My Kalyan Mini Store, Jalahalli Cross, Bangalore

1-39-5/2, SV Complex, MSM Road
Bangalore- 560015

080-66084463

Call Now

Opens at

<All Articles

ವಿಂಟೇಜ್‌ ಟ್ರೆಂಡ್‌ಗಳು ಮರುಕಳಿಸುತ್ತಿವೆಯೇ?

“ಓಲ್ಡ್ ಈಸ್ ಗೋಲ್ಡ್” ಇಂಗ್ಲಿಷ್‌ನಲ್ಲಿ ಇದೊಂದು ಅತ್ಯಂತ ಹಳೆಯ ಉಕ್ತಿ. ಆದರೆ, ಈ ಉಕ್ತಿಯ ಧ್ವನಿಯ ಹಾಗೆಯೇ ಇದು ಈಗಲೂ ಪ್ರಸ್ತುತವಾಗಿದೆ. ಅದರಲ್ಲೂ ವಿಶೇಷವಾಗಿ, ಕ್ಷಣ ಕ್ಷಣಕ್ಕೂ ಟ್ರೆಂಡ್‌ಗಳು ಬದಲಾಗುತ್ತಿರುವ ಫ್ಯಾಷನ್‌ ಉದ್ಯಮದಲ್ಲಿ, ಹಲವು ಟ್ರೆಂಡ್‌ಗಳು ತಮ್ಮದೇ ಒಂದು ಕಾಲವನ್ನು ಹೊಂದಿದ್ದವು. ನಂತರ ಕೆಲವು ಕಾಲದವರೆಗೆ ಅವು ಅಷ್ಟೇನೂ ಜನರಲ್ಲಿ ಬಳಕೆಗೆ ಬಾರದೇ, ನಂತರ ಮತ್ತೊಮ್ಮೆ ತಮ್ಮ ಅಸ್ತಿತ್ವವನ್ನು ತೋರಿಸಿದ್ದೂ ಇದೆ.

ವಿಂಟೇಜ್‌ ಆಭರಣದ ವಿಚಾರಕ್ಕೆ ಬಂದರೆ, ನಮ್ಮ ಪೂರ್ವಜರು ಬಳಸುತ್ತಿದ್ದ ಆಭರಣದ ವಿನ್ಯಾಸಗಳು ಈಗ ಮತ್ತೆ ಮುನ್ನೆಲೆಗೆ ಬಂದಿವೆ.
ಯಾಕೆಂದರೆ, ಕಲಾಕಾರರ ಸೂಕ್ಷ್ಮ ಕಲಾತ್ಮಕತೆಯು ವಿನ್ಯಾಸ ಮತ್ತು ಆಭರಣವನ್ನು ಅತ್ಯಂತ ಸುಂದರವಾಗಿಸುತ್ತದೆ. ಇಂತಹ ಆಭರಣಗಳು ಮಹಿಳೆಯರಿಗೆ ಅತ್ಯಂತ ಆತ್ಮೀಯವಾಗುವುದಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ, ತಲೆಮಾರಿನಿಂದ ತಲೆಮಾರಿಗೆ ಈ ಆಭರಣಗಳು ಹಸ್ತಾಂತರವಾದ ಭಾವವೇ ಆತ್ಮೀಯವಾಗುತ್ತದೆ. ವಿಶಿಷ್ಟ ಪುರಾತನ ವಿನ್ಯಾಸಗಳ ಜೊತೆಗೆ, ಪ್ರತಿ ಮಹಿಳೆಯೂ ತನ್ನ ತಾಯಿ/ಅಜ್ಜಿಯೊಂದಿಗೆ ಹೊಂದಿರುವ ಸುಮಧುರ ರಕ್ತ ಸಂಬಂಧವೂ ಇದರಲ್ಲಿ ಬೆಸೆದಿರುತ್ತದೆ. ಇಂದಿನ ಕಾಲದಲ್ಲಿ ಜನ ಪ್ರಿಯವಾಗುತ್ತಿರುವ ಕೆಲವು ವಿಂಟೇಜ್‌ ಆಭರಣಗಳನ್ನು ನಾವು ಇಲ್ಲಿ ನೋಡೋಣ.

ಗ್ರ್ಯಾಂಡ್ ಚೋಕರ್‌ಗಳು ಮತ್ತು ನೆಕ್‌ಲೇಸ್‌ಗಳಲ್ಲಿ ಕಲಾತ್ಮಕವಾಗಿ ಅಳವಡಿಸಿದ ಶುದ್ಧ, ಕಚ್ಚಾ ವಜ್ರಗಳ ಸಹಿತ ಪೋಲ್ಕಿಯಂತಹ ಅನ್‌ಕಟ್ ಆಭರಣಗಳು ಯಾವುದೇ ವಧುವಿಗೆ ಇಂದು ಅತ್ಯಂತ ಸೂಕ್ತ ಆಭರಣವಾಗಿದೆ. ಯಾಕೆಂದರೆ, ಪೋಲ್ಕಿಯು ಅತ್ಯಂತ ಆಡಂಬರವಾಗಿದ್ದು, ವಧುವಿನ ಕಡೆಗೆ ಎಲ್ಲರ ಗಮನ ಸೆಳೆಯಲು ಅತ್ಯಂತ ಸೂಕ್ತವಾಗಿದೆ.

