My Kalyan Mini Store, Jalahalli Cross, Bangalore

1-39-5/2, SV Complex, MSM Road
Bangalore- 560015

080-66084463

Call Now

Opens at

<All Articles

ಕಚೇರಿಗೆ ತೆರಳಲು ಧರಿಸುವ ಆಭರಣ

ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ, ಆಭರಣದ ಪೆಟ್ಟಿಗೆ ಎಂಬುದು ದೊಡ್ಡದಾದ, ಬೃಹತ್ ಗಾತ್ರದ್ದಾಗಿರುತ್ತದೆ. ಇದು ಎಲ್ಲರ ಆಭರಣಗಳನ್ನೂ ತುಂಬಿಸಿಕೊಂಡಿರುತ್ತದೆ. ಸುಂದರವಾದ ನೆಕ್‌ಲೇಸ್‌ನಿಂದ ಕಣ್ಸೆಳೆಯುವ ವಜ್ರದ ಕಿವಿಯೋಲೆಗಳವರೆಗೆ ಎಲ್ಲವೂ ಇದರಲ್ಲಿರುತ್ತವೆ. ಆದರೆ, ಈ ಆಭರಣಗಳು ಅಪರೂಪದ ಸನ್ನಿವೇಶಗಳಾದ ವಿವಾಹ ಮತ್ತು ಸಮಾರಂಭಕ್ಕೆ ಮಾತ್ರ ಇರುತ್ತವೆ. ಇವುಗಳನ್ನು ನಿತ್ಯ ದಿರಿಸಿನ ಜೊತೆಗೆ ಅಥವಾ ಕಚೇರಿ ದಿರಿಸಿನ ಜೊತೆಗೂ ಧರಿಸಬಹುದಾಗಿದೆ.

ಕಚೇರಿಯಲ್ಲಿ ಸ್ಟೈಲ್‌ ವಿಷಯದಲ್ಲಿ ಪ್ರತಿ ಮಹಿಳೆಯೂ ವಿಶಿಷ್ಟ ಹಾಗೂ ಸುಂದರವಾಗಿ ಕಾಣಿಸಬೇಕು ಎಂದು ಬಯಸುತ್ತಾರೆ.ಉತ್ತಮವಾಗಿ ಡ್ರೆಸ್ ಮಾಡಿಕೊಳ್ಳುವುದು ನಿಮ್ಮನ್ನು ನಿಮ್ಮ ಗುರಿಯ ಕಡೆಗೆ ಅರ್ಧ ದಾರಿಗೆ ಸಾಗಿಸುತ್ತದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿಯೆಂದರೆ, ದಿರಿಸಿನ ಜೊತೆಗೆ ಸೂಕ್ತವಾದ ಆಭರಣವನ್ನು ಆಯ್ಕೆ ಮಾಡುವುದೂ ಅತ್ಯಂತ ಅಗತ್ಯದ್ದಾಗಿರುತ್ತದೆ. ನಿಮ್ಮ ಕಚೇರಿ ದಿರಿಸಿನ ಆಭರಣವನ್ನು ಆಯ್ಕೆ ಮಾಡುವುದು ಹೇಗೆ ಎಂಬ ಬಗ್ಗೆ ಕೆಲವು ಸಲಹೆಗಳನ್ನು ನಾನು ಇಲ್ಲಿ ನಿಮಗೆ ನೀಡಲು ಬಯಸುತ್ತೇನೆ.

ಮೊದಲ ಮತ್ತು ಅತ್ಯಂತ ಪ್ರಮುಖ ಸಂಗತಿಯೆಂದರೆ, ದೊಡ್ಡ ಮತ್ತು ಭಾರವಾದ ಇಯರ್‌ರಿಂಗ್‌ಗಳು, ನೆಕ್‌ಲೇಸ್ ಗಳು ಅಥವಾ ಬ್ರೇಸ್‌ಲೆಟ್‌ಗಳನ್ನು ಆಯ್ಕೆ ಮಾಡಬಾರದು. ಇದರ ಬದಲಿಗೆ, ವಜ್ರ ಅಥವಾ ಹವಳಗಳನ್ನು ಒಳಗೊಂಡ ಸರಳವಾದ ಚೈನ್‌ಗಳು ಅಥವಾ ನೆಕ್‌ಲೇಸ್‌ಗಳನ್ನು ಆಯ್ಕೆ ಮಾಡಿ.

