Kalyan Jewellers, 3rd Block Jayanagar, Bangalore

Plot No.4, Patalamma Temple Street, Diagonal Road
Bangalore- 560011

08046837078

Call Now

Opens at

Articles

ವಿಂಟೇಜ್‌ ಟ್ರೆಂಡ್‌ಗಳು ಮರುಕಳಿಸುತ್ತಿವೆಯೇ?

On
“ಓಲ್ಡ್ ಈಸ್ ಗೋಲ್ಡ್” ಇಂಗ್ಲಿಷ್‌ನಲ್ಲಿ ಇದೊಂದು ಅತ್ಯಂತ ಹಳೆಯ ಉಕ್ತಿ. ಆದರೆ, ಈ ಉಕ್ತಿಯ ಧ್ವನಿಯ ಹಾಗೆಯೇ ಇದು ಈಗಲೂ ಪ್ರಸ್ತುತವಾಗಿದೆ. ಅದರಲ್ಲೂ ವಿಶೇಷವಾಗಿ, ಕ್ಷಣ ಕ್ಷಣಕ್ಕೂ ಟ್ರೆಂಡ್‌ಗಳು ಬದಲಾಗುತ್ತಿರುವ ಫ್ಯಾಷನ್‌ ಉದ್ಯಮದಲ್ಲಿ, ಹಲವು ಟ್ರೆಂಡ್‌ಗಳು ತಮ್ಮದೇ ಒಂದು ಕಾಲವನ್ನು ಹೊಂದಿದ್ದವು. ನಂತರ ಕೆಲವು ಕಾಲದವರೆಗೆ ಅವು ಅಷ್ಟೇನೂ ಜನರಲ್ಲಿ ಬಳಕೆಗೆ ಬಾರದೇ, ನಂತರ ಮತ್ತೊಮ್ಮೆ ತಮ್ಮ ಅಸ್ತಿತ್ವವನ್ನು ತೋರಿಸಿದ್ದೂ ಇದೆ. ವಿಂಟೇಜ್‌ ಆಭರಣದ ವಿಚಾರಕ್ಕೆ ಬಂದರೆ, ನಮ್ಮ ಪೂರ್ವಜರು ಬಳಸುತ್ತಿದ್ದ ಆಭರಣದ ವಿನ್ಯಾಸಗಳು ಈಗ ಮತ್ತೆ ಮುನ್ನೆಲೆಗೆ ಬಂದಿವೆ. ಯಾಕೆಂದರೆ, ಕಲಾಕಾರರ ಸೂಕ್ಷ್ಮ ಕಲಾತ್ಮಕತೆಯು ವಿನ್ಯಾಸ ಮತ್ತು ಆಭರಣವನ್ನು ಅತ್ಯಂತ ಸುಂದರವಾಗಿಸುತ್ತದೆ. ಇಂತಹ ಆಭರಣಗಳು ಮಹಿಳೆಯರಿಗೆ ಅತ್ಯಂತ ಆತ್ಮೀಯವಾಗುವುದಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ, ತಲೆಮಾರಿನಿಂದ ತಲೆಮಾರಿಗೆ ಈ ಆಭರಣಗಳು ಹಸ್ತಾಂತರವಾದ ಭಾವವೇ ಆತ್ಮೀಯವಾಗುತ್ತದೆ. ವಿಶಿಷ್ಟ ಪುರಾತನ ವಿನ್ಯಾಸಗಳ ಜೊತೆಗೆ, ಪ್ರತಿ ಮಹಿಳೆಯೂ ತನ್ನ ತಾಯಿ/ಅಜ್ಜಿಯೊಂದಿಗೆ ಹೊಂದಿರುವ ಸುಮಧುರ ರಕ್ತ ಸಂಬಂಧವೂ ಇದರಲ್ಲಿ ಬೆಸೆದಿರುತ್ತದೆ. ಇಂದಿನ ಕಾಲದಲ್ಲಿ ಜನ ಪ್ರಿಯವಾಗುತ್ತಿರುವ ಕೆಲವು ವಿಂಟೇಜ್‌ ಆಭರಣಗಳನ್ನು ನಾವು ಇಲ್ಲಿ ನೋಡೋಣ. ಗ್ರ್ಯಾಂಡ್ ಚೋಕರ್‌ಗಳು ಮತ್ತು ನೆಕ್‌ಲೇಸ್‌ಗಳಲ್ಲಿ ಕಲಾತ್ಮಕವಾಗಿ ಅಳವಡಿಸಿದ ಶುದ್ಧ, ಕಚ್ಚಾ ವಜ್ರಗಳ ಸಹಿತ ಪೋಲ್ಕಿಯಂತಹ ಅನ್‌ಕಟ್ ಆಭರಣಗಳು ಯಾವುದೇ ವಧುವಿಗೆ ಇಂದು ಅತ್ಯಂತ ಸೂಕ್ತ ಆಭರಣವಾಗಿದೆ. ಯಾಕೆಂದರೆ, ಪೋಲ್ಕಿಯು ಅತ್ಯಂತ ಆಡಂಬರವಾಗಿದ್ದು, ವಧುವಿನ ಕಡೆಗೆ ಎಲ್ಲರ ಗಮನ ಸೆಳೆಯಲು ಅತ್ಯಂತ ಸೂಕ್ತವಾಗಿದೆ. ಯಾವುದೇ ಮಹಿಳೆಯ ಇನ್ನೊಂದು ಸಾರ್ವಕಾಲಿಕ ಮೆಚ್ಚಿನ ಆಭರಣವೆಂದರೆ ಜುಮ್ಕಿ/ಜುಮ್ಕಾ. ಭಾರತದ ಎಲ್ಲೆಡೆ ಹಲವು ದಶಕಗಳಿಂದಲೂ ಇದನ್ನು ಧರಿಸಲಾಗುತ್ತಿದೆ. ಈ ರೀತಿಯ ಆಭರಣಗಳು ಕಾಲಾತೀತವಾಗಿದ್ದು, ಆರಂಭದಿಂದಲೂ ಎಲ್ಲ ಕಾಲದ ಮಹಿಳೆಯರಿಗೂ ಇದು ಅತ್ಯಂತ ಸುಂದರವಾದ ಆಭರಣವಾಗಿ ಪರಿಗಣಿಸಲ್ಪಟ್ಟಿದೆ. ವಿವಾಹದ ಸಮಯದಲ್ಲಿ ಧರಿಸುವುದರಿಂದ ನಿತ್ಯ ಧರಿಸುವ ಪಾಶ್ಚಾತ್ಯ ಆಭರಣದವರೆಗೆ ಎಲ್ಲ ಸನ್ನಿವೇಶಕ್ಕೂ ಹೊಂದುವಂತೆ ಹಲವು ಕಲಾಕಾರರು ಮತ್ತು ಆಭರಣಕಾರರು ಈ ಜುಮ್ಕಾವನ್ನು ವಿವಿಧ ರೂಪದಲ್ಲಿ ವಿನ್ಯಾಸ ಮಾಡಿದ್ದಾರೆ. ವಜ್ರ ಮತ್ತು ಅಮೂಲ್ಯ ಹರಳುಗಳನ್ನು ಅಳವಡಿಸಿಕೊಂಡಿರುವ ಚಿನ್ನದ ಬಳೆಗಳು ಕೂಡಾ ಕಾಲಾತೀತ ಆಭರಣಗಳು. ಇವು ಆಡಂಬರವಾಗಿರುತ್ತವೆ ಮತ್ತು ಜೋಡಿಯಲ್ಲಿ ಅಥವಾ ಒಂಟಿಯಾಗಿಯೂ ಧರಿಸುತ್ತಾರೆ. ಹಿಂದಿನ ಕಾಲದಲ್ಲಿ ಮಹಿಳೆಯರು ಹಲವು ಚಿನ್ನದ ಬಳೆಗಳನ್ನು ಧರಿಸುತ್ತಿದ್ದರು. ಆದರೆ, ಇಂದಿನ ಕಡಿಮೆ ಆಭರಣವನ್ನು ಧರಿಸುವ ಕಾಲದಲ್ಲೂ ಮಹಿಳೆಯರಿಗೆ ಈ ಬಳೆಗಳು ಆಕರ್ಷಣೀಯವಾಗಿಯೇ ಇವೆ. ಇಂದಿನ ಮಹಿಳೆಯರಲ್ಲಿ ಅತ್ಯಂತ ಮೆಚ್ಚಿನ ಇನ್ನೊಂದು ಆಭರಣವೆಂದರೆ ಮೂಗುತಿ ರಿಂಗ್‌ಗಳು. ಬೃಹತ್‌ ಗಾತ್ರದ ರಿಂಗ್‌ಗಳಿಂದ ಆರಂಭಿಸಿ ಸಣ್ಣ ವಜ್ರದ ಬೊಟ್ಟುಗಳವರೆಗೆ ಎಲ್ಲ ರೀತಿಯ ರಿಂಗ್‌ಗಳೂ ಇಂದಿನ ಮಹಿಳೆಯರ ಮೂಗನ್ನು ಅಲಂಕರಿಸಿವೆ. ಮಾಂಗ್‌ ಟಿಕ್ಕಾ ಎಂಬುದು ಒಂದು ಇಂಚು ಉದ್ದದ ಚಿನ್ನದ ಪದಕವಾಗಿದ್ದು, ಇದರಲ್ಲಿ ಸಾಮಾನ್ಯವಾಗಿ ಸೂಕ್ಷ್ಮ ವಿನ್ಯಾಸಕ್ಕೆ ವಜ್ರಗಳನ್ನು ಅಳವಡಿಸಿರಲಾಗುತ್ತದೆ. ಇದನ್ನು ವಿವಾಹಿತ ಮಹಿಳೆಯರು ಧರಿಸುವ ಮಂಗಳಸೂತ್ರಕ್ಕೆ ಅಳವಡಿಸಲಾಗಿರುತ್ತದೆ. ವಿಶೇಷವಾಗಿ ಉತ್ತರ ಭಾರತದ ಮಹಿಳೆಯರು ಇದನ್ನು ಧರಿಸುತ್ತಾರೆ. ಇತ್ತೀಚೆಗೆ ಈ ಆಭರಣವು ಎಲ್ಲ ಭಾರತೀಯ ಮಹಿಳೆಯರಲ್ಲೂ ಜನಪ್ರಿಯತೆ ಪಡೆಯುತ್ತಿದೆ. ವಿಂಟೇಜ್ ಮತ್ತು ಕಲಾತ್ಮಕ ಆಭರಣದ ವಿಚಾರಕ್ಕೆ ಬಂದರೆ ಭಾರತದ ಸಂಗ್ರಹದಲ್ಲಿ ಅಪಾರ ವಿನ್ಯಾಸಗಳು ಇರುತ್ತವೆ. ಈ ಪಟ್ಟಿ ಅಗಣಿತವಾಗಿರುವುದರಿಂದ ನಾವು ಇಲ್ಲಿ ಕೆಲವು ಜನಪ್ರಿಯ ಆಭರಣಗಳನ್ನು ಮಾತ್ರ ಪಟ್ಟಿ ಮಾಡಿದ್ದೇವೆ.
Publisher: Kalyan Jewellers

