Kalyan Jewellers India Limited - Articles

ನವರಾತ್ರಿ ನವರಸ

Publisher: blog

ದೈವಿ ಭಾವವನ್ನು ಉದ್ದೇಶಿಸುವ ಹಬ್ಬವೇ ನವರಾತ್ರಿ. ಈ ಹಬ್ಬದಲ್ಲಿ ಸಂಸ್ಕೃತಿ, ಸಂಭ್ರಮ ಮತ್ತು ಆಧ್ಯಾತ್ಮವೆಲ್ಲವೂ ಇವೆ. ನವರಾತ್ರಿ

ಎಂದರೆ ಒಂಬತ್ತು ರಾತ್ರಿಗಳು. ದುರ್ಗಾ ಮಾತೆಯ ಒಂದೊಂದು ರೂಪವೂ ಈ ಒಂಬತ್ತು ರಾತ್ರಿಯನ್ನು ಪ್ರತಿಫಲಿಸುತ್ತವೆ.

ಮಹಿಳೆಯರಿಗೆ ಇದು ತಮ್ಮೊಳಗಿನ ಅಧ್ಯಾತ್ಮವನ್ನು ಪ್ರತಿಫಲಿಸುವ ಸಮಯ ಮಾತ್ರವಲ್ಲ, ತಮ್ಮ ಸ್ತ್ರೀ ಸೌಂದರ್ಯವನ್ನು

ಅನಾವರಣಗೊಳಿಸುವ ಸಮಯವೂ ಹೌದು.

ದಾಂಡಿಯಾ ಮತ್ತು ಗರ್ಭಾ ಇಲ್ಲದೇ ನವರಾತ್ರಿ ಸಂಭ್ರಮ ಪೂರ್ಣಗೊಳ್ಳುವುದೇ ಇಲ್ಲ. ಒಳ್ಳೆಯ ಉಡುಪು ಧರಿಸುವುದಕ್ಕೆ ಇದೊಂದು

ಉತ್ತಮ ಸಮಯವೂ ಹೌದು. ನವರಾತ್ರಿಯಲ್ಲಿ ಪ್ರತಿ ದಿನವೂ ವಿಶಿಷ್ಟವಾಗಿ ಕಾಣಿಸಿಕೊಳ್ಳಲು ಇಲ್ಲೊಂದು ಮಾಹಿತಿ ಇದೆ.


ಪ್ರತಿಪದ – ಬಿಳಿ

ನವರಾತ್ರಿಯ ಆರಂಭವನ್ನು ಬಿಳಿ ಆಭರಣ ಧರಿಸುವ ಮೂಲಕ ಮಾಡಿ. ಸುಂದರವಾದ ಬಿಳಿ ಹವಳಗಳನ್ನು ಹೊಂದಿರುವ ಉದ್ದ

ಹಾರವನ್ನು ಪ್ರಕಾಶಮಾನವಾದ ಬಣ್ಣಗಳನ್ನು ಹೊಂದಿರುವ ವಸ್ತುಗಳ ಜೊತೆಗೆ ಜೋಡಿಸಿದಾಗ ಸುಂದರವಾಗಿ ಕಾಣಿಸುತ್ತದೆ. ಇದು

ನಿಮ್ಮ ಸೌಂದರ್ಯವನ್ನು ಅದ್ಭುತಗೊಳಿಸುತ್ತದೆ.

ಹವಳಗಳು ನಿಮ್ಮ ಸ್ಟೈಲ್ ಅಲ್ಲದಿದ್ದರೆ, ಪೋಲ್ಕಿ ಆಭರಣವನ್ನು ಧರಿಸಿ.


