My Kalyan Mini Store, Jalahalli Cross, Bangalore

1-39-5/2, SV Complex, MSM Road
Bangalore- 560015

080-66084463

Call Now

Opens at

<All Articles

ತಾಯಂದಿರ ದಿನ

ನನ್ನ ಲ್ಯಾಪ್‌ಟಾಪ್‌ನ ಎದುರು ನಾನು ಕುಳಿತು ಕಣ್ಣುಜ್ಜಿಕೊಂಡು ಸ್ಕ್ರೀನ್‌ ನೋಡುತ್ತಾ ಕೀಬೋರ್ಡ್‌ ಕುಟ್ಟುತ್ತಿರುವಾಗ, ಬಿಸಿ
ಚಹಾದ ಜೊತೆಗೆ ಆಕೆ ಬಂದು ಒಮ್ಮೆ ಮುಗುಳ್ನಕ್ಕರೆ ಎಂಥ ಚಿಂತೆಯೂ ಒಮ್ಮೆ ನಿರಾಳವಾದಂತೆನಿಸುತ್ತದೆ.

“ಅಮ್ಮಾ, ನೀನ್ಯಾಕೆ ಬಂದೆ! ನಾನೇ ಬಂದು ತೆಗೆದುಕೊಳ್ಳುತ್ತಿದ್ದೆ” ಎಂದು ದಿವ್ಯವಾದ ಚಹಾವನ್ನು ಹೀರುತ್ತಾ ನಾನು ಹೇಳಿದೆ.

“ಆಯ್ತು ಮಗೂ. ನನಗೆ ಚಹಾ ಮಾಡಿಕೊಳ್ತಾ ಇದ್ದೆ. ಹಾಗೇ ನಿನಗೂ ಒಂದು ಕಪ್ ಮಾಡಿದೆ” ಎನ್ನುತ್ತಾ ಆಕೆ ಇದೇನೂ ದೊಡ್ಡ
ಕೆಲಸವಲ್ಲ ಎಂಬಂತೆ ನೋಟ ಬೀರಿದಳು.

“ಇಷ್ಟೆಲ್ಲ ಹೇಗೆ ಮಾಡ್ತೀಯಾ ಅಮ್ಮಾ?” ನನಗೆ ಇದು ಒಂದು ಅಚ್ಚರಿಯಾಗಿತ್ತು.

“ಏನು ಮಗೂ? ಚಹಾ ಮಾಡೋದಾ?” ಆಕೆ ಅಪ್ರಯತ್ನವಾಗಿ ನಕ್ಕಳು.

“ಇಷ್ಟೆಲ್ಲ ಕೆಲಸವನ್ನು ಹೇಗೆ ಮಾಡ್ತೀಯಾ. ಯಾರ ಕಾಳಜಿಯನ್ನು ಯಾವಾಗ ಮತ್ತು ಹೇಗೆ ತೆಗೆದುಕೊಳ್ಳಬೇಕು… ಇದು ಅಮ್ಮನ
ಸೂಪರ್ ಪವರ್‌ ಎಂದೆಲ್ಲ ನನಗೆ ಹೇಳಬೇಡ.”

“ಉತ್ತರ ನಿನ್ನ ಹತ್ತಿರವೇ ಇದೆ!” ಎಂದು ಆಕೆ ನಕ್ಕಳು. “ಮನೆಯ ಜವಾಬ್ದಾರಿ ಭುಜದ ಮೇಲೆ ಬಿದ್ದಾಗ, ಇದೆಲ್ಲ ಮಾಡೋದನ್ನು
ನೀನು ಕಲೀತೀಯಾ.