ಆಭರಣದ ಸ್ಟೈಲ್‌ - ನಿಮ್ಮ ವ್ಯಕ್ತಿತ್ವವನ್ನು ಸಾರಲು ಒಂದು ಸಾಧನ

On
ಇತರರಿಂದ ನಮ್ಮನ್ನು ವಿಭಿನ್ನ ಮತ್ತು ವಿಶಿಷ್ಟವಾಗಿಸುವುದೇ ನಮ್ಮ ವ್ಯಕ್ತಿತ್ವ. ನಾವು ಯೋಚನೆ ಮಾಡುವ ರೀತಿ, ವರ್ತಿಸುವ ರೀತಿ ಮತ್ತು ನಮ್ಮನ್ನು ನಾವು ಪ್ರಸ್ತುತಪಡಿಸಿಕೊಳ್ಳುವ ವಿಧಾನದಲ್ಲಿ ಈ ವೈಶಿಷ್ಟ್ಯ ಕಾಣಿಸಿಕೊಳ್ಳುತ್ತದೆ. ಸೂಕ್ತವಾದ ದಿರಿಸು ಮತ್ತು ಆ ದಿರಿಸಿಗೆ ಹೊಂದುವ ಆಭರಣವು ಅತ್ಯಂತ ಸುಲಭ ಮತ್ತು ಪ್ರಮುಖ ವಿಧಾನವಾಗಿದ್ದು, ಈ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿಕೊಳ್ಳಬಹುದು. ಈ ಸಂಯೋಜನೆಯಿಂದ ವಿಭಿನ್ನ ಸನ್ನಿವೇಶದಲ್ಲಿ ವಿಭಿನ್ನ ಭಾವವನ್ನು ಮೂಡಿಸಬಹುದು. ಉದಾಹರಣೆಗೆ, ವಿವಾಹಕ್ಕೆ ಡ್ರೆಸ್ ಮಾಡಿಕೊಳ್ಳುವುದಕ್ಕೂ ರಜೆಯ ಪ್ರವಾಸಕ್ಕೆ ಅಥವಾ ಬ್ಯುಸಿನೆಸ್ ಮೀಟಿಂಗ್‌ಗೆ ಡ್ರೆಸ್ ಮಾಡಿಕೊಳ್ಳುವುದಕ್ಕೂ ಅಪಾರ ವ್ಯತ್ಯಾಸವಿದೆ. ಆದರೆ, ಈ ಎಲ್ಲ ದಿರಿಸಿನಲ್ಲೂ ವ್ಯಕ್ತಿಯ ವ್ಯಕ್ತಿತ್ವ ಸರಿಯಾಗಿ ಪ್ರತಿಬಿಂಬಿತವಾಗುತ್ತದೆ. ವ್ಯಕ್ತಿತ್ವ ಮತ್ತು ವೈಯಕ್ತಿಕ ಆದಯ್ತೆ ಮತ್ತು ಪ್ರಸ್ತುತ ಟ್ರೆಂಡ್ ಅನ್ನು ಆಧರಿಸಿ ಸ್ಟೈಲ್ ಮಾಡಿಕೊಳ್ಳುವುದು ಅತ್ಯಂತ ಆಸಕ್ತಿಕರ ಸಂಗತಿಯಾಗಿದೆ. ಸುಲಭವಾಗಿ ಮಾತು ಬೆಳೆಸುವ ಮತ್ತು ಹೃದಯದಿಂದ ಮುಕ್ತವಾಗಿ ನಗುವ ವ್ಯಕ್ತಿಗೆ ಟಾಸೆಲ್‌ ಇಯರ್‌ರಿಂಗ್‌ಗಳು ಅಥವಾ ಜುಮ್ಕಾಗಳು ಒಪ್ಪುತ್ತವೆ. ಖುಷಿಯಾಗಿ ಓಡಾಡುವಾಗ ಇವು ಆಕರ್ಷಕವಾಗಿ ಹೊಳೆಯುತ್ತವೆ. ಬ್ಯುಸಿನೆಸ್ ಮೀಟಿಂಗ್‌ನಲ್ಲಿದ್ದಾಗ, ನಿಮ್ಮ ಆತ್ಮವಿಶ್ವಾಸ ಮತ್ತು ಪ್ರಭೆಯು ಇಡೀ ಸಭಿಕರನ್ನು ನಿಮ್ಮತ್ತ ಆಕರ್ಷಿಸಲು ಸುಂದರ ಆಭರಣಗಳು ಸಾಕು. ಹವಳಗಳ ಸ್ಟಡ್‌ಗಳು, ಸರಳವಾಗಿದ್ದರೂ ಕಣ್ಸೆಳೆಯುವ ಬ್ರೇಸ್‌ಲೆಟ್‌ಗಳು, ಆಕರ್ಷಕ ಜಾಮಿಟ್ರಿ ಪ್ಯಾಟರ್ನ್ ಹೊಂದಿರುವ ಸರಳ ಕಚೇರಿ ಆಭರಣಗಳು ಈ ಸನ್ನಿವೇಶಕ್ಕೆ ಅತ್ಯಂತ ಸೂಕ್ತವಾಗಿರುತ್ತವೆ. ಕ್ಲಾಸಿಕ್ ಆಭರಣಗಳು ಸಾಂಪ್ರದಾಯಿಕವಾಗಿರುತ್ತವೆ. ಸಾಂಪ್ರದಾಯಿಕ ಆಭರಣದ ಜೊತೆಗೆ ಸಾಂಪ್ರದಾಯಿಕ ದಿರಿಸು ಧರಿಸುವುದು ನಿಮಗೆ ಒಪ್ಪಬಹುದು. ಇಂದಿನ ಯುವ ಜನಾಂಗವು ತಲೆಮಾರುಗಳಿಂದಲೂ ತಮ್ಮ ಕುಟುಂಬಕ್ಕೆ ಬಂದ ಆಭರಣಗಳನ್ನು ಫ್ಯಾಷನ್ ಆಗಿ ಬಳಸುತ್ತವೆ. ಕಲಾತ್ಮಕ ದೃಷ್ಟಿಕೋನ ಹೊಂದಿರುವವರು ಎಲ್ಲದರಲ್ಲೂ ಸ್ಪೂರ್ತಿಯನ್ನು ಕಂಡುಕೊಳ್ಳುತ್ತಾರೆ. ಆಕಾಶದ ವರ್ಣದಿಂದ ಆಧುನಿಕ ಕಲೆಯ ವರ್ಣದ ವರೆಗೂ ಕ್ರಿಯಾಶೀಲ ಮನಸಿಗೆ ಎಲ್ಲದರಲ್ಲೂ ಸ್ಫೂರ್ತಿ ಸಿಗಬಹುದು. ಇದನ್ನು ಅವರ ಆಭರಣದ ಸ್ಟೈಲ್‌ನಲ್ಲೂ ಕಾಣಬಹುದು. ಸಾಂಪ್ರದಾಯಿಕ ಕಲಾತ್ಮಕ ಆಭರಣದಿಂದ ಆಧುನಿಕ ಫ್ಯಾನ್ಸಿ ಆಭರಣ, ಆಕರ್ಷಕ ಪದಕ, ಸಾಂಪ್ರದಾಯಿಕ ಆಭರಣದ ತುಂಡುಗಳು ಹಾಗೂ ಸರಳ ಮತ್ತು ಹಗುರವಾದ ನಿತ್ಯ ಧರಿಸುವ ಆಭರಣಗಳು, ಪ್ರಕಾಶಮಾನ ಮತ್ತು ಬೋಲ್ಡ್ ಆಗಿರುವ ವಜ್ರದ ಆಭರಣಗಳಿಂದ ಸರಳ ಹವಳಗಳು, ಕಲಾತ್ಮಕ ವ್ಯಕ್ತಿಗೆ ಹೊಂದುತ್ತವೆ. ಇವು ಕೂಡ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳುತ್ತವೆ. ಮದುವೆ ಇರಲಿ ಅಥವಾ ಪಾರ್ಟಿಯೇ ಇರಲಿ ಕಲಾತ್ಮಕ ಆಭರಣಗಳನ್ನು ಆತ್ಮಸ್ಥೈರ್ಯ ಇರುವ ಮಹಿಳೆಯರು ಧರಿಸುತ್ತಾರೆ. ಇವರು ನಡೆದು ಬಂದ ಕಡೆಯಲ್ಲೆಲ್ಲ ಗಮನ ಸೆಳೆಯುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ಅಂತರ್ಮುಖಿ ಮಹಿಳೆಯರು ಸುಂದರವಾದ ಆದರೆ ಕಣ್ಣು ಕೋರೈಸದಂಥ ಆಭರಣವನ್ನು ಮತ್ತು ದಿರಿಸನ್ನು ಧರಿಸಬಹುದು. ಎಷ್ಟು ವ್ಯಕ್ತಿತ್ವದ ವಿಧಗಳಿವೆಯೋ ಅಷ್ಟೇ ವಿಧದ ಆಭರಣಗಳೂ ಇವೆ. ಪ್ರತಿ ವ್ಯಕ್ತಿತ್ವವೂ ವಿಭಿನ್ನವಾಗಿರುವಂತೆ, ಪ್ರತಿ ಸ್ಟೈಲ್ ಕೂಡ ವಿಶಿಷ್ಟವಾಗಿದೆ ಮತ್ತು ತನ್ನದೇ ಶೈಲಿಯಲ್ಲಿ ಸುಂದರವಾಗಿದೆ.
Publisher: Kalyan Jewellers

