ಮಕ್ಕಳ ಆಭರಣ ಸಂಗ್ರಹಗಳು
On Mon Feb 22 00:00:00 UTC 2021
ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಎಲ್ಲರೂ ಆಭರಣಗಳನ್ನು ಇಷ್ಟ ಪಡುತ್ತಾರೆ. ಎಳೆಯ ಪ್ರಾಯದಿಂದಲೇ ನಾವು ಮಕ್ಕಳನ್ನು ಹೊಳೆಯುವ ಆಭರಣಗಳಿಂದ ಸುಂದರವಾಗಿ ಅಲಂಕರಿಸುತ್ತೇವೆ. ನಮ್ಮ ಪ್ರಾಚೀನ ಪುರಾಣ ಕಥೆಗಳಲ್ಲೂ ಹಾಗೂ ನಮ್ಮ ಅನೇಕ ಪ್ರಾಚ್ಯ ವಸ್ತುಗಳ ಉತ್ಖನನ ಸಂಗ್ರಹಗಳಲ್ಲೂ ಮಕ್ಕಳನ್ನು ಆಭರಣಗಳಿಂದ ಅಲಂಕರಿಸಿರುವ ಅನೇಕ ಪ್ರಕರಣಗಳನ್ನು ಮತ್ತು ಉದಾಹರಣೆಗಳನ್ನು ನಾವು ಶತಮಾನಗಳಿಂದಲೇ ನೋಡುತ್ತಾ ಬಂದಿದ್ದೇವೆ.
ಮುದ್ದಾದ ಮಕ್ಕಳಿಗೆ ವಿಭಿನ್ನ ಪ್ರಕಾರದ ಪುಟ್ಟ-ಪುಟ್ಟದಾದ ಆಭರಣಗಳನ್ನು ತೊಡಗಿಸಲಾಗುತ್ತದೆ ಮತ್ತು ಅವರ ಹಾಸಿಗೆಯಲ್ಲಿ ಅತ್ತಿಂದಿತ್ತ ಮುಗ್ಗಲು ಬದಲಾಯಿಸುವಾಗ ಅಥವಾ ತೆವಳುತ್ತಾ ಮನೆಯೆಲ್ಲಾ ತಿರುಗುವಾಗ ಇವರ ಕಿಲಕಿಲ ಧ್ವನಿಗಳು ಮನೆಯೆಲ್ಲಾ ಹರಡಿ ಎಲ್ಲೆಡೆ ಸಂತೋಷವನ್ನು ಚೆಲ್ಲುತ್ತದೆ. ಎಳೆಯ ಮಕ್ಕಳು ಧರಿಸುವ ಬಳೆಗಳ ನಾದ ಕೂಡಾ ಇಂಪಾಗಿ ಕೇಳಿಸುತ್ತಾ ಹೃದಯದಲ್ಲಿ ಮಧುರ ಭಾವನೆ ತುಂಬುತ್ತವೆ. ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಮುಗುವಿನ ಕಿವಿ ಚುಚ್ಚುವ ಸಮಾರಂಭವನ್ನು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ನೆಂಟರಿಷ್ಟರು ಮತ್ತು ಸ್ನೇಹಿತರನ್ನೆಲ್ಲಾ ಮನೆಗೆ ಕರೆದು ಆಚರಿಸಲಾಗುತ್ತದೆ. ಅನೇಕ ಸಮುದಾಯಗಳಲ್ಲಿ ಈ ಸಮಾರಂಭವನ್ನು ಬಾಲಕ ಮತ್ತು ಬಾಲಕಿಯರಿಬ್ಬರಿಗೂ ನೆರವೇರಿಸಲಾಗುತ್ತದೆ.