ಕಚೇರಿ ವಾತಾವರಣದಲ್ಲಿ ಹೊಳೆಯುವ ಆಭರಣಗಳು ಅಥವಾ ನೀವು ಕೈ ಮಾಡಿದಾಗಲೆಲ್ಲ ಸದ್ದು ಮಾಡುವ ಬಳಕೆಗಳನ್ನು ಧರಿಸುವುದು ಉತ್ತಮವಲ್ಲ. ಮ್ಯಾಟ್ ಫಿನಿಶ್ ಅಥವಾ ಮಂದ ಫಿನಿಶ್‌ನ ಆಭರಣವನ್ನು ಬಳಸಿ. ಉದಾಹರಣೆಗೆ ವೈಟ್ ಗೋಲ್ಡ್‌, ರೋಸ್ ಗೋಲ್ಡ್‌, ಯೆಲ್ಲೋ ಗೋಲ್ಡ್‌ ಅಥವಾ ರೈನ್‌ಸ್ಟೋನ್‌ಗಳ ಬದಲಿಗೆ ಪ್ಲಾಟಿನಂ ಬಳಸಿ. ಸಣ್ಣ ವಜ್ರಗಳನ್ನು ಅಳವಡಿಸಿದ ಸುಂದರವಾದ ಬ್ರೇಸ್‌ಲೆಟ್‌ಗಳು, ಸದ್ದು ಮಾಡುವ ಬಳೆಗಳಿಗೆ ಉತ್ತಮ ಪರ್ಯಾಯವಾಗಿರುತ್ತವೆ.

ಟ್ರೆಂಡಿ ಆಭರಣದ ವಿಚಾರಕ್ಕೆ ಬಂದರೆ “ಅತಿ ಕಡಿಮೆಯೇ ಉತ್ತಮ” ಎಂಬುದು ಸಾರ್ವತ್ರಿಕ ಮಂತ್ರ. ಕಚೇರಿ ಆಭರಣದ ವಿಚಾರಕ್ಕೆ ಬಂದರೆ ಇದು ಇನ್ನಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ಹವಳ ಅಥವಾ ವಜ್ರ ಅಳವಡಿಸಿದ ಕಿವಿಯೋಲೆಗಳು, ತೆಳ್ಳನೆಯ ಸಾಲಿನಲ್ಲಿ ವಜ್ರಗಳನ್ನು ಅಳವಡಿಸಿದ ಬ್ರೇಸ್‌ಲೆಟ್‌ಗಳು, ಸುಂದರ ಜಾಮೆಟ್ರಿ ಪದಕಗಳನ್ನು ಹೊಂದಿರುವ ಚೈನ್‌ಗಳು ಇತ್ಯಾದಿಯು ಉತ್ತಮವಾಗಿ ಕಾಣಿಸುತ್ತವೆ.

ಕಚೇರಿಯಲ್ಲಿನ ಈವೆಂಟ್‌ಗಳು ಅಥವಾ ಪಾರ್ಟಿಗಳ ವಿಚಾರದಲ್ಲಿ, ಬೋಲ್ಡ್‌ ಆಗುವುದು ಉತ್ತಮ. ಹೊಳೆಯುವ ನೆಕ್‌ಪೀಸ್ ಅಥವಾ ಸುಂದರವಾದ ಟಾಸೆಲ್‌ ಇಯರ್‌ರಿಂಗ್‌ಗಳಂತಹ ಕಣ್ಮನ ಸೆಳೆಯುವ ಆಭರಣವು ಎಂದಿಗೂ ಮೆಚ್ಚುಗೆಯಾಗುತ್ತವೆ.ಕಚೇರಿಗೆ ತೆರಳಲು ಧರಿಸುವ ಆಭರಣ

Can we help you?