ಯುವ ಜನತೆಯಲ್ಲಿ ಬದಲಾದ ಆಭರಣ ಟ್ರೆಂಡ್‌ಗಳು

On
ಪ್ರಸ್ತುತ ತಲೆಮಾರಿನಲ್ಲಿ ಯುವ ಜನಾಂಗವು ಆದಾಯ ಗಳಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 25-40 ವರ್ಷ ವಯಸ್ಸಿನ ಈ ಜನಾಂಗ ಯಾವುದೇ ಆರ್ಥಿಕತೆಯ ಆಧಾರ ಸ್ತಂಭ. ಅದರಲ್ಲೂ ಭಾರತದ ಜನಸಂಖ್ಯೆಯಲ್ಲಿ ಯುವ ಜನಾಂಗದ ಪ್ರಮಾಣವೇ ಹೆಚ್ಚಿದೆ. ಯುವ ಜನಾಂಗವನ್ನು ವಿವರಿಸುವ ಹಲವು ಗುಣಲಕ್ಷಣಗಳಿವೆ. ಇಂದಿನ ಯುವ ಜನಾಂಗದವರ ವರ್ತನೆ ಮತ್ತು ಅರಿವನ್ನು ಹಲವು ಸಂಗತಿಗಳು ಪ್ರಭಾವಿಸುತ್ತವೆ. ಆದಾಯ ಗಳಿಸುವ ಯುವ ಜನತೆ ಹೂಡಿಕೆಯನ್ನೂ ಮಾಡಬೇಕಿರುತ್ತದೆ. ಇಂತಹ ಸಂದರ್ಭದಲ್ಲಿ, ಚಿನ್ನ ಅತ್ಯಂತ ಸುರಕ್ಷಿತ ವಿಧಾನ ಮತ್ತು ಯಾವುದೇ ತಲೆಮಾರಿನವರೂ ಇದನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ಫ್ಯಾಷನ್ ಮತ್ತು ಆಭರಣದಲ್ಲಿ ಯುವ ಜನತೆ ಉತ್ತಮ ಆಸಕ್ತಿಯನ್ನೂ ಹೊಂದಿದ್ದಾರೆ. ತಮ್ಮ ಸ್ಟೈಲ್‌, ಆದ್ಯತೆ ಮತ್ತು ಟ್ರೆಂಡ್‌ಗೆ ಹೊಂದುವ ಆಭರಣವನ್ನು ಖರೀದಿಸುವ ಮೂಲಕ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಕೊಲ್ಲಬಹುದು. ಈಗ ಟ್ರೆಂಡ್ ಆಗಿರುವ ಕೆಲವು ಆಭರಣಗಳೆಂದರೆ ಹಲವು ಕೊಂಡಿಗಳು ಇರುವ ಚೈನ್‌ಗಳು, ಹವಳದ ಆಭರಣ, ಹಗುರ ವಜ್ರದ ಆಭರಣ, ನಿಮ್ಮ ಮೆಚ್ಚಿನ ಬಣ್ಣದ ವಜ್ರದ ಆಭರಣಗಳು ಇತ್ಯಾದಿ. ಯುವಜನತೆಯಲ್ಲಿನ ಸಾಮಾನ್ಯ ಗುಣಲಕ್ಷಣವೆಂದರೆ ಕಡಿಮೆ ಆಭರಣವನ್ನು ಧರಿಸುವುದು. ಈ ವಿಧಾನವನ್ನು ಇಂದಿನ ಯುವಜನತೆ ಮೆಚ್ಚಿಕೊಂಡಿದೆ. ಶೈಲಿಯುತ ಆಭರಣದಲ್ಲಿ ಈ ಯುವ ಜನತೆಯದ್ದೇ ವಿಶಿಷ್ಟ ಆದ್ಯತೆಯೂ ಇದೆ. ಇವರು ಹಲವು ರೀತಿಯ ಆಭರಣವನ್ನು ಖರೀದಿಸಲು ಬಯಸುತ್ತಾರೆ. ಆದರೆ, ಕಲಾತ್ಮಕತೆ ವಿಚಾರಕ್ಕೆ ಬಂದಾಗ ಅವರು ಸರಳತೆಯನ್ನು ಬಯಸುತ್ತಾರೆ. ಸರಳ ಟಸೆಲ್ ಇಯರ್‌ರಿಂಗ್‌ಗಳು, ಹಗುರ ಮತ್ತು ಫ್ಯಾನ್ಸಿ ರೋಸ್ಗೋಲ್ಡ್ ಆಭರಣ, ಸರಳ ಹವಳದ ಸ್ಟಡ್‌ಗಳು, ಹವಳದ ನೆಕ್‌ಲೇಸ್‌ಗಳು, ಹಗುರ ಚೈನ್‌ಗಳು ಹಾಗೂ ಅಲಂಕಾರಿಕ ಪದಕಗಳು ಇತ್ಯಾದಿ ಈಗ ಟ್ರೆಂಡ್ ಆಗಿದೆ. “ಕಡಿಮೆಯೇ ಹೆಚ್ಚು” ಎಂಬ ಮಂತ್ರವನ್ನು ಪಠಿಸುವ ಇವುಗಳನ್ನು ಒಂದಕ್ಕೊಂದು ಹೊಂದಿಕೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜಾಮೆಟ್ರಿ ಪ್ಯಾಟರ್ನ್‌ಗಳನ್ನು ಹೊಂದಿರುವ ಆಭರಣಗಳು ಹಲವರಿಗೆ ಮೆಚ್ಚುಗೆಯಾಗುತ್ತಿವೆ. ಸ್ಟಡ್‌ಗಳು, ಡ್ರಾಪ್‌ಗಳು, ವಜ್ರದ ಕಿವಿಯೋಲೆಗಳು, ಪದಕಗಳು ಅಥವಾ ಬ್ರೇಸ್‌ಲೆಟ್‌ಗಳು, ಜಾಮಿಟ್ರಿ ವಿನ್ಯಾಸಗಳಲ್ಲಿಯೂ ಇದನ್ನು ಬಳಸಬಹುದು. ಇದು ಯಾವುದೇ ದಿರಿಸಿಗೆ ಹೊಂದಿಕೆಯಾಗುತ್ತದೆ. ಈ ಸರಳ ಸುಂದರ ಆಭರಣಗಳನ್ನು ಧರಿಸುವ ಒಂದು ಆಸಕ್ತಿಕರ ಸಂಗತಿಯೆಂದರೆ, ಅವುಗಳನ್ನು ಒಂದರ ಮೇಲೊಂದು ಧರಿಸುವುದು. ಜೀನ್ಸ್‌ ಹಾಗೂ ಟಿ ಶರ್ಟ್‌ ಧರಿಸಿದರೂ, ಬ್ಯುಸಿನೆಸ್ ಸೂಟ್‌ಗಳನ್ನು ಧರಿಸಿದರೂ ಎಲ್ಲರೂ ಇದನ್ನು ಧರಿಸಿರುವುದನ್ನು ನೀವು ನೋಡಬಹುದು. ಹಲವು ತೆಳ್ಳನೆಯ ಚೈನ್‌ಗಳನ್ನು ಧರಿಸುವುದರಿಂದ, ಜನರನ್ನು ಗಮನವನ್ನು ಸೆಳೆಯಬಹುದು. ಬ್ರೇಸ್‌ಲೆಟ್‌ಗಳು ಹಾಗೂ ಬಳೆಗಳಲ್ಲೂ ಈ ಸ್ಟೈಲ್ ಅನ್ನು ಅನುಕರಿಸಬಹುದು. ವಧುವಿನ ದಿರಿಸಿನ ವಿಚಾರಕ್ಕೆ ಬಂದರೆ, ಯುವಜನತೆ ಹೆಚ್ಚು ಬಯಸುವುದು ಹೆಚ್ಚು ಬಾಳಿಕೆ ಬರುವ ಆಭರಣಗಳನ್ನಾಗಿದೆ. ಇದನ್ನು ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರಿಸಲಾಗುವುದರಿಂದ, ಇದಕ್ಕೆ ಒಂದು ಭಾವನೆಯೂ ಲಗತ್ತಿಸಲಾಗಿರುತ್ತದೆ. ವಧುವಿನ ಫ್ಯಾಷನ್‌ ಭಾವ ಮತ್ತು ವ್ಯಕ್ತಿತ್ವವು ಆಕೆ ಸುಂದರವಾದ ಕಿವಿಯೋಲೆಗಳು, ಬ್ರೇಸ್‌ಲೆಟ್‌ಗಳು, ಬಳೆಗಳು, ರಿಂಗ್‌ಗಳು ಅಥವಾ ನೆಕ್ಲೇಸ್‌ಗಳಂತಹ ಆಭರಣವನ್ನು ಧರಿಸಿದಾಗ ವ್ಯಕ್ತವಾಗುತ್ತದೆ. ಫ್ಯಾಷನ್ ಮತ್ತು ಆದ್ಯತೆ ವಿಚಾರದಲ್ಲಿ ಪ್ರತಿ ತಲೆಮಾರು ಕೂಡ ತಮ್ಮ ಚಿಂತನೆಯಲ್ಲಿ ವೈಶಿಷ್ಟ್ಯವನ್ನು ಹೊಂದಿರುತ್ತವೆ. ಅವರ ದಿರಿಸು ಮತ್ತು ಆಭರಣದ ಮೂಲಕ
Publisher: Kalyan Jewellers