ಇದೆಲ್ಲವನ್ನೂ ನೀನು ನನ್ನ ಕೈಗೆ ಬಂದಾಗಿನಿಂದಲೂ ಮಾಡುತ್ತಿದ್ದೇನೆ. ನಿನಗೆ ಯಾವಾಗ ಹಸಿವಾಗುತ್ತದೆ, ಬೇಸರವಾಗುತ್ತದೆ,
ಖುಷಿಯಾಗುತ್ತದೆ, ದುಃಖವಾಗುತ್ತದೆ ಎಂದು ನನಗೆ ಗೊತ್ತು. ಮಕ್ಕಳ ಬಗ್ಗೆ ತಾಯಂದಿರ ಆತ್ಮ ಅತ್ಯಂತ ಸೂಕ್ಷ್ಮವಾಗಿರುತ್ತದೆ
ಎಂಬುದು ನಿಜ.

ನೀವು ಒಂದು ಕುಟುಂಬದಲ್ಲಿ ಹೆಣ್ಣಾದಾಗ, ಯಾವುದೇ ಹಂತದಲ್ಲಾದರೂ ಸರಿ ಕುಟುಂಬದ ಎಲ್ಲ ಸದಸ್ಯರ ತಾಯಿಯಾಗಿರುತ್ತೀರಿ.
ಅಗತ್ಯವಿದ್ದಾಗ ಸಹಾಯ ಮಾಡುವುದು, ಅಳಲು ಭುಜ ಕೊಡುವುದು ಅಥವಾ ಸುಮ್ಮನೆ ಜೊತೆಗಿರುವುದು ಎಲ್ಲವನ್ನೂ ನೀವು
ಮಾಡುತ್ತೀರಿ. ರುಚಿಕರ ತಿಂಡಿಯನ್ನು ಮಾಡುವುದಷ್ಟೇ ತಾಯ್ತನದ ಗುರುತಲ್ಲ. ಅದಕ್ಕಿಂತ ಹೆಚ್ಚು ಸಂಕೀರ್ಣವಾದ ಸಂಗತಿ ಇದು.”
“ಹಾಗಾದರೆ, ನಿನ್ನ ಕಾಳಜಿ ವಹಿಸುವವರು ಯಾರು?”

“ನನ್ನ ಕುಟುಂಬ. ನನಗೆ ಬೇಸರವಾದಾಗ ಅವರು ಖುಷಿಪಡಿಸುತ್ತಾರೆ. ಖುಷಿಯ ಸಮಯದಲ್ಲಿ ನನ್ನೊಂದಿಗೆ ಸಂತೋಷಪಡುತ್ತಾರೆ.
ಇಂಥದ್ದೊಂದು ಕುಟುಂಬವನ್ನು ಹೊಂದಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ” ಎಂದು ಆಕೆ ಮುಗುಳ್ನಕ್ಕಳು.

ಅದೆಂಥಾ ಸುಂದರ ನಗು! ಇಂಥ ಅಮ್ಮನನ್ನು ಪಡೆದಿದ್ದು ನನ್ನ ಅದೃಷ್ಟ. ಇಂಥ ಸಮಯ ಇನ್ನೊಮ್ಮೆ ಸಿಗುವುದಿಲ್ಲ ಎಂದು ಭಾವಿಸಿ
ನಾನು ಪೀಠಿಕೆ ಹಾಕಿದೆ. “ಅಮ್ಮಾ, ನಿನಗೆ ಒಂದು ಅಚ್ಚರಿ ಇದೆ. ಇಲ್ಲೇ ಇರು.”
ಆಕೆಯ ಮುಖದಲ್ಲಿ ಅಚ್ಚರಿ ಕಾಣಿಸುತ್ತಿತ್ತು. ತಲೆಯಾಡಿಸಿದಳು.

ಇಂದು ಅಮ್ಮಂದಿರ ದಿನ. ಹಲವು ದಿನಗಳ ಹಿಂದೆಯೇ ಆಕೆಯ ಮೆಚ್ಚಿನ ಉಡುಗೊರೆಯನ್ನು ನಾನು ಖರೀದಿಸಿ ಇಟ್ಟಿದ್ದೆ. ಇದನ್ನು
ಆಕೆಗೆ ಅಚ್ಚರಿಯ ರೂಪದಲ್ಲಿ ಕೊಡೋಣ ಎಂದು ನಿರ್ಧರಿಸಿದ್ದೆ.

