My Kalyan Mini Store, Jalahalli Cross, Bangalore

1-39-5/2, SV Complex, MSM Road
Bangalore- 560015

080-66084463

Call Now

Opens at

<All Articles

ಪುರುಷರಿಗಾಗಿ ಆಭರಣ

ಆಭರಣ ಮಾರುಕಟ್ಟೆಯಲ್ಲಿ ಮಹಿಳೆಯರಿಗೇ ಪ್ರಾಧಾನ್ಯತೆ ಇದ್ದರೂ, ಪುರುಷರಿಗೂ ಹಲವು ಆಭರಣದ ಆಯ್ಕೆಗಳು ಲಭ್ಯವಿರುತ್ತವೆ. ಪ್ರಾಚೀನ ಭಾರತದಲ್ಲಿ, ರಾಜ ಮನೆತನದ ಪುರುಷರು ತಮ್ಮ ಸಾಮಾಜಿಕ ಸ್ಥಾನಮಾನಕ್ಕೆ ಅನುಗುಣವಾಗಿ ಆಭರಣವನ್ನು ಧರಿಸುತತಿದ್ದರು. ರಾಜಕರು, ರಾಣಿಯರು ಮತ್ತು ರಾಜಮನೆತನದವರು ಹವಳಗಳು, ಮಾಣಿಕ್ಯ ಹಾಗೂ ಇತರ ಅಮೂಲ್ಯ ಹರಳುಗಳನ್ನು ಧರಿಸುತ್ತಿದ್ದರು. ಇದನ್ನು ಬೆಳ್ಳಿ ಅಥವಾ ಚಿನ್ನದ ದಾರಗಳಲ್ಲಿ ಪೋಣಿಸಲಾಗಿರುತ್ತಿತ್ತು. ಜನಸಾಮಾನ್ಯರು ತಾಮ್ರದಲ್ಲಿ ಪೋಣಿಸಿದ ಕಡಿಮೆ ದರ್ಜೆಯ ಹರಳುಗಳನ್ನು ಧರಿಸುತ್ತಿದ್ದರು. ಚಿನ್ನದ ಕಿರೀಟಗಳಿಗೆ ಅಲಂಕರಿಸಿದ ಮಾಣಿಕ್ಯಗಳು, ಚಿನ್ನ ಮತ್ತು ವಜ್ರದ ಕಿವಿಯೋಲೆಗಳು ಹಾಗೂ ಸರಗಳು ಮತ್ತು ನೆಕ್‌ಲೇಸ್‌ಗಳು, ಅಲಂಕರಿಸಿದ ಕತ್ತಿ ಹಿಡಿಕೆಗಳ ಮೂಲಕ ಪ್ರಾಚೀನ ಕಾಲದ ಭಾರತೀಯರು ಫ್ಯಾಷನ್‌ ಬಗ್ಗೆ ವಿಶೇಷ ಆಸ್ಥೆ ವಹಿಸಿದ್ದರು.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಪ್ರಭಾವದ ನಂತರದಲ್ಲಿ, ಪುರುಷರ ಫ್ಯಾಷನ್‌ನಲ್ಲಿ ಕ್ರಾಂತಿ ಉಂಟಾಯಿತು. ಪುರುಷರು ಬಳಸುವ ಆಭರಣಗಳು ಕಡಿಮೆಯಾದವು. ತಲೆಮಾರು ಸಾಗಿದಂತೆ, ಪುರುಷರ ಫ್ಯಾಷನ್‌ನಲ್ಲಿ ಸ್ಟೈಲ್‌ಮತ್ತು ಟ್ರೆಂಡ್‌ ಕೂಡಾ ಹಲವು ಬದಲಾವಣೆಗಳನ್ನು ಕಂಡಿವೆ. ಇಂದು ಫಾರ್ಮಲ್‌ ದಿರಿಸುಗಳಾದ ಸೂಟ್‌ ಮತ್ತು ಟ್ರಸರ್‌ಗಳಿಗೆ ಅತ್ಯಂತ ಸುಂದರವಾಗಿ ಚಿನ್ನದ ಅಥವಾ ಪ್ಲಾಟಿನಮ್‌ನ ಬ್ರೇಸ್‌ಲೆಂಟ್‌ನಿಂದ ಅಲಂಕಾರ ಮಾಡಲಾಗುತ್ತದೆ. ಸುಂದರ ಪ್ಲಾಟಿನಂ ಕಫ್‌ ಲಿಂಕ್‌ಗಳು ಮತ್ತು ಸರಳ ಚಿನ್ನ ಅಥವಾ ಪ್ಲಾಟಿನಮ್‌ ರಿಂಗ್‌ಗಳಿಂದಲೂ ಅಲಂಕರಿಸಲಾಗುತ್ತದೆ. ವಿವಾಹದ ಬ್ಯಾಂಡ್‌ ಕೂಡಾ ಪುರುಷರಿಗೆ ಸಾಮಾನ್ಯವಾಗಿ ಹೊಂದುವ ಆಭರಣವಾಗಿದೆ. ಸರಳವಾಗಿದ್ದರೂ, ವಿವಾಹದ ರಿಂಗ್‌ಗಳಲ್ಲಿ ಪುರುಷರಿಗೆ ಹಲವು ಆಯ್ಕೆಗಳಿರುತ್ತವೆ. ಚಿನ್ನ, ಪ್ಲಾಟಿನಂ, ಎರಡೂ ಲೋಹಗಳ ಮಿಶ್ರಣ ಹಾಗೂ ಸಣ್ಣ ವಜ್ರಗಳ ಸಹಿತ ಆಯ್ಕೆಗಳು ಲಬ್ಯವಿರುತ್ತವೆ.
ಫಾರ್ಮಲ್‌ ಆಗಿರಲಿ ಅಥವಾ ಸಾಂಪ್ರದಾಯಿಕ ದಿರಿಸು ಧರಿಸಲಿ, ಹಲವು ಪುರುಷರಿಗೆ ವಜ್ರದ ಸ್ಟಡ್‌ಗಳು ಮೆಚ್ಚಿನ
ಆಯ್ಕೆಯಾಗಿದೆ.