ಕಚೇರಿಗೆ ತೆರಳಲು ಧರಿಸುವ ಆಭರಣ

On
ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ, ಆಭರಣದ ಪೆಟ್ಟಿಗೆ ಎಂಬುದು ದೊಡ್ಡದಾದ, ಬೃಹತ್ ಗಾತ್ರದ್ದಾಗಿರುತ್ತದೆ. ಇದು ಎಲ್ಲರ ಆಭರಣಗಳನ್ನೂ ತುಂಬಿಸಿಕೊಂಡಿರುತ್ತದೆ. ಸುಂದರವಾದ ನೆಕ್‌ಲೇಸ್‌ನಿಂದ ಕಣ್ಸೆಳೆಯುವ ವಜ್ರದ ಕಿವಿಯೋಲೆಗಳವರೆಗೆ ಎಲ್ಲವೂ ಇದರಲ್ಲಿರುತ್ತವೆ. ಆದರೆ, ಈ ಆಭರಣಗಳು ಅಪರೂಪದ ಸನ್ನಿವೇಶಗಳಾದ ವಿವಾಹ ಮತ್ತು ಸಮಾರಂಭಕ್ಕೆ ಮಾತ್ರ ಇರುತ್ತವೆ. ಇವುಗಳನ್ನು ನಿತ್ಯ ದಿರಿಸಿನ ಜೊತೆಗೆ ಅಥವಾ ಕಚೇರಿ ದಿರಿಸಿನ ಜೊತೆಗೂ ಧರಿಸಬಹುದಾಗಿದೆ. ಕಚೇರಿಯಲ್ಲಿ ಸ್ಟೈಲ್‌ ವಿಷಯದಲ್ಲಿ ಪ್ರತಿ ಮಹಿಳೆಯೂ ವಿಶಿಷ್ಟ ಹಾಗೂ ಸುಂದರವಾಗಿ ಕಾಣಿಸಬೇಕು ಎಂದು ಬಯಸುತ್ತಾರೆ.ಉತ್ತಮವಾಗಿ ಡ್ರೆಸ್ ಮಾಡಿಕೊಳ್ಳುವುದು ನಿಮ್ಮನ್ನು ನಿಮ್ಮ ಗುರಿಯ ಕಡೆಗೆ ಅರ್ಧ ದಾರಿಗೆ ಸಾಗಿಸುತ್ತದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿಯೆಂದರೆ, ದಿರಿಸಿನ ಜೊತೆಗೆ ಸೂಕ್ತವಾದ ಆಭರಣವನ್ನು ಆಯ್ಕೆ ಮಾಡುವುದೂ ಅತ್ಯಂತ ಅಗತ್ಯದ್ದಾಗಿರುತ್ತದೆ. ನಿಮ್ಮ ಕಚೇರಿ ದಿರಿಸಿನ ಆಭರಣವನ್ನು ಆಯ್ಕೆ ಮಾಡುವುದು ಹೇಗೆ ಎಂಬ ಬಗ್ಗೆ ಕೆಲವು ಸಲಹೆಗಳನ್ನು ನಾನು ಇಲ್ಲಿ ನಿಮಗೆ ನೀಡಲು ಬಯಸುತ್ತೇನೆ. ಮೊದಲ ಮತ್ತು ಅತ್ಯಂತ ಪ್ರಮುಖ ಸಂಗತಿಯೆಂದರೆ, ದೊಡ್ಡ ಮತ್ತು ಭಾರವಾದ ಇಯರ್‌ರಿಂಗ್‌ಗಳು, ನೆಕ್‌ಲೇಸ್ ಗಳು ಅಥವಾ ಬ್ರೇಸ್‌ಲೆಟ್‌ಗಳನ್ನು ಆಯ್ಕೆ ಮಾಡಬಾರದು. ಇದರ ಬದಲಿಗೆ, ವಜ್ರ ಅಥವಾ ಹವಳಗಳನ್ನು ಒಳಗೊಂಡ ಸರಳವಾದ ಚೈನ್‌ಗಳು ಅಥವಾ ನೆಕ್‌ಲೇಸ್‌ಗಳನ್ನು ಆಯ್ಕೆ ಮಾಡಿ. ಕಚೇರಿ ವಾತಾವರಣದಲ್ಲಿ ಹೊಳೆಯುವ ಆಭರಣಗಳು ಅಥವಾ ನೀವು ಕೈ ಮಾಡಿದಾಗಲೆಲ್ಲ ಸದ್ದು ಮಾಡುವ ಬಳಕೆಗಳನ್ನು ಧರಿಸುವುದು ಉತ್ತಮವಲ್ಲ. ಮ್ಯಾಟ್ ಫಿನಿಶ್ ಅಥವಾ ಮಂದ ಫಿನಿಶ್‌ನ ಆಭರಣವನ್ನು ಬಳಸಿ. ಉದಾಹರಣೆಗೆ ವೈಟ್ ಗೋಲ್ಡ್‌, ರೋಸ್ ಗೋಲ್ಡ್‌, ಯೆಲ್ಲೋ ಗೋಲ್ಡ್‌ ಅಥವಾ ರೈನ್‌ಸ್ಟೋನ್‌ಗಳ ಬದಲಿಗೆ ಪ್ಲಾಟಿನಂ ಬಳಸಿ. ಸಣ್ಣ ವಜ್ರಗಳನ್ನು ಅಳವಡಿಸಿದ ಸುಂದರವಾದ ಬ್ರೇಸ್‌ಲೆಟ್‌ಗಳು, ಸದ್ದು ಮಾಡುವ ಬಳೆಗಳಿಗೆ ಉತ್ತಮ ಪರ್ಯಾಯವಾಗಿರುತ್ತವೆ. ಟ್ರೆಂಡಿ ಆಭರಣದ ವಿಚಾರಕ್ಕೆ ಬಂದರೆ “ಅತಿ ಕಡಿಮೆಯೇ ಉತ್ತಮ” ಎಂಬುದು ಸಾರ್ವತ್ರಿಕ ಮಂತ್ರ. ಕಚೇರಿ ಆಭರಣದ ವಿಚಾರಕ್ಕೆ ಬಂದರೆ ಇದು ಇನ್ನಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ಹವಳ ಅಥವಾ ವಜ್ರ ಅಳವಡಿಸಿದ ಕಿವಿಯೋಲೆಗಳು, ತೆಳ್ಳನೆಯ ಸಾಲಿನಲ್ಲಿ ವಜ್ರಗಳನ್ನು ಅಳವಡಿಸಿದ ಬ್ರೇಸ್‌ಲೆಟ್‌ಗಳು, ಸುಂದರ ಜಾಮೆಟ್ರಿ ಪದಕಗಳನ್ನು ಹೊಂದಿರುವ ಚೈನ್‌ಗಳು ಇತ್ಯಾದಿಯು ಉತ್ತಮವಾಗಿ ಕಾಣಿಸುತ್ತವೆ. ಕಚೇರಿಯಲ್ಲಿನ ಈವೆಂಟ್‌ಗಳು ಅಥವಾ ಪಾರ್ಟಿಗಳ ವಿಚಾರದಲ್ಲಿ, ಬೋಲ್ಡ್‌ ಆಗುವುದು ಉತ್ತಮ. ಹೊಳೆಯುವ ನೆಕ್‌ಪೀಸ್ ಅಥವಾ ಸುಂದರವಾದ ಟಾಸೆಲ್‌ ಇಯರ್‌ರಿಂಗ್‌ಗಳಂತಹ ಕಣ್ಮನ ಸೆಳೆಯುವ ಆಭರಣವು ಎಂದಿಗೂ ಮೆಚ್ಚುಗೆಯಾಗುತ್ತವೆ.ಕಚೇರಿಗೆ ತೆರಳಲು ಧರಿಸುವ ಆಭರಣ
Publisher: Kalyan Jewellers

