Kalyan Jewellers India Limited - Articles

ದೀಪಾವಳಿ – ಪ್ರತಿ ಭಾರತೀಯರ ಸಂಭ್ರಮಾಚರಣೆ

Publisher: blog

ದೀಪಾವಳಿ ಬೆಳಕಿನ ಹಬ್ಬ. ಇದನ್ನು ವಿಶ್ವದ ಎಲ್ಲೆಡೆ ಆಚರಿಸಲಾಗುತ್ತದೆ. ದುಷ್ಟರ ವಿರುದ್ಧ ಉತ್ತಮರ ವಿಜಯ ಅಥವಾ

ಕತ್ತಲೆಯ ವಿರುದ್ಧ ಬೆಳಕಿನ ವಿಜಯ ಎಂಬುದನ್ನು ದೀಪಾವಳಿ ಸೂಚಿಸುತ್ತದೆ. ದೀಪಾವಳಿಯನ್ನು ಅದ್ಧೂರಿಯಿಂದ

ಆಚರಿಸಲಾಗುತ್ತದೆ. ಇದು ಕುಟುಂಬದ ಜನರೆಲ್ಲರೂ ಒಟ್ಟಾಗಿ ಸೇರುವ, ಕುಟುಂಬದ ಬಾಂಧವ್ಯ, ಪ್ರೀತಿ ಮತ್ತು ಸ್ನೇಹದ

ಹಬ್ಬವೂ ಹೌದು.

ಬೆಳಕಿನ ಹಬ್ಬ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ, ನಿಮ್ಮ ಸಂಭ್ರಮಗಳಿಗೆ ಚಿನ್ನ ಮತ್ತು ವಜ್ರದ ಆಭರಣಗಳನ್ನು ಸೇರಿಸಿ

ಹಬ್ಬವನ್ನು ಇನ್ನಷ್ಟು ಸಂಭ್ರಮಯುತವಾಗಿಸಿ. ಚಿನ್ನ ಮತ್ತು ವಜ್ರಗಳು ಪ್ರೀತಿ ಪಾತ್ರರಿಗೆ ಸುಂದರವಾದ ಉಡುಗೊರೆ

ಆಯ್ಕೆಗಳಾಗಿವೆ.


ದಿನ ಒಂದು – ಧನ್‌ತೇರಸ್

ದೀಪಾವಳಿಯು ಐದು ದಿನದ ಹಬ್ಬವಾಗಿದ್ದು, ಇದು ಧನ್‌ತೇರಸ್‌ನಿಂದ ಆರಂಭವಾಗುತ್ತದೆ. ಇದನ್ನು ಧನತ್ರಯೋದಶಿ

ಎಂದೂ ಕರೆಯಲಾಗುತ್ತದೆ. ಚಿನ್ನ, ವಜ್ರ ಅಥವಾ ಬೆಳ್ಳಿ ಆಭರಣಗಳನ್ನು ಖರೀದಿ ಮಾಡಲು ಅತ್ಯಂತ ಮಂಗಳಕರ ದಿನ

ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಇವು ಸಂಪತ್ತು ಮತ್ತು ಅದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ. ಚಿನ್ನದ

ನಾಣ್ಯಗಳು ಅಥವಾ ವಜ್ರ ಖಚಿತ ಬ್ರೇಸ್‌ಲೆಟ್ ಅನ್ನು ಖರೀದಿ ಮಾಡುವ ಮೂಲಕ ಮನೆಗೆ ಸಂಪತ್ತನ್ನು ತನ್ನಿ.


ದಿನ ಎರಡು – ನರಕ ಚತುರ್ದಶಿ ಅಥವಾ ಛೋಟಿ ದೀಪಾವಳಿ

ದೀಪಾವಳಿಯ ಎರಡನೇ ದಿನ ನರಕ ಚತುರ್ದಶಿ ಆಗಿದ್ದು, ಇದನ್ನು ಛೋಟಿ ದೀಪಾವಳಿ ಎಂದೂ ಕರೆಯಲಾಗುತ್ತದೆ. ಈ

ದಿನದಂದು ನರಕಾಸುರ ವಿರುದ್ಧ ಕೃಷ್ಣ ವಿಜಯ ಸಾಧಿಸಿದ ದಿನ ಎಂದು ಪರಿಗಣಿಸಲಾಗುತ್ತದೆ. ಅತಿಥಿಗಳನ್ನು

ಆಹ್ವಾನಿಸಲು ಜನರು ವಿವಿಧ ಸಿಹಿತಿಂಡಿಗಳನ್ನು ಖರೀದಿ ಮಾಡುತ್ತಾರೆ. ಇದು ಸ್ನೇಹಿತರು ಮತ್ತು ಸಂಬಂಧಿಕರು ಮನೆಗೆ

ಭೇಟಿ ನೀಡಿ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ದಿನವೂ ಆಗಿದೆ.