ಸಾಂಪ್ರದಾಯಿಕ ದಿರಿಸಿನ ವಿಚಾರದಲ್ಲಿ, ಆಭರಣದ ಆಯ್ಕೆಗಳು ಹೆಚ್ಚಿರುತ್ತವೆ. ಉದ್ದನೆಯ ಶೆರ್ವಾನಿ ಜೊತೆಗೆ ಉದ್ದನೆಯ ಹವಳ ಅಥವಾ ಹರಳು ನೆಕ್‌ಲೇಸ್‌ಗಳು ಅಥವಾ ಹುಲಿಯ ಉಗುರಿನಾಕೃತಿಯ ಲೋಲಕ ಹೊಂದಿರುವ ಚಿನ್ನದ ಚೈನ್‌ ಸಹಿತ ಬಿಳಿ ಧೋತಿ ಮತ್ತು ಬಿಳಿ ಶರ್ಟ್‌, ಎಲ್ಲ ಒಂಬತ್ತು ವಿಭಿನ್ನ ಅಮೂಲ್ಯ ಹವಳಗಳನ್ನು ಹೊಂದಿರುವ ನವರತ್ನ ರಿಂಗ್‌ ಸೇರಿದಂತೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ಕೊನೆಗೂ, ಆಭರಣದಿಂದ ಅಲಂಕರಿಸಿಕೊಳ್ಳುವುದು ವೈಯಕ್ತಿಕ ಆಯ್ಕೆ. ಫ್ಯಾಷನ್‌ ಟ್ರೆಂಡ್‌ಗಳಲ್ಲಿನ ಬದಲಾವಣೆಯನ್ನು ಆಧರಿಸಿ,ವೈಯಕ್ತಿಕ ಆದ್ಯತೆಯನ್ನು ಆಧರಿಸಿ, ಅತ್ಯಂತ ಸುಂದರವಾಗಿ ಪುರುಷರಿಗೆ ಆಭರಣದಿಂದ ಅಲಂಕರಿಸಬಹುದು.

Can we help you?