ಪುರುಷರಿಗಾಗಿ ಆಭರಣ

On
ಆಭರಣ ಮಾರುಕಟ್ಟೆಯಲ್ಲಿ ಮಹಿಳೆಯರಿಗೇ ಪ್ರಾಧಾನ್ಯತೆ ಇದ್ದರೂ, ಪುರುಷರಿಗೂ ಹಲವು ಆಭರಣದ ಆಯ್ಕೆಗಳು ಲಭ್ಯವಿರುತ್ತವೆ. ಪ್ರಾಚೀನ ಭಾರತದಲ್ಲಿ, ರಾಜ ಮನೆತನದ ಪುರುಷರು ತಮ್ಮ ಸಾಮಾಜಿಕ ಸ್ಥಾನಮಾನಕ್ಕೆ ಅನುಗುಣವಾಗಿ ಆಭರಣವನ್ನು ಧರಿಸುತತಿದ್ದರು. ರಾಜಕರು, ರಾಣಿಯರು ಮತ್ತು ರಾಜಮನೆತನದವರು ಹವಳಗಳು, ಮಾಣಿಕ್ಯ ಹಾಗೂ ಇತರ ಅಮೂಲ್ಯ ಹರಳುಗಳನ್ನು ಧರಿಸುತ್ತಿದ್ದರು. ಇದನ್ನು ಬೆಳ್ಳಿ ಅಥವಾ ಚಿನ್ನದ ದಾರಗಳಲ್ಲಿ ಪೋಣಿಸಲಾಗಿರುತ್ತಿತ್ತು. ಜನಸಾಮಾನ್ಯರು ತಾಮ್ರದಲ್ಲಿ ಪೋಣಿಸಿದ ಕಡಿಮೆ ದರ್ಜೆಯ ಹರಳುಗಳನ್ನು ಧರಿಸುತ್ತಿದ್ದರು. ಚಿನ್ನದ ಕಿರೀಟಗಳಿಗೆ ಅಲಂಕರಿಸಿದ ಮಾಣಿಕ್ಯಗಳು, ಚಿನ್ನ ಮತ್ತು ವಜ್ರದ ಕಿವಿಯೋಲೆಗಳು ಹಾಗೂ ಸರಗಳು ಮತ್ತು ನೆಕ್‌ಲೇಸ್‌ಗಳು, ಅಲಂಕರಿಸಿದ ಕತ್ತಿ ಹಿಡಿಕೆಗಳ ಮೂಲಕ ಪ್ರಾಚೀನ ಕಾಲದ ಭಾರತೀಯರು ಫ್ಯಾಷನ್‌ ಬಗ್ಗೆ ವಿಶೇಷ ಆಸ್ಥೆ ವಹಿಸಿದ್ದರು. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಪ್ರಭಾವದ ನಂತರದಲ್ಲಿ, ಪುರುಷರ ಫ್ಯಾಷನ್‌ನಲ್ಲಿ ಕ್ರಾಂತಿ ಉಂಟಾಯಿತು. ಪುರುಷರು ಬಳಸುವ ಆಭರಣಗಳು ಕಡಿಮೆಯಾದವು. ತಲೆಮಾರು ಸಾಗಿದಂತೆ, ಪುರುಷರ ಫ್ಯಾಷನ್‌ನಲ್ಲಿ ಸ್ಟೈಲ್‌ಮತ್ತು ಟ್ರೆಂಡ್‌ ಕೂಡಾ ಹಲವು ಬದಲಾವಣೆಗಳನ್ನು ಕಂಡಿವೆ. ಇಂದು ಫಾರ್ಮಲ್‌ ದಿರಿಸುಗಳಾದ ಸೂಟ್‌ ಮತ್ತು ಟ್ರಸರ್‌ಗಳಿಗೆ ಅತ್ಯಂತ ಸುಂದರವಾಗಿ ಚಿನ್ನದ ಅಥವಾ ಪ್ಲಾಟಿನಮ್‌ನ ಬ್ರೇಸ್‌ಲೆಂಟ್‌ನಿಂದ ಅಲಂಕಾರ ಮಾಡಲಾಗುತ್ತದೆ. ಸುಂದರ ಪ್ಲಾಟಿನಂ ಕಫ್‌ ಲಿಂಕ್‌ಗಳು ಮತ್ತು ಸರಳ ಚಿನ್ನ ಅಥವಾ ಪ್ಲಾಟಿನಮ್‌ ರಿಂಗ್‌ಗಳಿಂದಲೂ ಅಲಂಕರಿಸಲಾಗುತ್ತದೆ. ವಿವಾಹದ ಬ್ಯಾಂಡ್‌ ಕೂಡಾ ಪುರುಷರಿಗೆ ಸಾಮಾನ್ಯವಾಗಿ ಹೊಂದುವ ಆಭರಣವಾಗಿದೆ. ಸರಳವಾಗಿದ್ದರೂ, ವಿವಾಹದ ರಿಂಗ್‌ಗಳಲ್ಲಿ ಪುರುಷರಿಗೆ ಹಲವು ಆಯ್ಕೆಗಳಿರುತ್ತವೆ. ಚಿನ್ನ, ಪ್ಲಾಟಿನಂ, ಎರಡೂ ಲೋಹಗಳ ಮಿಶ್ರಣ ಹಾಗೂ ಸಣ್ಣ ವಜ್ರಗಳ ಸಹಿತ ಆಯ್ಕೆಗಳು ಲಬ್ಯವಿರುತ್ತವೆ. ಫಾರ್ಮಲ್‌ ಆಗಿರಲಿ ಅಥವಾ ಸಾಂಪ್ರದಾಯಿಕ ದಿರಿಸು ಧರಿಸಲಿ, ಹಲವು ಪುರುಷರಿಗೆ ವಜ್ರದ ಸ್ಟಡ್‌ಗಳು ಮೆಚ್ಚಿನ ಆಯ್ಕೆಯಾಗಿದೆ. ಸಾಂಪ್ರದಾಯಿಕ ದಿರಿಸಿನ ವಿಚಾರದಲ್ಲಿ, ಆಭರಣದ ಆಯ್ಕೆಗಳು ಹೆಚ್ಚಿರುತ್ತವೆ. ಉದ್ದನೆಯ ಶೆರ್ವಾನಿ ಜೊತೆಗೆ ಉದ್ದನೆಯ ಹವಳ ಅಥವಾ ಹರಳು ನೆಕ್‌ಲೇಸ್‌ಗಳು ಅಥವಾ ಹುಲಿಯ ಉಗುರಿನಾಕೃತಿಯ ಲೋಲಕ ಹೊಂದಿರುವ ಚಿನ್ನದ ಚೈನ್‌ ಸಹಿತ ಬಿಳಿ ಧೋತಿ ಮತ್ತು ಬಿಳಿ ಶರ್ಟ್‌, ಎಲ್ಲ ಒಂಬತ್ತು ವಿಭಿನ್ನ ಅಮೂಲ್ಯ ಹವಳಗಳನ್ನು ಹೊಂದಿರುವ ನವರತ್ನ ರಿಂಗ್‌ ಸೇರಿದಂತೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಕೊನೆಗೂ, ಆಭರಣದಿಂದ ಅಲಂಕರಿಸಿಕೊಳ್ಳುವುದು ವೈಯಕ್ತಿಕ ಆಯ್ಕೆ. ಫ್ಯಾಷನ್‌ ಟ್ರೆಂಡ್‌ಗಳಲ್ಲಿನ ಬದಲಾವಣೆಯನ್ನು ಆಧರಿಸಿ,ವೈಯಕ್ತಿಕ ಆದ್ಯತೆಯನ್ನು ಆಧರಿಸಿ, ಅತ್ಯಂತ ಸುಂದರವಾಗಿ ಪುರುಷರಿಗೆ ಆಭರಣದಿಂದ ಅಲಂಕರಿಸಬಹುದು.
Publisher: Kalyan Jewellers

