My Kalyan Mini Store, Jalahalli Cross, Bangalore

1-39-5/2, SV Complex, MSM Road
Bangalore- 560015

080-66084463

Call Now

Opens at

<All Articles

ಆಭರಣದ ಸ್ಟೈಲ್‌ - ನಿಮ್ಮ ವ್ಯಕ್ತಿತ್ವವನ್ನು ಸಾರಲು ಒಂದು ಸಾಧನ

ಇತರರಿಂದ ನಮ್ಮನ್ನು ವಿಭಿನ್ನ ಮತ್ತು ವಿಶಿಷ್ಟವಾಗಿಸುವುದೇ ನಮ್ಮ ವ್ಯಕ್ತಿತ್ವ. ನಾವು ಯೋಚನೆ ಮಾಡುವ ರೀತಿ, ವರ್ತಿಸುವ ರೀತಿ ಮತ್ತು ನಮ್ಮನ್ನು ನಾವು ಪ್ರಸ್ತುತಪಡಿಸಿಕೊಳ್ಳುವ ವಿಧಾನದಲ್ಲಿ ಈ ವೈಶಿಷ್ಟ್ಯ ಕಾಣಿಸಿಕೊಳ್ಳುತ್ತದೆ. ಸೂಕ್ತವಾದ ದಿರಿಸು ಮತ್ತು ಆ
ದಿರಿಸಿಗೆ ಹೊಂದುವ ಆಭರಣವು ಅತ್ಯಂತ ಸುಲಭ ಮತ್ತು ಪ್ರಮುಖ ವಿಧಾನವಾಗಿದ್ದು, ಈ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು
ಪ್ರತಿಬಿಂಬಿಸಿಕೊಳ್ಳಬಹುದು. ಈ ಸಂಯೋಜನೆಯಿಂದ ವಿಭಿನ್ನ ಸನ್ನಿವೇಶದಲ್ಲಿ ವಿಭಿನ್ನ ಭಾವವನ್ನು ಮೂಡಿಸಬಹುದು.
ಉದಾಹರಣೆಗೆ, ವಿವಾಹಕ್ಕೆ ಡ್ರೆಸ್ ಮಾಡಿಕೊಳ್ಳುವುದಕ್ಕೂ ರಜೆಯ ಪ್ರವಾಸಕ್ಕೆ ಅಥವಾ ಬ್ಯುಸಿನೆಸ್ ಮೀಟಿಂಗ್‌ಗೆ ಡ್ರೆಸ್
ಮಾಡಿಕೊಳ್ಳುವುದಕ್ಕೂ ಅಪಾರ ವ್ಯತ್ಯಾಸವಿದೆ. ಆದರೆ, ಈ ಎಲ್ಲ ದಿರಿಸಿನಲ್ಲೂ ವ್ಯಕ್ತಿಯ ವ್ಯಕ್ತಿತ್ವ ಸರಿಯಾಗಿ
ಪ್ರತಿಬಿಂಬಿತವಾಗುತ್ತದೆ.

ವ್ಯಕ್ತಿತ್ವ ಮತ್ತು ವೈಯಕ್ತಿಕ ಆದಯ್ತೆ ಮತ್ತು ಪ್ರಸ್ತುತ ಟ್ರೆಂಡ್ ಅನ್ನು ಆಧರಿಸಿ ಸ್ಟೈಲ್ ಮಾಡಿಕೊಳ್ಳುವುದು ಅತ್ಯಂತ ಆಸಕ್ತಿಕರ
ಸಂಗತಿಯಾಗಿದೆ. ಸುಲಭವಾಗಿ ಮಾತು ಬೆಳೆಸುವ ಮತ್ತು ಹೃದಯದಿಂದ ಮುಕ್ತವಾಗಿ ನಗುವ ವ್ಯಕ್ತಿಗೆ ಟಾಸೆಲ್‌
ಇಯರ್‌ರಿಂಗ್‌ಗಳು ಅಥವಾ ಜುಮ್ಕಾಗಳು ಒಪ್ಪುತ್ತವೆ. ಖುಷಿಯಾಗಿ ಓಡಾಡುವಾಗ ಇವು ಆಕರ್ಷಕವಾಗಿ ಹೊಳೆಯುತ್ತವೆ.
ಬ್ಯುಸಿನೆಸ್ ಮೀಟಿಂಗ್‌ನಲ್ಲಿದ್ದಾಗ, ನಿಮ್ಮ ಆತ್ಮವಿಶ್ವಾಸ ಮತ್ತು ಪ್ರಭೆಯು ಇಡೀ ಸಭಿಕರನ್ನು ನಿಮ್ಮತ್ತ ಆಕರ್ಷಿಸಲು ಸುಂದರ
ಆಭರಣಗಳು ಸಾಕು. ಹವಳಗಳ ಸ್ಟಡ್‌ಗಳು, ಸರಳವಾಗಿದ್ದರೂ ಕಣ್ಸೆಳೆಯುವ ಬ್ರೇಸ್‌ಲೆಟ್‌ಗಳು, ಆಕರ್ಷಕ ಜಾಮಿಟ್ರಿ
ಪ್ಯಾಟರ್ನ್ ಹೊಂದಿರುವ ಸರಳ ಕಚೇರಿ ಆಭರಣಗಳು ಈ ಸನ್ನಿವೇಶಕ್ಕೆ ಅತ್ಯಂತ ಸೂಕ್ತವಾಗಿರುತ್ತವೆ.