ಮಕ್ಕಳು ಬೆಳೆಯುತ್ತಿರುವಂತೆಯೇ ಬಾಲಕರು ಕುತ್ತಿಗೆಗೆ ಚೈನ್, ಕೈಗೆ ಕಂಕಣ ಅಥವಾ ಬೆರಳಿಗೆ ಉಂಗುರ ಧರಿಸಿರುತ್ತಾರೆ ಹಾಗೂ ಬಾಲಕಿಯರು ತಲೆಯಿಂದ ಕಾಲಿನ ವರೆಗೆ ಚಿನ್ನ, ವಜ್ರ ಮತ್ತು ಅಮೂಲ್ಯ ರತ್ನಗಳ ಆಭರಣಗಳನ್ನು ಧರಿಸುತ್ತಾರೆ. ಹಣೆಗೆ ಧರಿಸುವ ಆಭರಣದಿಂದ ಪ್ರಾರಂಭಿಸಿ ಕಿವಿಯೋಲೆಗಳು, ಕುತ್ತಿಗೆ ಅಲಂಕರಿಸುವ ಸರಗಳು ಮತ್ತು ನೆಕ್ಲೇಸ್ಗಳು ಮತ್ತು ಕೈಗಳಲ್ಲಿ ಸುಂದರವಾದ ಬಳೆಗಳು ಹೆಣ್ಣಿನ ಅಲಂಕಾರವನ್ನು ಹೆಚ್ಚಿಸುತ್ತದೆ. ಪುಟ್ಟ ಮಕ್ಕಳನ್ನು ಅಲಂಕರಿಸುವುದಕ್ಕಾಗಿ ಇನ್ನೂ ಅನೇಕ ಆಭರಣಗಳು ನಮ್ಮ ಪರಂಪರೆಯಲ್ಲಿವೆ.
ಹಗುರ ತೂಕದ ನೆಕ್ಲೇಸ್ಗಳು ಮತ್ತು ಅದಕ್ಕೆ ಸರಿ ಹೊಂದುವ ಕಿವಿಯೋಲೆಗಳು, ಮೂಗಿನ ನತ್ತು ಸೇರಿದಂತೆ ಅನೇಕ ಆಭರಣಗಳು ಬಾಲಕಿಯನ್ನು ಆಕರ್ಷಿಸುತ್ತವೆ. ಇವುಗಳು ಸಣ್ಣ ಆಕಾರದಿಂದ ಪ್ರಾರಂಭಿಸಿ ಸುಂದರ ಸರಗಳ ಸಾಲುಗಳಂತೆ ವಿಭಿನ್ನ ಆಕಾರಗಳಲ್ಲಿವೆ. ಇದಲ್ಲದೆ, ಚೌಕಾಕಾರ, ತ್ರಿಕೋಣಾಕಾರ, ಛತ್ರಿಯಾಕಾರಗಳಲ್ಲಿ ಬಂದಿರುವ ಕಿವಿಯೋಲೆಗಳು ಬಾಲಕಿಯರಿಂದ ಪ್ರಾರಂಭಿಸಿ ಎಲ್ಲಾ ಮಹಿಳೆಯರನ್ನು ಆಕರ್ಷಿಸುತ್ತವೆ ಹಾಗೂ ಇವುಗಳನ್ನು ಧರಿಸಿದವರು ಮತ್ತು ನೋಡುವವರಿಗೂ ಇದು ಸುಂದರವಾಗಿ ಕಾಣಿಸುತ್ತದೆ.
ಆಭರಣಗಳನ್ನು ಧರಿಸುವ ಈ ಪ್ರವೃತ್ತಿ ಮತ್ತು ಪ್ರಕ್ರಿಯೆಯನ್ನು ನಾವು ಎಲ್ಲಾ ಕಾಲಗಳಲ್ಲೂ ಉತ್ತಮವಾಗಿ ಪಾಲಿಸಿಕೊಂಡು ಬಂದಿದ್ದೇವೆ. ಸುಂದರವಾದ ಬಟ್ಟೆಗಳು ಮತ್ತು ಆಭರಣಗಳಿಂದ ಅಲಂಕೃತಗೊಂಡಿರುವ ಮಹಿಳೆಯನ್ನು ದೇವತೆ ಲಕ್ಷ್ಮಿಗೆ ಹೋಲಿಸಲಾಗುತ್ತದೆ ಮತ್ತು ಇದನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ ಎಂದು ಪರಿಗಣಿಸಲಾಗುತ್ತದೆ.
Publisher: Kalyan Jewellers