ತಾಯಂದಿರ ದಿನ

On
ನನ್ನ ಲ್ಯಾಪ್‌ಟಾಪ್‌ನ ಎದುರು ನಾನು ಕುಳಿತು ಕಣ್ಣುಜ್ಜಿಕೊಂಡು ಸ್ಕ್ರೀನ್‌ ನೋಡುತ್ತಾ ಕೀಬೋರ್ಡ್‌ ಕುಟ್ಟುತ್ತಿರುವಾಗ, ಬಿಸಿ ಚಹಾದ ಜೊತೆಗೆ ಆಕೆ ಬಂದು ಒಮ್ಮೆ ಮುಗುಳ್ನಕ್ಕರೆ ಎಂಥ ಚಿಂತೆಯೂ ಒಮ್ಮೆ ನಿರಾಳವಾದಂತೆನಿಸುತ್ತದೆ. “ಅಮ್ಮಾ, ನೀನ್ಯಾಕೆ ಬಂದೆ! ನಾನೇ ಬಂದು ತೆಗೆದುಕೊಳ್ಳುತ್ತಿದ್ದೆ” ಎಂದು ದಿವ್ಯವಾದ ಚಹಾವನ್ನು ಹೀರುತ್ತಾ ನಾನು ಹೇಳಿದೆ. “ಆಯ್ತು ಮಗೂ. ನನಗೆ ಚಹಾ ಮಾಡಿಕೊಳ್ತಾ ಇದ್ದೆ. ಹಾಗೇ ನಿನಗೂ ಒಂದು ಕಪ್ ಮಾಡಿದೆ” ಎನ್ನುತ್ತಾ ಆಕೆ ಇದೇನೂ ದೊಡ್ಡ ಕೆಲಸವಲ್ಲ ಎಂಬಂತೆ ನೋಟ ಬೀರಿದಳು. “ಇಷ್ಟೆಲ್ಲ ಹೇಗೆ ಮಾಡ್ತೀಯಾ ಅಮ್ಮಾ?” ನನಗೆ ಇದು ಒಂದು ಅಚ್ಚರಿಯಾಗಿತ್ತು. “ಏನು ಮಗೂ? ಚಹಾ ಮಾಡೋದಾ?” ಆಕೆ ಅಪ್ರಯತ್ನವಾಗಿ ನಕ್ಕಳು. “ಇಷ್ಟೆಲ್ಲ ಕೆಲಸವನ್ನು ಹೇಗೆ ಮಾಡ್ತೀಯಾ. ಯಾರ ಕಾಳಜಿಯನ್ನು ಯಾವಾಗ ಮತ್ತು ಹೇಗೆ ತೆಗೆದುಕೊಳ್ಳಬೇಕು... ಇದು ಅಮ್ಮನ ಸೂಪರ್ ಪವರ್‌ ಎಂದೆಲ್ಲ ನನಗೆ ಹೇಳಬೇಡ.” “ಉತ್ತರ ನಿನ್ನ ಹತ್ತಿರವೇ ಇದೆ!” ಎಂದು ಆಕೆ ನಕ್ಕಳು. “ಮನೆಯ ಜವಾಬ್ದಾರಿ ಭುಜದ ಮೇಲೆ ಬಿದ್ದಾಗ, ಇದೆಲ್ಲ ಮಾಡೋದನ್ನು ನೀನು ಕಲೀತೀಯಾ. ಇದೆಲ್ಲವನ್ನೂ ನೀನು ನನ್ನ ಕೈಗೆ ಬಂದಾಗಿನಿಂದಲೂ ಮಾಡುತ್ತಿದ್ದೇನೆ. ನಿನಗೆ ಯಾವಾಗ ಹಸಿವಾಗುತ್ತದೆ, ಬೇಸರವಾಗುತ್ತದೆ, ಖುಷಿಯಾಗುತ್ತದೆ, ದುಃಖವಾಗುತ್ತದೆ ಎಂದು ನನಗೆ ಗೊತ್ತು. ಮಕ್ಕಳ ಬಗ್ಗೆ ತಾಯಂದಿರ ಆತ್ಮ ಅತ್ಯಂತ ಸೂಕ್ಷ್ಮವಾಗಿರುತ್ತದೆ ಎಂಬುದು ನಿಜ. ನೀವು ಒಂದು ಕುಟುಂಬದಲ್ಲಿ ಹೆಣ್ಣಾದಾಗ, ಯಾವುದೇ ಹಂತದಲ್ಲಾದರೂ ಸರಿ ಕುಟುಂಬದ ಎಲ್ಲ ಸದಸ್ಯರ ತಾಯಿಯಾಗಿರುತ್ತೀರಿ. ಅಗತ್ಯವಿದ್ದಾಗ ಸಹಾಯ ಮಾಡುವುದು, ಅಳಲು ಭುಜ ಕೊಡುವುದು ಅಥವಾ ಸುಮ್ಮನೆ ಜೊತೆಗಿರುವುದು ಎಲ್ಲವನ್ನೂ ನೀವು ಮಾಡುತ್ತೀರಿ. ರುಚಿಕರ ತಿಂಡಿಯನ್ನು ಮಾಡುವುದಷ್ಟೇ ತಾಯ್ತನದ ಗುರುತಲ್ಲ. ಅದಕ್ಕಿಂತ ಹೆಚ್ಚು ಸಂಕೀರ್ಣವಾದ ಸಂಗತಿ ಇದು.” “ಹಾಗಾದರೆ, ನಿನ್ನ ಕಾಳಜಿ ವಹಿಸುವವರು ಯಾರು?” “ನನ್ನ ಕುಟುಂಬ. ನನಗೆ ಬೇಸರವಾದಾಗ ಅವರು ಖುಷಿಪಡಿಸುತ್ತಾರೆ. ಖುಷಿಯ ಸಮಯದಲ್ಲಿ ನನ್ನೊಂದಿಗೆ ಸಂತೋಷಪಡುತ್ತಾರೆ. ಇಂಥದ್ದೊಂದು