My Kalyan Mini Store, Jalahalli Cross, Bangalore

1-39-5/2, SV Complex, MSM Road
Bangalore- 560015

080-66084463

Call Now

Opens at

<All Articles

ಯುವ ಜನತೆಯಲ್ಲಿ ಬದಲಾದ ಆಭರಣ ಟ್ರೆಂಡ್‌ಗಳು

ಪ್ರಸ್ತುತ ತಲೆಮಾರಿನಲ್ಲಿ ಯುವ ಜನಾಂಗವು ಆದಾಯ ಗಳಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 25-40 ವರ್ಷ ವಯಸ್ಸಿನ ಈ
ಜನಾಂಗ ಯಾವುದೇ ಆರ್ಥಿಕತೆಯ ಆಧಾರ ಸ್ತಂಭ. ಅದರಲ್ಲೂ ಭಾರತದ ಜನಸಂಖ್ಯೆಯಲ್ಲಿ ಯುವ ಜನಾಂಗದ ಪ್ರಮಾಣವೇ
ಹೆಚ್ಚಿದೆ. ಯುವ ಜನಾಂಗವನ್ನು ವಿವರಿಸುವ ಹಲವು ಗುಣಲಕ್ಷಣಗಳಿವೆ. ಇಂದಿನ ಯುವ ಜನಾಂಗದವರ ವರ್ತನೆ ಮತ್ತು ಅರಿವನ್ನು
ಹಲವು ಸಂಗತಿಗಳು ಪ್ರಭಾವಿಸುತ್ತವೆ. ಆದಾಯ ಗಳಿಸುವ ಯುವ ಜನತೆ ಹೂಡಿಕೆಯನ್ನೂ ಮಾಡಬೇಕಿರುತ್ತದೆ. ಇಂತಹ
ಸಂದರ್ಭದಲ್ಲಿ, ಚಿನ್ನ ಅತ್ಯಂತ ಸುರಕ್ಷಿತ ವಿಧಾನ ಮತ್ತು ಯಾವುದೇ ತಲೆಮಾರಿನವರೂ ಇದನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ.

ಫ್ಯಾಷನ್ ಮತ್ತು ಆಭರಣದಲ್ಲಿ ಯುವ ಜನತೆ ಉತ್ತಮ ಆಸಕ್ತಿಯನ್ನೂ ಹೊಂದಿದ್ದಾರೆ. ತಮ್ಮ ಸ್ಟೈಲ್‌, ಆದ್ಯತೆ ಮತ್ತು ಟ್ರೆಂಡ್‌ಗೆ
ಹೊಂದುವ ಆಭರಣವನ್ನು ಖರೀದಿಸುವ ಮೂಲಕ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಕೊಲ್ಲಬಹುದು. ಈಗ ಟ್ರೆಂಡ್
ಆಗಿರುವ ಕೆಲವು ಆಭರಣಗಳೆಂದರೆ ಹಲವು ಕೊಂಡಿಗಳು ಇರುವ ಚೈನ್‌ಗಳು, ಹವಳದ ಆಭರಣ, ಹಗುರ ವಜ್ರದ ಆಭರಣ,
ನಿಮ್ಮ ಮೆಚ್ಚಿನ ಬಣ್ಣದ ವಜ್ರದ ಆಭರಣಗಳು ಇತ್ಯಾದಿ.