ದ್ವಿತೀಯ – ಕೆಂಪು

ರೂಬಿ ಕೆಂಪು ಡ್ಯಾಂಗ್ಲರ್‌ಗಳು ಮತ್ತು ಚೋಕರ್ ಹಾರಗಳಿಂದ ನವರಾತ್ರಿಯ ಎರಡನೇ ದಿನವನ್ನು ಸಂಭ್ರಮಿಸಿ. ಬಣ್ಣದ

ಆಭರಣವನ್ನು ಹೈಲೈಟ್ ಮಾಡುವುದಕ್ಕಾಗಿ ಬಿಳಿಯನ್ನೂ ಇದರ ಜೊತೆಗೆ ಬಳಸಬಹುದು. ನಿಮ್ಮ ನೃತ್ಯದ ವೇಳೆ ಸುಂದರ ಧ್ವನಿಯನ್ನು

ಹೊಮ್ಮಿಸುವುದಕ್ಕಾಗಿ ಕೆಂಪು ಮತ್ತು ಚಿನ್ನದ ಬಳೆಗಳನ್ನು ಜೊಡಿಸಿಕೊಳ್ಳಲು ಮರೆಯಬೇಡಿ.


ತೃತೀಯ – ನೀಲಿ

ರಾಯಲ್ ಬ್ಲ್ಯೂ ಆಭರಣದಿಂದ ಈ ರಾತ್ರಿಯ ಆಸೆಯನ್ನು ಅನುಭವಿಸಿ. ಅದ್ಭುತ ಬ್ಲ್ಯೂ ಸಫೈರ್‌ಗೆ ಬೇರೆ ಯಾವುದೂ ಸಾಟಿ ಇಲ್ಲ.

ಸುಂದರವಾದ ಸಫೈರ್ ನೆಕ್‌ಲೇಸ್‌ ಜೊತೆಗೆ ಸುಂದರವಾದ ಡ್ಯಾಂಗ್ಲರ್‌ಗಳ ಸೆಟ್‌ ಅದ್ಭುತವಾಗಿ ಕಾಣಿಸುತ್ತದೆ.


ಚತುರ್ಥಿ – ಹಳದಿ

ಪ್ರಖರ ತಿಳಿಗುಲಾಬಿ ಅಥವಾ ಹಚ್ಚ ಹಸಿರು ವಸ್ತುವನ್ನು ಧರಿಸುವುದಕ್ಕೆ ನೀವು ಯೋಚಿಸುತ್ತಿದ್ದರೆ, ನಿಮ್ಮ ಸೌಂದರ್ಯಕ್ಕೆ

ಹೊಂದುವಂತೆ ಹಳದಿ ಸಫೈರ್ ರಾಶಿ ಕಲ್ಲನ್ನು ಧರಿಸುವಂತೆ ನಾವು ನಿಮಗೆ ಸಲಹೆ ಮಾಡುತ್ತೇವೆ. ಹಳದಿ ಸಫೈರ್ ಪದಕ ಮತ್ತು ಜಿಲೆ

ಹಾಗೂ ಬಳೆಗಳನ್ನು ಬಳಸಿ ಸರಳವಾಗಿಸಿ.


ಪಂಚಮಿ – ಹಸಿರು

ಈ ರಾತ್ರಿಯೊಂದು ಅಮೂಲ್ಯ ಎಮರಾಲ್ಡ್‌ಗಳನ್ನು ಬಳಸಿ ಸುಂದರವಾದ ನೆಕ್‌ಲೇಸ್‌ ಧರಿಸಿ. ಉದ್ದನೆಯ ಡ್ಯಾಂಗ್ಲರ್‌ಗಳು ಅಥವಾ

ಜಿಡೊಲೆ ಸ್ಟಡ್‌ಗಳನ್ನು ಬಳಸಿ ಈ ಸೌಂದರ್ಯವನ್ನು ಉನ್ನತೀಕರಿಸಿ. ನಿಮ್ಮ ಮೆಚ್ಚಿನ ಆಭರಣಕ್ಕೆ ಹೊಂದುವಂತೆ ಪಾಸ್ಟೆಲ್

ಉಡುಪುಗಳನ್ನು ಇದರ ಜೊತೆಗೆ ಸೇರಿಸಿಕೊಳ್ಳಬಹುದು.