ಕುಟುಂಬವನ್ನು ಹೊಂದಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ” ಎಂದು ಆಕೆ ಮುಗುಳ್ನಕ್ಕಳು. ಅದೆಂಥಾ ಸುಂದರ ನಗು! ಇಂಥ ಅಮ್ಮನನ್ನು ಪಡೆದಿದ್ದು ನನ್ನ ಅದೃಷ್ಟ. ಇಂಥ ಸಮಯ ಇನ್ನೊಮ್ಮೆ ಸಿಗುವುದಿಲ್ಲ ಎಂದು ಭಾವಿಸಿ ನಾನು ಪೀಠಿಕೆ ಹಾಕಿದೆ. “ಅಮ್ಮಾ, ನಿನಗೆ ಒಂದು ಅಚ್ಚರಿ ಇದೆ. ಇಲ್ಲೇ ಇರು.” ಆಕೆಯ ಮುಖದಲ್ಲಿ ಅಚ್ಚರಿ ಕಾಣಿಸುತ್ತಿತ್ತು. ತಲೆಯಾಡಿಸಿದಳು. ಇಂದು ಅಮ್ಮಂದಿರ ದಿನ. ಹಲವು ದಿನಗಳ ಹಿಂದೆಯೇ ಆಕೆಯ ಮೆಚ್ಚಿನ ಉಡುಗೊರೆಯನ್ನು ನಾನು ಖರೀದಿಸಿ ಇಟ್ಟಿದ್ದೆ. ಇದನ್ನು ಆಕೆಗೆ ಅಚ್ಚರಿಯ ರೂಪದಲ್ಲಿ ಕೊಡೋಣ ಎಂದು ನಿರ್ಧರಿಸಿದ್ದೆ. ತೆಳ್ಳನೆಯ ಕಡುಗುಲಾಬಿ ಬಣ್ಣದ ಬಾಕ್ಸ್‌ನಲ್ಲಿ ನಾನು ಆಕೆಗೆ ಉಡುಗೊರೆಯನ್ನು ತಂದಾಗ ಆಕೆಯ ಕಣ್ಣರಳಿತ್ತು. ಇದು ಏನಾಗಿರಬಹುದು ಎಂದು ಆಕೆಗೆ ಊಹೆಯಾಗಿತ್ತು. “ಕಲ್ಯಾಣ್‌ ಜ್ಯುವೆಲ್ಲರ್ಸ್‌” ಎಂದು ಬರೆದಿದ್ದ ಆಯತಾಕಾರದ ಬಾಕ್ಸ್‌ ಅನ್ನು ನಾನು ತೆರೆದೆ. ಆಕೆಗೆ ಅದರೊಳಗಿದ್ದ ಆಭರಣವನ್ನು ತೋರಿಸಿದೆ. “ಓ ದೇವರೇ! ಅದ್ಭುತವಾಗಿ ಮಗೂ!” ಆಕೆ ಅಚ್ಚರಿಯಿಂದ ಹೇಳುತ್ತಾ, ಮೆತ್ತನೆಯ ವೆಲ್ವೆಟ್‌ ಬಾಕ್ಸ್‌ನಲ್ಲಿ ಕುಳಿತಿದ್ದ ಅಲಂಕೃತ ಚಿನ್ನದ ನೆಕ್‌ಲೇಸ್‌ ಅನ್ನು ನೋಡಿದಳು. ಆಕೆಗೆ ಆಭರಣ ಇಷ್ಟ. ಅದರಲ್ಲೂ ನೆಕ್‌ಲೇಸ್‌ ಆಕೆಗೆ ಇಷ್ಟ. “ತಾಯಂದಿರ ದಿನದ ಶುಭಾಶಯಗಳು ಅಮ್ಮಾ! ನಿನಗೆ ಇದು ಇಷ್ಟವಾಯಿಯೇ? ಪ್ರಾಮಾಣಿಕವಾಗಿ ಹೇಳು.” “ನನಗೆ ತುಂಬಾ ಇಷ್ಟವಾಯಿತು ಮಗೂ. ಆದರೆ ಬೇಡವಾಗಿತ್ತು. ತುಂಬಾ ದೊಡ್ಡ ಮೊತ್ತದ್ದರ ಹಾಗೆ ಕಾಣಿಸುತ್ತದೆ. ಯಾಕೆ ಸುಮ್ಮನೆ ಅನಗತ್ಯ ಖರ್ಚು?” “ನಂಗೊತ್ತು, ಇದನ್ನೇ ನೀನು ಹೇಳ್ತೀಯಾ ಅಂತ. ಇದೇ ಕಾರಣಕ್ಕೆ ಸರ್ಪ್ರೈಸ್‌ ಆಗಿ ನಿನಗೆ ತಂದುಕೊಟ್ಟೆ.” ಆಕೆ ಮತ್ತೊಮ್ಮೆ ನಕ್ಕಳು. ಆನಂದಭಾಷ್ಪ ಆಕೆಯ ಕಣ್ಣಂಚಿನಲ್ಲಿ ಮೂಡುತ್ತಿತ್ತು. ನನ್ನ ಇಡೀ ಕುಟುಂಬದ ಖುಷಿಗೆ ಆಕೆ ಕಾರಣವಾದರೂ, ಆಕೆ ತಾನು ಏನೂ ಅಲ್ಲ ಎಂಬಂತೆ ಅತ್ಯಂತ ಸರಳವಾಗಿ ಇದ್ದಳು. ನನ್ನ ಅಮ್ಮ ನಿಜಕ್ಕೂ ಸೂಪರ್‌ವಿಮೆನ್‌. ತಾಯ್ತನ ಎಂಬುದು ಅದ್ಭುತವಾದ ಸಂಗತಿ.
Publisher: Kalyan Jewellers

Can we help you?