ನಿಮ್ಮ ಪ್ರೀತಿ ಪಾತ್ರರಿಗೆ ಸುಂದರವಾದ ಚಿನ್ನದ ಆಭರಣವನ್ನು ಉಡುಗೊರೆ ನೀಡುವ ಮೂಲಕ ಈ ಛೋಟಿ

ದೀಪಾವಳಿಯನ್ನು ವಿಶೇಷವನ್ನಾಗಿಸಿ. ಸುಂದರ ಚಿನ್ನದ ಪೆಂಡೆಂಟ್ ಅಥವಾ ಅಮೂಲ್ಯ ಹವಳಗಳನ್ನು ಹೊಂದಿರುವ

ಬ್ರೇಸ್‌ಲೆಟ್‌ನಿಂದ ಅವರು ವಿಶೇಷ ಎಂಬ ಭಾವ ಪಡೆಯುತ್ತಾರೆ.


ದಿನ ಮೂರು – ದೀಪಾವಳಿ

ಮೂರನೆಯ ದಿನ ದೀಪಾವಳಿ ಅತ್ಯಂತ ಪ್ರಮುಖವಾಗಿದೆ ಮತ್ತು ಸಂಭ್ರಮಾಚರಣೆ ಅತ್ಯಂತ ಉತ್ಸಾಹದಿಂದ

ನಡೆಯುತ್ತದೆ. ದೀಪಾವಳಿ ಸಂಭ್ರಮಾಚರಣೆಗೆ ಮಹಿಳೆಯರು ಸಂಭ್ರಮದಿಂದ ಸಿದ್ಧವಾಗುತ್ತಾರೆ.


ನಿಮ್ಮ ದೀಪಾವಳಿ ಲುಕ್ ಅನ್ನು ಸುಂದರವಾಗಿಸಲು ಸುಂದರ ಚಿನ್ನ ಮತ್ತು ವಜ್ರದ ಆಭರಣಗಳು ಉತ್ತಮವಾಗಿವೆ. ವಜ್ರ

ಖಚಿತ ಚೋಕರ್ ಮತ್ತು ಹೊಂದಿಕೆಯಾಗುವ ವಜ್ರದ ಕಿವಿಯೋಲೆಗಳನ್ನು ಸೇರಿಸಿಕೊಳ್ಳಿ. ನೀವು ನಿಜಕ್ಕೂ ಅದ್ಭುತವಾಗಿ

ಕಾಣಿಸುತ್ತೀರಿ.

ಸುಂದರ ವಿನ್ಯಾಸ ಮತ್ತು ಚಾಂದ್‌ಬಲಿ ಕಿವಿಯೋಲೆಗಳಲ್ಲಿ ಪದರವನ್ನು ಹೊಂದಿರುವ ಚಿನ್ನದ ನೆಕ್‌ಲೇಸ್ ಬಳಸಿ

ಸಾಂಪ್ರದಾಯಿಕ ಲುಕ್ ಪಡೆಯಿರಿ. ರೂಬಿಗಳು ಮತ್ತು ಅಮೂಲ್ಯ ಸ್ಟೋನ್‌ಗಳನ್ನು ಹೊಂದಿರುವ ಚಿನ್ನದ ಬಳೆಗಳು

ನಿಮ್ಮ ದೀಪಾವಳಿ ಲುಕ್ ಅನ್ನು ಪರಿಪೂರ್ಣಗೊಳಿಸುತ್ತದೆ.


