುಷಿಗೆ ತಕ್ಕಂತೆ ಇವುಗಳನ್ನು ಜೋಡಿಸಿಕೊಂಡು ಬ್ರೇಸ್‌ಲೆಟ್ ಆಗಿ ಮಾಡಿಕೊಳ್ಳಬಹುದಾಗಿದೆ.