ತೆಳ್ಳನೆಯ ಕಡುಗುಲಾಬಿ ಬಣ್ಣದ ಬಾಕ್ಸ್‌ನಲ್ಲಿ ನಾನು ಆಕೆಗೆ ಉಡುಗೊರೆಯನ್ನು ತಂದಾಗ ಆಕೆಯ ಕಣ್ಣರಳಿತ್ತು. ಇದು
ಏನಾಗಿರಬಹುದು ಎಂದು ಆಕೆಗೆ ಊಹೆಯಾಗಿತ್ತು. “ಕಲ್ಯಾಣ್‌ ಜ್ಯುವೆಲ್ಲರ್ಸ್‌” ಎಂದು ಬರೆದಿದ್ದ ಆಯತಾಕಾರದ ಬಾಕ್ಸ್‌ ಅನ್ನು
ನಾನು ತೆರೆದೆ. ಆಕೆಗೆ ಅದರೊಳಗಿದ್ದ ಆಭರಣವನ್ನು ತೋರಿಸಿದೆ.

“ಓ ದೇವರೇ! ಅದ್ಭುತವಾಗಿ ಮಗೂ!” ಆಕೆ ಅಚ್ಚರಿಯಿಂದ ಹೇಳುತ್ತಾ, ಮೆತ್ತನೆಯ ವೆಲ್ವೆಟ್‌ ಬಾಕ್ಸ್‌ನಲ್ಲಿ ಕುಳಿತಿದ್ದ ಅಲಂಕೃತ
ಚಿನ್ನದ ನೆಕ್‌ಲೇಸ್‌ ಅನ್ನು ನೋಡಿದಳು. ಆಕೆಗೆ ಆಭರಣ ಇಷ್ಟ. ಅದರಲ್ಲೂ ನೆಕ್‌ಲೇಸ್‌ ಆಕೆಗೆ ಇಷ್ಟ.

“ತಾಯಂದಿರ ದಿನದ ಶುಭಾಶಯಗಳು ಅಮ್ಮಾ! ನಿನಗೆ ಇದು ಇಷ್ಟವಾಯಿಯೇ? ಪ್ರಾಮಾಣಿಕವಾಗಿ ಹೇಳು.”

“ನನಗೆ ತುಂಬಾ ಇಷ್ಟವಾಯಿತು ಮಗೂ. ಆದರೆ ಬೇಡವಾಗಿತ್ತು. ತುಂಬಾ ದೊಡ್ಡ ಮೊತ್ತದ್ದರ ಹಾಗೆ ಕಾಣಿಸುತ್ತದೆ. ಯಾಕೆ
ಸುಮ್ಮನೆ ಅನಗತ್ಯ ಖರ್ಚು?”

“ನಂಗೊತ್ತು, ಇದನ್ನೇ ನೀನು ಹೇಳ್ತೀಯಾ ಅಂತ. ಇದೇ ಕಾರಣಕ್ಕೆ ಸರ್ಪ್ರೈಸ್‌ ಆಗಿ ನಿನಗೆ ತಂದುಕೊಟ್ಟೆ.”

ಆಕೆ ಮತ್ತೊಮ್ಮೆ ನಕ್ಕಳು. ಆನಂದಭಾಷ್ಪ ಆಕೆಯ ಕಣ್ಣಂಚಿನಲ್ಲಿ ಮೂಡುತ್ತಿತ್ತು. ನನ್ನ ಇಡೀ ಕುಟುಂಬದ ಖುಷಿಗೆ ಆಕೆ
ಕಾರಣವಾದರೂ, ಆಕೆ ತಾನು ಏನೂ ಅಲ್ಲ ಎಂಬಂತೆ ಅತ್ಯಂತ ಸರಳವಾಗಿ ಇದ್ದಳು. ನನ್ನ ಅಮ್ಮ ನಿಜಕ್ಕೂ ಸೂಪರ್‌ವಿಮೆನ್‌.
ತಾಯ್ತನ ಎಂಬುದು ಅದ್ಭುತವಾದ ಸಂಗತಿ.

Can we help you?