ಷಷ್ಠಿ – ನವರತ್ನ

ಹಬ್ಬದ ವೈವಿಧ್ಯಮಯ ಬಣ್ಣಗಳನ್ನು ಆಸ್ವಾದಿಸಿ. ಈ ದಿನ ಬೂದು ಬಣ್ಣಕ್ಕೆ ಮೀಸಲಾಗಿದ್ದರೂ, ನವರಾತ್ರಿಯ ನವರಸದೊಂದಿಗೆ

ಇನ್ನಷ್ಟು ಪ್ರಕಾಶಮಾನವಾಗಿಸುವಂತೆ ನಾವು ಸಲಹೆ ಮಾಡುತ್ತೇವೆ. ನವರತ್ನಗಳ ಕಲೆಕ್ಷನ್‌ನಿಂದ ನಿಮ್ಮ ನೆಚ್ಚಿನ ಆಭರಣವನ್ನು ಆಯ್ಕೆ

ಮಾಡಿ. ಇದರಲ್ಲಿ ಕಿವಿಯೋಲೆಗಳು, ನೆಕ್‌ಲೇಸ್‌ಗಳು, ದಪ್ಪರಿಂಗ್ ಗಳು ಮತ್ತು ಬಳೆಗಳಿವೆ.


ಸಪ್ತಮಿ – ಕಿತ್ತಳೆ

ಈ ರಾತ್ರಿ ನೇರಳೆ ಉಡುಪುಗಳನ್ನು ಧರಿಸುವ ಯೋಜನೆ ಹೊಂದಿದ್ದರೆ, ನಿಮಗೆ ಸರಿ ಹೊಂದುವ ಆಭರಣ ನಮ್ಮಲ್ಲಿದೆ. ಗಾರ್ನೆಟ್

ರಾಶಿ ಕಲ್ಲನ್ನು ಧರಿಸಿ. ಇದು ನಿಮ್ಮ ಕಾಂಟ್ರಾಸ್ಟ್‌ಗೆ ಸರಿಯಾಗಿ ಹೊಂದುತ್ತದೆ ಮತ್ತು ನಿಮ್ಮೊಳಗಿನ ಪ್ರಖರತೆಯನ್ನು ಪ್ರತಿಬಿಂಬಿಸುತ್ತದೆ.


ಅಷ್ಟಮಿ – ತಿಳಿ ಹಸಿರು


ಈ ರಾತ್ರಿಯಂದು ಪೆರಿಡಾಟ್ ಜೆಮ್‌ಸ್ಟೋನ್‌ ನಿಮಗೆ ಒಪ್ಪುತ್ತದೆ. ರಾಯಲ್ ಬ್ಲ್ಯು ಸೀರೆ ಅಥವಾ ಕುರ್ತಾಗೆ ಜೋಡಿ ಮಾಡುವುದಕ್ಕೆ

ದೊಡ್ಡ ಮತ್ತು ಬೋಲ್ಡ್ ಪೀಸ್ ಆಯ್ಕೆ ಮಾಡಿಕೊಳ್ಳಿ. ಅದೇ ಬಣ್ಣದ ಬಳೆಗಳನ್ನು ಧರಿಸಿ. ತೆಳ್ಳನೆಯ ಚಿನ್ನದ ಬಳೆಗಳು ಇರಲಿ.

ನವಮಿ – ತಿಳಿಗುಲಾಬಿ

ಇದು ಹಬ್ಬದ ಕೊನೆಯ ರಾತ್ರಿ. ಎಲ್ಲರೂ ಶುಭ್ರ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಆದರೆ, ನೀವು ಇದಕ್ಕೆ

ತದ್ವಿರುದ್ಧವಾಗಿ ಕಾಣಿಸಿಕೊಳ್ಳಬಹುದು. ಸುಂದರ ಪಿಂಕ್‌ ಸಫೈರ್‌ ಆಯ್ಕೆ ಮಾಡಿ. ಉದ್ದನೆಯ ಡ್ಯಾಂಗ್ಲರ್ ಕಿವಿಯೋಲೆಗಳು, ಪಿಂಕ್

ಸಫೈರ್‌ಗಳನ್ನು ಧರಿಸಿ. ಇದು ನಿಮಗೆ ಅದ್ಭುತವಾಗಿ ಕಾಣಿಸುತ್ತದೆ.


ಈ ನವರಾತ್ರಿಯಲ್ಲಿ ನಿಮ್ಮ ಎಲ್ಲ ದಿನಗಳ ಮಾರ್ಗದರ್ಶಿ ಇದು. ದುರ್ಗಾ ಮಾತೆ ನಿಮ್ಮನ್ನು ಹರಸಲಿ.ನವರಾತ್ರಿ ನವರಸ