ಯುವಜನತೆಯಲ್ಲಿನ ಸಾಮಾನ್ಯ ಗುಣಲಕ್ಷಣವೆಂದರೆ ಕಡಿಮೆ ಆಭರಣವನ್ನು ಧರಿಸುವುದು. ಈ ವಿಧಾನವನ್ನು ಇಂದಿನ
ಯುವಜನತೆ ಮೆಚ್ಚಿಕೊಂಡಿದೆ. ಶೈಲಿಯುತ ಆಭರಣದಲ್ಲಿ ಈ ಯುವ ಜನತೆಯದ್ದೇ ವಿಶಿಷ್ಟ ಆದ್ಯತೆಯೂ ಇದೆ. ಇವರು ಹಲವು
ರೀತಿಯ ಆಭರಣವನ್ನು ಖರೀದಿಸಲು ಬಯಸುತ್ತಾರೆ. ಆದರೆ, ಕಲಾತ್ಮಕತೆ ವಿಚಾರಕ್ಕೆ ಬಂದಾಗ ಅವರು ಸರಳತೆಯನ್ನು
ಬಯಸುತ್ತಾರೆ. ಸರಳ ಟಸೆಲ್ ಇಯರ್‌ರಿಂಗ್‌ಗಳು, ಹಗುರ ಮತ್ತು ಫ್ಯಾನ್ಸಿ ರೋಸ್ಗೋಲ್ಡ್ ಆಭರಣ, ಸರಳ ಹವಳದ ಸ್ಟಡ್‌ಗಳು,
ಹವಳದ ನೆಕ್‌ಲೇಸ್‌ಗಳು, ಹಗುರ ಚೈನ್‌ಗಳು ಹಾಗೂ ಅಲಂಕಾರಿಕ ಪದಕಗಳು ಇತ್ಯಾದಿ ಈಗ ಟ್ರೆಂಡ್ ಆಗಿದೆ. “ಕಡಿಮೆಯೇ
ಹೆಚ್ಚು” ಎಂಬ ಮಂತ್ರವನ್ನು ಪಠಿಸುವ ಇವುಗಳನ್ನು ಒಂದಕ್ಕೊಂದು ಹೊಂದಿಕೆ ಮಾಡಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಜಾಮೆಟ್ರಿ ಪ್ಯಾಟರ್ನ್‌ಗಳನ್ನು ಹೊಂದಿರುವ ಆಭರಣಗಳು ಹಲವರಿಗೆ ಮೆಚ್ಚುಗೆಯಾಗುತ್ತಿವೆ. ಸ್ಟಡ್‌ಗಳು,
ಡ್ರಾಪ್‌ಗಳು, ವಜ್ರದ ಕಿವಿಯೋಲೆಗಳು, ಪದಕಗಳು ಅಥವಾ ಬ್ರೇಸ್‌ಲೆಟ್‌ಗಳು, ಜಾಮಿಟ್ರಿ ವಿನ್ಯಾಸಗಳಲ್ಲಿಯೂ ಇದನ್ನು
ಬಳಸಬಹುದು. ಇದು ಯಾವುದೇ ದಿರಿಸಿಗೆ ಹೊಂದಿಕೆಯಾಗುತ್ತದೆ.

ಈ ಸರಳ ಸುಂದರ ಆಭರಣಗಳನ್ನು ಧರಿಸುವ ಒಂದು ಆಸಕ್ತಿಕರ ಸಂಗತಿಯೆಂದರೆ, ಅವುಗಳನ್ನು ಒಂದರ ಮೇಲೊಂದು
ಧರಿಸುವುದು. ಜೀನ್ಸ್‌ ಹಾಗೂ ಟಿ ಶರ್ಟ್‌ ಧರಿಸಿದರೂ, ಬ್ಯುಸಿನೆಸ್ ಸೂಟ್‌ಗಳನ್ನು ಧರಿಸಿದರೂ ಎಲ್ಲರೂ ಇದನ್ನು
ಧರಿಸಿರುವುದನ್ನು ನೀವು ನೋಡಬಹುದು. ಹಲವು ತೆಳ್ಳನೆಯ ಚೈನ್‌ಗಳನ್ನು ಧರಿಸುವುದರಿಂದ, ಜನರನ್ನು ಗಮನವನ್ನು
ಸೆಳೆಯಬಹುದು. ಬ್ರೇಸ್‌ಲೆಟ್‌ಗಳು ಹಾಗೂ ಬಳೆಗಳಲ್ಲೂ ಈ ಸ್ಟೈಲ್ ಅನ್ನು ಅನುಕರಿಸಬಹುದು.

ವಧುವಿನ ದಿರಿಸಿನ ವಿಚಾರಕ್ಕೆ ಬಂದರೆ, ಯುವಜನತೆ ಹೆಚ್ಚು ಬಯಸುವುದು ಹೆಚ್ಚು ಬಾಳಿಕೆ ಬರುವ ಆಭರಣಗಳನ್ನಾಗಿದೆ. ಇದನ್ನು
ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರಿಸಲಾಗುವುದರಿಂದ, ಇದಕ್ಕೆ ಒಂದು ಭಾವನೆಯೂ ಲಗತ್ತಿಸಲಾಗಿರುತ್ತದೆ. ವಧುವಿನ
ಫ್ಯಾಷನ್‌ ಭಾವ ಮತ್ತು ವ್ಯಕ್ತಿತ್ವವು ಆಕೆ ಸುಂದರವಾದ ಕಿವಿಯೋಲೆಗಳು, ಬ್ರೇಸ್‌ಲೆಟ್‌ಗಳು, ಬಳೆಗಳು, ರಿಂಗ್‌ಗಳು ಅಥವಾ
ನೆಕ್ಲೇಸ್‌ಗಳಂತಹ ಆಭರಣವನ್ನು ಧರಿಸಿದಾಗ ವ್ಯಕ್ತವಾಗುತ್ತದೆ.

ಫ್ಯಾಷನ್ ಮತ್ತು ಆದ್ಯತೆ ವಿಚಾರದಲ್ಲಿ ಪ್ರತಿ ತಲೆಮಾರು ಕೂಡ ತಮ್ಮ ಚಿಂತನೆಯಲ್ಲಿ ವೈಶಿಷ್ಟ್ಯವನ್ನು ಹೊಂದಿರುತ್ತವೆ. ಅವರ
ದಿರಿಸು ಮತ್ತು ಆಭರಣದ ಮೂಲಕ

Can we help you?