ದಿನ ನಾಲ್ಕು – ಪಾಡ್ವಾ

ನಾಲ್ಕನೇ ದಿನವನ್ನು ಪಾಡ್ವಾ ಎಂದು ಕರೆಯಲಾಗುತ್ತದೆ ಮತ್ತು ಇದು ಪತಿ ಮತ್ತು ಪತ್ನಿಯ ಮಧ್ಯದ ಪ್ರೀತಿ ಹಾಗೂ

ಬಾಂಧವ್ಯವನ್ನು ಸೂಚಿಸುತ್ತದೆ. ಪತಿಯ ಮುಂದಲೆಗೆ ಪತ್ನಿ ತಿಲಕವನ್ನು ಇಡುತ್ತಾಳೆ ಮತ್ತು ಪತಿಯ ಸಂಪತ್ತು ಮತ್ತು

ಆಯುರಾರೋಗ್ಯಕ್ಕಾಗಿ ಬೇಡಿಕೊಳ್ಳುತ್ತಾಳೆ. ಪ್ರೀತಿ ಮತ್ತು ಕಾಳಜಿಯ ದ್ಯೋತಕವಾಗಿ ಪತಿ ಉಡುಗೊರೆಗಳನ್ನು ಪತ್ನಿಗೆ

ಕೊಡುತ್ತಾನೆ.


ಸುಂದರ ಪೋಲ್ಕಿ ಅಳವಡಿಇಸದ ನೆಕ್‌ಲೇಸ್‌ ಹಾಗೂ ಹೋಲಿಕೆಯಾಗುವ ಕಿವಿಯೋಲೆಗಳು ಪ್ರೀತಿಯನ್ನು ಸೂಚಿಸಲು

ಉತ್ತಮ ಉಡುಗೊರೆಯಾಗಿರಲಿದೆ. ಪೋಲ್ಕಿ ಆಭರಣವು ಬಾಹ್ಯವಾಗಿದೆ ಮತ್ತು ಸಾಂಪ್ರದಾಯಿಕ ಮತ್ತು ಆಧುನಿಕ

ವಿನ್ಯಾಸಗಳನ್ನು ಹೊಂದಿದೆ. ಹೀಗಾಗಿ ಇದು ಉತ್ತಮ ಉಡುಗೊರೆ ಆಯ್ಕೆಯಾಗಿರಲಿದೆ. ವಜ್ರ ಮತ್ತು ಎಮರಾಲ್ಡ್‌

ಹೊಂದಿರುವ ರಿಂಗ್‌ ಕೂಡಾ ಆಕರ್ಷಕ ಉಡುಗೊರೆಯಾಗಿದೆ.


ದಿನ ಐದು – ಭೈಯ್ಯಾ ದೂಜ್‌ ಅಥವಾ ಭಾಯಿ ದೂಜ್

ದೀಪಾವಳಿಯ ಕೊನೆಯ ದಿನವು ಸೋದರ ಮತ್ತು ಸೋದರಿಯ ಬಾಂಧವ್ಯಕ್ಕೆ ಮೀಸಲಾಗಿದೆ. ಪ್ರೀತಿಯ ದ್ಯೋತಕವಾಗಿ,

ಸೋದರಿಯು ಸೋದರನ ಮುಂದಲೆಗೆ ತಿಲಕವನ್ನು ಇಡುತ್ತಾಳೆ ಮತ್ತು ಇದಕ್ಕೆ ಪ್ರತಿಯಾಗಿ ಸೋದರನು ಸೋದರಿಗೆ

ಉಡುಗೊರೆಯನ್ನು ನೀಡುತ್ತಾನೆ.


ಈ ದೀಪಾವಳಿಯಲ್ಲಿ ನಿಮ್ಮ ಸೋದರಿಗೆ ವಿಶೇಷ ಉಡುಗೊರೆ ನೀಡಿ. ಕುಂದನ್‌ ಕುಸುರಿಯಲ್ಲಿ ಸುಂದರವಾಗಿ ವಿನ್ಯಾಸ

ಮಾಡಿದ ನೆಕ್‌ಲೇಸ್‌ ಮತ್ತು ಹೊಂದುವ ಕಿವಿಯೋಲೆಗಳನ್ನು ನೀಡಿ. ಅಮೂಲ್ಯ ಹವಳಗಳನ್ನು ಅಳವಡಿಸಿದ ಕಡ

ಅಥವಾ ದಪ್ಪನೆಯ ಚಿನ್ನದ ಬಳೆಯು ನಿಮ್ಮ ಸೋದರಿಯ ಮುಖದ ಮೇಲೆ ನಗುವನ್ನು ಮೂಡಿಸಲಿದೆ.


ಈ ದೀಪಾವಳಿ ಸಂಭ್ರಮಾಚರಣೆಯಲ್ಲಿ ಕಲ್ಯಾಣ್‌ ಜ್ಯುವೆಲ್ಲರ್ಸ್‌ನಿಂದ ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣಗಳನ್ನು ಆಯ್ಕೆ

ಮಾಡಿಕೊಳ್ಳಲು ಮರೆಯಬೇಡಿ.