ಯಾವುದೇ ಮಹಿಳೆಯ ಇನ್ನೊಂದು ಸಾರ್ವಕಾಲಿಕ ಮೆಚ್ಚಿನ ಆಭರಣವೆಂದರೆ ಜುಮ್ಕಿ/ಜುಮ್ಕಾ. ಭಾರತದ ಎಲ್ಲೆಡೆ ಹಲವು ದಶಕಗಳಿಂದಲೂ ಇದನ್ನು ಧರಿಸಲಾಗುತ್ತಿದೆ. ಈ ರೀತಿಯ ಆಭರಣಗಳು ಕಾಲಾತೀತವಾಗಿದ್ದು, ಆರಂಭದಿಂದಲೂ ಎಲ್ಲ ಕಾಲದ ಮಹಿಳೆಯರಿಗೂ ಇದು ಅತ್ಯಂತ ಸುಂದರವಾದ ಆಭರಣವಾಗಿ ಪರಿಗಣಿಸಲ್ಪಟ್ಟಿದೆ. ವಿವಾಹದ ಸಮಯದಲ್ಲಿ ಧರಿಸುವುದರಿಂದ ನಿತ್ಯ ಧರಿಸುವ ಪಾಶ್ಚಾತ್ಯ ಆಭರಣದವರೆಗೆ ಎಲ್ಲ ಸನ್ನಿವೇಶಕ್ಕೂ ಹೊಂದುವಂತೆ ಹಲವು ಕಲಾಕಾರರು ಮತ್ತು ಆಭರಣಕಾರರು ಈ ಜುಮ್ಕಾವನ್ನು ವಿವಿಧ ರೂಪದಲ್ಲಿ ವಿನ್ಯಾಸ ಮಾಡಿದ್ದಾರೆ.

ವಜ್ರ ಮತ್ತು ಅಮೂಲ್ಯ ಹರಳುಗಳನ್ನು ಅಳವಡಿಸಿಕೊಂಡಿರುವ ಚಿನ್ನದ ಬಳೆಗಳು ಕೂಡಾ ಕಾಲಾತೀತ ಆಭರಣಗಳು. ಇವು ಆಡಂಬರವಾಗಿರುತ್ತವೆ ಮತ್ತು ಜೋಡಿಯಲ್ಲಿ ಅಥವಾ ಒಂಟಿಯಾಗಿಯೂ ಧರಿಸುತ್ತಾರೆ. ಹಿಂದಿನ ಕಾಲದಲ್ಲಿ ಮಹಿಳೆಯರು ಹಲವು ಚಿನ್ನದ ಬಳೆಗಳನ್ನು ಧರಿಸುತ್ತಿದ್ದರು. ಆದರೆ, ಇಂದಿನ ಕಡಿಮೆ ಆಭರಣವನ್ನು ಧರಿಸುವ ಕಾಲದಲ್ಲೂ ಮಹಿಳೆಯರಿಗೆ ಈ ಬಳೆಗಳು ಆಕರ್ಷಣೀಯವಾಗಿಯೇ ಇವೆ.

ಇಂದಿನ ಮಹಿಳೆಯರಲ್ಲಿ ಅತ್ಯಂತ ಮೆಚ್ಚಿನ ಇನ್ನೊಂದು ಆಭರಣವೆಂದರೆ ಮೂಗುತಿ ರಿಂಗ್‌ಗಳು. ಬೃಹತ್‌ ಗಾತ್ರದ ರಿಂಗ್‌ಗಳಿಂದ ಆರಂಭಿಸಿ ಸಣ್ಣ ವಜ್ರದ ಬೊಟ್ಟುಗಳವರೆಗೆ ಎಲ್ಲ ರೀತಿಯ ರಿಂಗ್‌ಗಳೂ ಇಂದಿನ ಮಹಿಳೆಯರ ಮೂಗನ್ನು ಅಲಂಕರಿಸಿವೆ.

ಮಾಂಗ್‌ ಟಿಕ್ಕಾ ಎಂಬುದು ಒಂದು ಇಂಚು ಉದ್ದದ ಚಿನ್ನದ ಪದಕವಾಗಿದ್ದು, ಇದರಲ್ಲಿ ಸಾಮಾನ್ಯವಾಗಿ ಸೂಕ್ಷ್ಮ ವಿನ್ಯಾಸಕ್ಕೆ ವಜ್ರಗಳನ್ನು ಅಳವಡಿಸಿರಲಾಗುತ್ತದೆ. ಇದನ್ನು ವಿವಾಹಿತ ಮಹಿಳೆಯರು ಧರಿಸುವ ಮಂಗಳಸೂತ್ರಕ್ಕೆ ಅಳವಡಿಸಲಾಗಿರುತ್ತದೆ. ವಿಶೇಷವಾಗಿ ಉತ್ತರ ಭಾರತದ ಮಹಿಳೆಯರು ಇದನ್ನು ಧರಿಸುತ್ತಾರೆ. ಇತ್ತೀಚೆಗೆ ಈ ಆಭರಣವು ಎಲ್ಲ ಭಾರತೀಯ ಮಹಿಳೆಯರಲ್ಲೂ ಜನಪ್ರಿಯತೆ ಪಡೆಯುತ್ತಿದೆ.

ವಿಂಟೇಜ್ ಮತ್ತು ಕಲಾತ್ಮಕ ಆಭರಣದ ವಿಚಾರಕ್ಕೆ ಬಂದರೆ ಭಾರತದ ಸಂಗ್ರಹದಲ್ಲಿ ಅಪಾರ ವಿನ್ಯಾಸಗಳು ಇರುತ್ತವೆ. ಈ ಪಟ್ಟಿ ಅಗಣಿತವಾಗಿರುವುದರಿಂದ ನಾವು ಇಲ್ಲಿ ಕೆಲವು ಜನಪ್ರಿಯ ಆಭರಣಗಳನ್ನು ಮಾತ್ರ ಪಟ್ಟಿ ಮಾಡಿದ್ದೇವೆ.

Can we help you?