ಕ್ಲಾಸಿಕ್ ಆಭರಣಗಳು ಸಾಂಪ್ರದಾಯಿಕವಾಗಿರುತ್ತವೆ. ಸಾಂಪ್ರದಾಯಿಕ ಆಭರಣದ ಜೊತೆಗೆ ಸಾಂಪ್ರದಾಯಿಕ ದಿರಿಸು
ಧರಿಸುವುದು ನಿಮಗೆ ಒಪ್ಪಬಹುದು. ಇಂದಿನ ಯುವ ಜನಾಂಗವು ತಲೆಮಾರುಗಳಿಂದಲೂ ತಮ್ಮ ಕುಟುಂಬಕ್ಕೆ ಬಂದ
ಆಭರಣಗಳನ್ನು ಫ್ಯಾಷನ್ ಆಗಿ ಬಳಸುತ್ತವೆ.

ಕಲಾತ್ಮಕ ದೃಷ್ಟಿಕೋನ ಹೊಂದಿರುವವರು ಎಲ್ಲದರಲ್ಲೂ ಸ್ಪೂರ್ತಿಯನ್ನು ಕಂಡುಕೊಳ್ಳುತ್ತಾರೆ. ಆಕಾಶದ ವರ್ಣದಿಂದ ಆಧುನಿಕ
ಕಲೆಯ ವರ್ಣದ ವರೆಗೂ ಕ್ರಿಯಾಶೀಲ ಮನಸಿಗೆ ಎಲ್ಲದರಲ್ಲೂ ಸ್ಫೂರ್ತಿ ಸಿಗಬಹುದು. ಇದನ್ನು ಅವರ ಆಭರಣದ
ಸ್ಟೈಲ್‌ನಲ್ಲೂ ಕಾಣಬಹುದು. ಸಾಂಪ್ರದಾಯಿಕ ಕಲಾತ್ಮಕ ಆಭರಣದಿಂದ ಆಧುನಿಕ ಫ್ಯಾನ್ಸಿ ಆಭರಣ, ಆಕರ್ಷಕ ಪದಕ, ಸಾಂಪ್ರದಾಯಿಕ ಆಭರಣದ ತುಂಡುಗಳು ಹಾಗೂ ಸರಳ ಮತ್ತು ಹಗುರವಾದ ನಿತ್ಯ ಧರಿಸುವ ಆಭರಣಗಳು, ಪ್ರಕಾಶಮಾನ ಮತ್ತು ಬೋಲ್ಡ್ ಆಗಿರುವ ವಜ್ರದ ಆಭರಣಗಳಿಂದ ಸರಳ ಹವಳಗಳು, ಕಲಾತ್ಮಕ ವ್ಯಕ್ತಿಗೆ ಹೊಂದುತ್ತವೆ. ಇವು ಕೂಡ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳುತ್ತವೆ.

ಮದುವೆ ಇರಲಿ ಅಥವಾ ಪಾರ್ಟಿಯೇ ಇರಲಿ ಕಲಾತ್ಮಕ ಆಭರಣಗಳನ್ನು ಆತ್ಮಸ್ಥೈರ್ಯ ಇರುವ ಮಹಿಳೆಯರು ಧರಿಸುತ್ತಾರೆ.
ಇವರು ನಡೆದು ಬಂದ ಕಡೆಯಲ್ಲೆಲ್ಲ ಗಮನ ಸೆಳೆಯುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ಅಂತರ್ಮುಖಿ ಮಹಿಳೆಯರು ಸುಂದರವಾದ ಆದರೆ ಕಣ್ಣು ಕೋರೈಸದಂಥ ಆಭರಣವನ್ನು ಮತ್ತು ದಿರಿಸನ್ನು ಧರಿಸಬಹುದು.

ಎಷ್ಟು ವ್ಯಕ್ತಿತ್ವದ ವಿಧಗಳಿವೆಯೋ ಅಷ್ಟೇ ವಿಧದ ಆಭರಣಗಳೂ ಇವೆ. ಪ್ರತಿ ವ್ಯಕ್ತಿತ್ವವೂ ವಿಭಿನ್ನವಾಗಿರುವಂತೆ, ಪ್ರತಿ ಸ್ಟೈಲ್ ಕೂಡ ವಿಶಿಷ್ಟವಾಗಿದೆ ಮತ್ತು ತನ್ನದೇ ಶೈಲಿಯಲ್ಲಿ ಸುಂದರವಾಗಿದೆ.

Can we help you?